ವಿರಾಟ್ ಯಾರು?': ಕಿಂಗ್ ಕೊಹ್ಲಿಯನ್ನು ಗೊತ್ತಿಲ್ಲವೆಂದ ಸ್ಟಾರ್ ಫುಟ್‌ಬಾಲ್ ಆಟಗಾರ
ಜುಲೈ 11 ಗುರುವಾರ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಗಳು ವಿಶ್ವದ ಮೂಲೆ ಮೂಲೆಯಲ್ಲೂ ಇದ್ದಾರೆ. ವಿರಾಟ್ ಕೊಹ್ಲಿ ಹೆಸರು ಕ್ರೀಡಾ ಜಗತ್ತಿನಲ್ಲಿ ಸದಾ ಹೊಳಪನ್ನು ತರುತ್ತದೆ.
ಹೀಗಾಗಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ವಿರಾಟ್ ಕೊಹ್ಲಿ ಚಿರಪರಿತವಾಗಿದ್ದಾರೆ. ಫುಟ್‌ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೊ ಕೂಡ ಕೊಹ್ಲಿ ಅವರನ್ನು ಹೊಗಳಿದ್ದಾರೆ.

ಆದರೆ ವಿರಾಟ್ ಕೊಹ್ಲಿಯನ್ನು ಗುರುತಿಸಲು ಸಂಪೂರ್ಣವಾಗಿರುವ ಸ್ವೀಡನ್‌ನ ಸ್ಟಾರ್ ಫುಟ್‌ಬಾಲ್ ಆಟಗಾರನ ಸಂದರ್ಶನವನ್ನು ವೀಕ್ಷಿಸಿದ ನಂತರ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿರಾಟ್ ಯಾರು?
'ಐಶೋ ಸ್ಪೀಡ್' ಎಂದು ಖ್ಯಾತಿ ಹೊಂದಿರುವ ಅಮೆರಿಕದ ಪ್ರಸಿದ್ಧ ಯುಟ್ಯೂಬರ್ ಡ್ಯಾರೆನ್ ಜೇಸನ್ ವಾಟ್ಕಿನ್ಸ್ ಜೂನಿಯರ್ ಅವರ ಸಂದರ್ಶನದಲ್ಲಿ ಸ್ವೀಡನ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ಜ್ಲಾಟನ್ ಇಬ್ರಾಹಿಮೊವಿಕ್, ವಿರಾಟ್ ಕೊಹ್ಲಿ ಯಾರೆಂದು ಗೊತ್ತಿಲ್ಲ ಎಂದಿದ್ದಾರೆ.
ವಿಡಿಯೋದಲ್ಲಿರುವ ಪ್ರಕಾರ ಕಾರಿವೊಂದರಲ್ಲಿ ಡ್ಯಾರೆನ್ ಜೇಸನ್ ವಾಟ್ಕಿನ್ಸ್ ಜೂನಿಯರ್ ಅವರು ಜ್ಲಾಟನ್ ಇಬ್ರಾಹಿಮೊವಿಕ್ ಸಂದರ್ಶನ ಮಾಡುತ್ತಿರುತ್ತಾರೆ. ಈ ವೇಳೆ ವಿರಾಟ್ ಕೊಹ್ಲಿ ಕುರಿತು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಇಬ್ರಾಹಿಮೊವಿಕ್ 'ಯಾರು, ವಿರಾಟ್ ಕೊಹ್ಲಿ?' ಎನ್ನುತ್ತಾರೆ.
ಇದನ್ನು ಕೇಳಿದ ಐಶೋ ಸ್ಪೀಡ್ ಅಸಮಾಧಾನಗೊಂಡು ವಿರಾಟ್ ಕೊಹ್ಲಿ ಯಾರು ಎಂಬುದನ್ನು ಇಬ್ರಾಹಿಮೊವಿಕ್‌ಗೆ ತಿಳಿಸಿಲು ಮುಂದಾಗುತ್ತಾರೆ. ಕೊಹ್ಲಿಯ ಫೋಟೋವನ್ನು ಸಹ ತೋರಿಸುತ್ತಾರೆ. ಆದರೇ ಇಬ್ರಾಹಿಮೊವಿಕ್ ಉತ್ತರ ಮಾತ್ರ ಒಂದೇ ಆಗಿತ್ತು.
ಬಳಿಕ ನೀವು ಅವರನ್ನು (ಕೊಹ್ಲಿ) ನೋಡಿಲ್ಲವೇ? ಐಶೋ ಸ್ಪೀಡ್ ಕೇಳಿತ್ತಾರೆ. ಆಗ 'ನಾನು ನನ್ನ ಜೀವನದಲ್ಲಿ ಕ್ರಿಕೆಟ್ ನೋಡಿಲ್ಲ. ನಾನು ಅಗೌರವ ತೋರುತ್ತಿಲ್ಲ. ಆದರೆ ನನಗೆ ವಿರಾಟ್ ಯಾರು ಎಂದು ಗೊತ್ತಿಲ್ಲ. ಇದು ಆಟಗಾರನೇ? ಎನ್ನುತ್ತಾರೆ.
ಈ ಸಂದರ್ಭದಲ್ಲಿ ಐಶೋ ಸ್ಪೀಡ್ ಅವರು ವಿರಾಟ್ ಕೊಹ್ಲಿ ಅವರನ್ನು' GOAT' ಎಂದು ಕರೆಯುವ ಮೂಲಕ ಹೊಗಳುತ್ತಾರೆ. ವಿರಾಟ್ ಕೊಹ್ಲಿ ಭಾರತದ ಸ್ಟಾರ್ ಬ್ಯಾಟರ್ ಎಂಬುದನ್ನು ಸಹಾ ಒತ್ತಿ ಹೇಳುತ್ತಾರೆ.
ಕುಟುಂಬ ಸಮೇತ ಲಂಡನ್ ತಲುಪಿದ ವಿರಾಟ್
ಟಿ20 ವಿಶ್ವಕಪ್ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಇರಲು ಲಂಡನ್ ತಲುಪಿದ್ದಾರೆ. ವಿರಾಟ್ ಲಂಡನ್ ಗೆ ಶಿಫ್ಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಟಿ20 ವಿಶ್ವಕಪ್‌ಗೂ ಮುನ್ನ ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆಯಾಗಿದ್ದರು. ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಅಕಾಯ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಿಂದ ವಿರಾಟ್ ದೂರ ಉಳಿದಿದ್ದರು.
ಬಳಿಕ ಸುಮಾರು ತಿಂಗಳು ಮೈದಾನಕ್ಕೆ ವಿರಾಟ್ ಬಂದಿರಲಿಲ್ಲ. ಇದೀಗ ಮೈದಾನದಲ್ಲಿ ಮತ್ತೆ ಕೊಹ್ಲಿಯನ್ನು ನೋಡಲು ಅಭಿಮಾನಿಗಳು ಬಹಳ ಸಮಯ ಕಾಯಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications