Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್‌ ಆಡುವಂತಿದ್ದರೆ ಐಪಿಎಲ್‌ನಲ್ಲಿ ಸುನಿಲ್ ಛೆಟ್ರಿ ಈ ತಂಡಕ್ಕೆ ಆಡುತ್ತಿದ್ದರಂತೆ!

Sunil Chetri revealed his favourite team in IPL

ಬೆಂಗಳೂರು, ಮಾರ್ಚ್ 21: ಭಾರತದತ್ತ ವಿಶ್ವದ ಫುಟ್ಬಾಲ್ ಪ್ರಿಯರು ತಿರುಗಿ ನೋಡುವಂತೆ ಮಾಡಿದ ಪ್ರತಿಭಾನ್ವಿತ ಆಟಗಾರ ಸುನಿಲ್ ಛೆಟ್ರಿ. ಸಕ್ರಿಯ ಆಟಗಾರರಲ್ಲಿ ಅಂತಾರಾಷ್ಟ್ರೀಯ ಅತ್ಯಧಿಕ ಗೋಲ್‌ ದಾಖಲೆಗಾಗಿ ಟಾಪ್‌ ಮೂರರೊಳಗೆ ಕಾಣಿಸಿಕೊಂಡು ಭಾರತೀಯರು ಬೀಗುವಂತೆ ಮಾಡಿದ್ದರು. ಛೆಟ್ರಿ ಈಗಲೂ ಅತ್ಯಧಿಕ ಅಂತಾರಾಷ್ಟ್ರೀಯ ಗೋಲ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಪೋರ್ಚುಗಲ್ ಆಟಗಾರ ಕ್ರಿಸ್ಚಿಯಾನ್ ರೊನಾಲ್ಡೋ ಇದ್ದಾರೆ.

ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌)ನಲ್ಲಿ ಬೆಂಗಳೂರು ಎಫ್‌ಸಿ ಪರ ಆಡುವ ಸುನಿಲ್ ಛೆಟ್ರಿ, ಒಂದು ವೇಳೆ ಕ್ರಿಕೆಟ್‌ ಆಡುವಂತಿದ್ದರೆ ಐಪಿಎಲ್‌ನಲ್ಲಿ ಯಾವ ತಂಡದ ಪರ ಆಡುತ್ತಿದ್ದರು? ಕ್ರಿಕೆಟ್‌ ಅಭಿಮಾನಿಗಳಲ್ಲಿದ್ದ ಈ ಪ್ರಶ್ನೆಗೆ ಸ್ವತಃ ಛೆಟ್ರಿಯೇ ಉತ್ತರಿಸಿದ್ದಾರೆ.

ಐಪಿಎಲ್‌ನಲ್ಲಿ ಸುನಿಲ್ ಛೆಟ್ರಿ ಆಡುವಂತಿದ್ದರೆ ಅವರು ಯಾವ ತಂಡದ ಪರ ಆಡಬಹುದು? ರೊನಾಲ್ಡೋ, ಮೆಸ್ಸಿಯನ್ನು ಛೆಟ್ರಿ ಮೀರಿಸಬಲ್ಲರೆ? ಈ ಪ್ರಶ್ನೆಗಳಿಗೆ ಛೆಟ್ರಿ ಉತ್ತರಿಸಿದ್ದಾರೆ.

ಯಾವ ತಂಡಕ್ಕೆ ಆಡುತ್ತೀರಿ?

ಯಾವ ತಂಡಕ್ಕೆ ಆಡುತ್ತೀರಿ?

ಒಂದುವೇಳೆ ನಿಮಗೆ ಕ್ರಿಕೆಟ್‌ ಆಡುವ ಅವಕಾಶ ಸಿಕ್ಕಿದ್ದರೆ ಐಪಿಎಲ್‌ನಲ್ಲಿ ಯಾವ ಫ್ರಾಂಚೈಸಿ ಪರ ಆಡುತ್ತಿದ್ದಿರಿ? ಎಂದು ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬರು ಛೆಟ್ರಿಯಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಛೆಟ್ರಿ ನೀಡಿದ ಉತ್ತರ ಕನ್ನಡಿಗರಿಗೆ ಹೆಮ್ಮೆ ತರುವಂತಿದೆ.

ಛೆಟ್ರಿಯ ನೆಚ್ಚಿನ ತಂಡ ಯಾವುದು?

ಛೆಟ್ರಿಯ ನೆಚ್ಚಿನ ತಂಡ ಯಾವುದು?

ಅಭಿಮಾನಿಯ ಪ್ರಶ್ನೆಗೆ ಛೆಟ್ರಿ, 'ನಾನು ಬೆಂಗಳೂರಿನ ಹುಡುಗ. ನನ್ನ ಈ ಉತ್ತರವೇ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತದೆ,' ಎಂದು ಪ್ರತಿಕ್ರಿಯಿಸಿದ್ದಾರೆ. ಅಂದರೆ ಐಪಿಎಲ್‌ನಲ್ಲಿ ಆಡಿದರೆ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುತ್ತೇನೆ ಎಂದು ಛೆಟ್ರಿ ಉತ್ತರಿಸಿದ್ದಾರೆ. ಕೊಹ್ಲಿ ನನ್ನ ಸ್ನೇಹಿತ. ಹೀಗಾಗಿ ನಾನು ಅವರ ನಾಯಕತ್ವದ ತಂಡದಲ್ಲಿ ಆಡಲು ಬಯಸುತ್ತೇನೆ ಎಂದು ಸುನಿಲ್ ಹೇಳಿದ್ದಾರೆ.

ರೊನಾಲ್ಡೋ ಸೋಲಿಸಲು ಸಾಧ್ಯವೆ?

ರೊನಾಲ್ಡೋ ಸೋಲಿಸಲು ಸಾಧ್ಯವೆ?

ಫುಟ್ಬಾಲ್ ದಂತಕತೆಗಳಾದ ಕ್ರಿಸ್ಚಿಯಾನೊ ರೊನಾಲ್ಡೋ ಮತ್ತು ಲಿಯೋನೆಲ್ ಮೆಸ್ಸಿಯನ್ನು ಸೋಲಿಸಲು ಸಾಧ್ಯವೆ ಎಂಬ ಪ್ರಶ್ನಗೆ ಉತ್ತರಿಸಿರುವ ಛೆಟ್ರಿ, 'ಕೇರಮ್‌ನಲ್ಲಿ ಸೋಲಿಸುತ್ತೇನೆ. ಇವರಿಬ್ಬರೂ ಈ ಆಟದಲ್ಲಿ ವೀಕ್‌ ಇದ್ದಾರೆ. ಹಾಗಾಗಿ, ಇದರಲ್ಲಿ ನಾನು ಮೇಲುಗೈ ಸಾಧಿಸಬಹುದು,' ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.

ಟಾಪ್ 5 ಆಟಗಾರರು

ಟಾಪ್ 5 ಆಟಗಾರರು

ಈಗ ಸಕ್ರಿಯರಾಗಿರುವ ಆಟಗಾರರಲ್ಲಿ ಅತ್ಯಧಿಕ ಗೋಲ್ ಪಟ್ಟಿಯಲ್ಲಿ 1. ಕ್ರಿಸ್ಚಿಯಾನೊ ರೊನಾಲ್ಡೋ (ಪೋರ್ಚುಗಲ್, 99 ಗೋಲ್‌ಗಳು), 2. ಸುನಿಲ್ ಛೆಟ್ರಿ (ಭಾರತ, 72 ಗೋಲ್‌ಗಳು), 3. ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ, 70 ಗೋಲ್‌ಗಳು) ಇದ್ದಾರೆ.

Story first published: Saturday, March 21, 2020, 10:54 [IST]
Other articles published on Mar 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+