SAFF Championships: ದಂತಕತೆ ಪೀಲೆ ದಾಖಲೆ ಮುರಿದ ಸುನಿಲ್ ಛೆಟ್ರಿ

ನವದೆಹಲಿ: ಮಾಲ್ಡೀವ್ಸ್‌ನ ಮಾಲೆನಲ್ಲಿ ಬುಧವಾರ (ಅಕ್ಟೋಬರ್ 14) ನಡೆದ ಸಾಫ್ (ಸೌತ್ ಏಷ್ಯನ್ ಫುಟ್ಬಾಲ್ ಫೆಡರೇಶನ್) ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಮಾಲ್ಡೀವ್ಸ್ ವಿರುದ್ಧ ಭಾರತ 3-1ರ ಗೆಲುವು ಕಂಡಿದೆ. ಇದರೊಂದಿಗೆ ಭಾರತ ಫೈನಲ್‌ಗೆ ಪ್ರವೇಶಿಸಿದೆ. ಅಲ್ಲದೆ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಬುಧವಾರದ ಪಂದ್ಯದಲ್ಲಿ ಸುನಿಲ್ ಛೆಟ್ರಿ ಜೋಡಿ ಗೋಲ್ ಗಳನ್ನು ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಪಂದ್ಯದ ಪ್ರಥಮಾರ್ಧದಲ್ಲಿ ಭಾರತದ ಮನ್ವೀರ್ ಸಿಂಗ್ 33ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಆ ಬಳಿಕ ಛೆಟ್ರಿ 62 ಮತ್ತು 71ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಗೆಲುವು ಸಾರಿದರು.
ಮಾಲ್ಡೀವ್ಸ್ ಪರ 45ನೇ ನಿಮಿಷದಲ್ಲಿ ಅಲಿ ಅಶ್ಫಕ್ ಗೋಲ್ ಬಾರಿಸಿ ಸೋಲಿನ ಅಂತರ ಕಡಿಮೆ ಮಾಡಿಕೊಂಡಿದ್ದಾರೆ. ಪಂದ್ಯದಲ್ಲಿ ಎರಡು ಗೋಲ್‌ಗಳ ನೆರವಿನಿಂದ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಗೋಲ್ ಸಂಖ್ಯೆಯಲ್ಲಿ ಬ್ರೆಝಿಲ್ ಫುಟ್ಬಾಲ್ ದಂತಕತೆ ಪೀಲೆ ದಾಖಲೆ ಮುರಿದ್ದಾರೆ.
ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಪೀಲೆ 77 ಗೋಲ್ ದಾಖಲೆ ಹೊಂದಿದ್ದಾರೆ. ಛೆಟ್ರಿ 62ನೇ ನಿಮಿಷದಲ್ಲಿ ಗೋಲ್ ಬಾರಿಸುತ್ತಲೇ ಪೀಲೆ ದಾಖಲೆ ಮುರಿದು ಹೋಗಿತ್ತು. 71ನೇ ನಿಮಿಷದಲ್ಲಿ ಗೋಲ್ ದಾಖಲಿಸಿ ಛೆಟ್ರಿ ಪೀಲೆ ದಾಖಲೆಗೂ ಮೀರಿ ಹೆಚ್ಚುವರಿ ಗೋಲ್ ಬಾರಿಸಿದರು. ಛೆಟ್ರಿ ಈಗ 79 ಅಂತಾರಾಷ್ಟ್ರೀಯ ಗೋಲ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications