ಭಾರತ ಫುಟ್ಬಾಲ್ ತಂಡಕ್ಕೆ ನೂತನ ಕೋಚ್ ನೇಮಕ, ಛೆಟ್ರಿ ಅಭಿಪ್ರಾಯ ಹೀಗಿದೆ

ಹೊಸದಿಲ್ಲಿ, ಮೇ 15: ಭಾರತ ಫುಟ್ಬಾಲ್ ತಂಡದ ಪರ ಸಾರ್ವಕಾಲಿಕ ಅತಿ ಹೆಚ್ಚು ಗೋಲ್ ಗಳಿಸಿರುವ ಆಟಗಾರ ಹಾಗೂ ನಾಯಕ ಸುನಿಲ್ ಛೆಟ್ರಿ, ಭಾರತ ತಂಡದ ನೂತನ ಕೋಚ್ ಇಟಲಿಯ ಇಗೋರ್ ಸ್ಟಿಮಾಕ್ ಬಗ್ಗೆ ಮೆಚ್ಚುಗೆಯ ಸುರಿಮಳೆ ಹರಿಸಿದ್ದಾರೆ.
ಕ್ರೊಯೇಷ್ಯಾ ಪರ ಆಡಿದ ಅನುಭವ ಹೊಂದಿರುವ ಇಗೋರ್ ಸ್ಟಿಮಾಕ್ ಬುಧವಾರ ಭಾರತ ತಂಡದ ನೂತನ ಕೋಚ್ ಆಗಿ ನೇಮಗೊಂಡಿದ್ದಾರೆ. ಸ್ಟಿಮಾಕ್ ಅವರಲ್ಲಿ ಫುಟ್ಬಾಲ್ ಕುರಿತಾದ ಅಪಾರ ಜ್ಞಾನವಿದ್ದು, ಆಟಗಾರರು ಇದರ ಪ್ರಯೋಜನ ಹೇಗೆ ಪಡೆದುಕೊಳ್ಳುತ್ತಾರೆ ಎಂಬುದು ಪ್ರಮುಖವಾಗುತ್ತದೆ ಎಂದು ನಾಯಕ ಛೆಟ್ರಿ ಅಭಿಪ್ರಾಯ ಪಟ್ಟಿದ್ದಾರೆ.
"ಇಗೋರ್ ನಮ್ಮೆದುರು ಹೆಚ್ಚು ಅನುಭವವನ್ನು ತಂದಿಡುವಂತಹ ಕೋಚ್. ಅವರೊಟ್ಟಿಗೆ ಕೆಲಸ ಮಾಡುವುದನ್ನು ಕಾತುರದಿಂದ ಎದುರು ನೋಡುತ್ತಿದ್ದೇನೆ. ಅಂದಹಾಗೆ ರಾಷ್ಟ್ರೀಯ ತಂಡಕ್ಕೆ ಇಂದು ಹಲವು ಯುವ ಪ್ರತಿಭೆಗಳು ಬರುತ್ತಿದ್ದಾರೆ. ಹೀಗಾಗಿ ಕೋಚ್ ಅವರಲ್ಲಿನ ಅನುಭವ ನಮ್ಮೆಲ್ಲರ ನೆರವಿಗೆ ಬರಲಿದೆ,'' ಎಂದು ಭಾರತ ತಂಡದ ನಾಯಕ ಹೇಳಿದ್ದಾರೆ.
"ಅವರಲ್ಲಿನ ಅನುಭವವೇ ಎಲ್ಲವನ್ನೂ ಹೇಳುತ್ತದೆ. ಅದರ ಲಾಭ ಪಡೆದುಕೊಳ್ಳುವುದು ನಮ್ಮೆಲ್ಲರ ಮೇಲಿದೆ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇದರಿಂದ ನಮ್ಮ ತಂಡ ಪ್ರದರ್ಶನ ಮಟ್ಟ ಹೆಚ್ಚಾಗಲಿದೆ ಎಂಬುದು ಅವರಿಗೆ ತಿಳಿದಿದೆ. ಭಾರತ ತಂಡ ಅವರು ನಿರ್ವಹಿಸಿರುವ ಈ ಹಿಂದಿನ ಎಲ್ಲಾ ತಂಡಗಳಿಗಿಂತಲೂ ವಿಭಿನ್ನವಾದದ್ದು,'' ಎಂದಿದ್ದಾರೆ.
ಇದೇ ವೇಳೆ ಫೆಡರೇಷನ್, ಆಟಗಾರರು ಮತ್ತು ಕೋಚ್ ಎಲ್ಲರ ಉದ್ದೇಶವು ಭಾರತ ತಂಡವನ್ನು ಪ್ರಗತಿಯ ಹಾದಿಯಲ್ಲಿ ಸಾಗುವಂತೆ ಮಾಡುವುದಾಗಿದೆ ಎಂದು ಸುನಿಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಫೆಡರೇಷನ್ (ಎಐಎಫ್‌ಎಫ್), ಭಾರತ ತಂಡವನ್ನು ಪ್ರಗತಿಯ ಪಥದಲ್ಲಿ ಸಾಗುವಂತೆ ಮಾಡುವ ಉದ್ದೇಶದಿಂದ ನೂತನ ಕೋಚ್ ನೇಮಕ ಮಾಡಿದೆ. ಇದು ಫೆಡರೇಷನ್‌ನ, ಆಟಗಾರ ಹಾಗೂ ಕೋಚ್‌ನ ಗುರಿ ಕೂಡ. ನೂತನ ಕೋಚ್‌ನೊಂದಿಗೆ ತಂಡವನ್ನು ಸಾಧ್ಯವಾದಷ್ಟು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಲಿದ್ದೇವೆ,'' ಎಂದು ಛೆಟ್ರಿ ಹೇಳಿದ್ದಾರೆ.
ಹೊಸ ಅಧ್ಯಾಯ ಆರಂಭ
"ಕೊನೆಗೂ ಹೊಸ ಪಯಣ ಶುರುವಾಗಿದೆ. ನನ್ನ ಮೇಲೆ ಭರವಸೆಯಿಟ್ಟ ಭಾರತೀಯ ಫುಟ್ಬಾಲ್‌ಗೆ ನನ್ನ ಧನ್ಯವಾದಗಳು. ನಾನು ಉತ್ಸುಕನಾಗಿದ್ದೇನೆ, ಜತೆಯಾಗಿ ಸೇರಿ ಗುರಿ ಮುಟ್ಟೋಣ. ಈ ಸುಂದರ ರಾಷ್ಟ್ರದಲ್ಲಿ ಒಗ್ಗಟ್ಟಿನಲ್ಲಿ ಮುನ್ನಡೆದರೆ ಯಶಸ್ಸು ಖಂಡಿತಾ ಸಾಧ್ಯ. ಮೈದಾನದಲ್ಲಿ ಮತ್ತು ಮೈದಾನದಿಂದಾಚೆಗೆ ಒಂದು ತಂಡವಾಗಿ ಕೆಲಸ ಮಾಡುವುದೇ ಮುಖ್ಯ. ನಮಸ್ತೇ ಫ್ರಮ್ ಕ್ರೊಯೇಷ್ಯಾ,'' ಎಂದು ಭಾರತ ತಂಡದ ನೂತನ ಕೋಚ್ ಇಗೋರ್ ಸ್ಟಿಮಾಕ್ ಟ್ವೀಟ್ ಮಾಡಿದ್ದಾರೆ.
ಭಾರತ ತಂಡದ ನೂತನ ಕೋಚ್
ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್‌ಎಫ್) ತನ್ನ ಅಧಿಕೃತ ಟ್ವಿಟರ್ ಖಾತೆ ಇಂಡಿಯನ್ ಫುಟ್ಬಾಲ್ ಮೂಲಕ ಬುಧವಾರ ಟ್ವೀಟ್ ಮಾಡುವ ಮೂಲಕ ಇಗೋರ್ ಸ್ಟಿಮಾಕ್ ಭಾರತ ತಂಡದ ನೂತನ ಕೋಚ್ ಎಂದು ಸಂದೇಶ ಸಾರಿದೆ.
ಇಗೋರ್ ಸ್ಟಿಮಾಕ್‌ಗೆ ಸ್ವಾಗತ
ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್‌ಎಫ್)ದ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಟ್ವೀಟ್ ಂಆಡುವ ಮೂಲಕ ನೂತನ ಕೋಚ್ ಇಗೋರ್ ಸ್ಟಿಮಾಕ್‌ಗೆ ಸ್ವಾಗತ ಕೋರಿದ್ದಾರೆ. "ಭಾರತ ತಂಡದ ನೂತನ ಕೋಚ್ ಇಗೋರ್ ಸ್ಟಿಮಾಕ್‌ಗೆ ಸ್ವಾಗತ. ಬ್ಲೂ ಟೈಗರ್ಸ್‌ಗೆ ಮಾರ್ಗದರ್ಶನ ನೀಡಲು ಇವರು ಸರಿಯಾದ ವ್ಯಕ್ತಿ. ಅವರಲ್ಲಿನ ಅಪಾರ ಅನುಭವ ತಂಡವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂಬ ವಿಶ್ವಾಸವಿದೆ,'' ಎಂದು ಟ್ವೀಟ್ ಮಾಡಿದ್ದಾರೆ.
ಸ್ವಾಗತ ಕೋರಿದ ಮುಂಬೈ ಸಿಟಿ ಎಫ್‌ಸಿ
"ಕ್ಲಬ್ ಪರವಾಗಿ ಭಾರತ ತಂಡದ ನೂತನ ಕೋಚ್ ಇಗೋರ್ ಸ್ಟಿಮಾಕ್ ಅವರಿಗೆ ಬೆಚ್ಚನೆಯ ಸ್ವಾಗತ ನೀಡಲು ಬಯಸುತ್ತೇವೆ. ಅವರ ಮುಂದಿನ ಅಭಿಯಾನಕ್ಕೆ ಶುಭವಾಗಲಿ ಎಂದು ಇಂಡಿಯನ್ ಸೂಪರ್ ಲೀಗ್‌ನ ತಂಡ ಮುಂಬೈ ಸಿಟಿ ಎಫ್‌ಸಿ ಟ್ವೀಟ್ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications