Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹುಟ್ಟು ಹಬ್ಬಕ್ಕೆ ಪ್ರೀತಿಯ ಬಿರುದು: ಸುನೀಲ್ ಛೆಟ್ರಿ ಈಗ 'ಏಷ್ಯನ್ ಐಕಾನ್'!

Sunil Chhetri named ‘Asian Icon’, gets praise for rivalling Ronaldo, Messi

ನವದೆಹಲಿ, ಆಗಸ್ಟ್ 3: ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಅವರಿಗೆ ಸಚಿನ್ ತೆಂಡೂಲ್ಕರ್ ಅವರಂತ ಅನೇಕ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇದೇ ಸಂದರ್ಭ ಭಾರತದ ಹೆಮ್ಮೆಯ ಆಟಗಾರನಿಗೆ 'ಏಷ್ಯನ್ ಐಕಾನ್' ಬಿರುದು ಲಭಿಸಿರುವುದು ಮತ್ತೊಂದು ವಿಶೇಷ.

'ಸುನಿಲ್ ಛೆಟ್ರಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮಿಂದ ಭಾರತದ ಫುಟ್ಬಾಲ್ ತಂಡಕ್ಕೆ ಮತ್ತಷ್ಟು ಯಶಸ್ಸು ಲಭಿಸಲಿ. ಭಾರತದ ಫುಟ್ಬಾಲ್ ಎತ್ತರಕ್ಕೇರಲಿ' ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಆಗಸ್ಟ್ 3ರ ಇಂದು 34ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಛೆಟ್ರಿಗೆ ಏಷ್ಯನ್ ಫುಟ್ಬಾಲ್ ಕನ್ಫೆಡರೇಷನ್ (ಎಎಫ್ಸಿ)ಯಿಂದ 'ಏಷ್ಯನ್ ಐಕಾನ್' ಬಿರುದು ಲಭಿಸಿದೆ. ಸಕ್ರಿಯ ಆಟಗಾರರಲ್ಲಿ ಛೆಟ್ರಿ ಅಧಿಕ ಗೋಲ್ ಸಾಧನೆ ಹೊಂದಿರುವ ವಿಶ್ವದ 3ನೇ ಆಟಗಾರನಾಗಿ ಗುರುತಿಸಿಕೊಂಡಿದ್ದು ಹೊಸ ಬಿರುದಿಗೆ ಕಾರಣ.

101 ಪಂದ್ಯಗಳಲ್ಲಿ 64 ಗೋಲ್ ಸಾಧನೆ ಮಾಡಿರುವ ಛೆಟ್ರಿ ಏಷ್ಯದ ಸಕ್ರಿಯ ಅಧಿಕ ಗೋಲ್ ಸಾಧಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿಶ್ವದಲ್ಲಿ ಪೋರ್ಚುಗಲ್ ನ ಕ್ರಿಸ್ಚಿಯಾನೊ ರೊನಾಲ್ಡೋ ಮತ್ತು ಅರ್ಜೆಂಟೀನಾ ಆಟಗಾರ ಲಿಯೋನೆಲ್ ಮೆಸ್ಸಿ ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ.

ಛೆಟ್ರಿ ಹುಟ್ಟುಹಬ್ಬವನ್ನು ಏಷ್ಯನ್ ಫುಟ್ಬಾಲ್ ಕನ್ಫೆಡರೇಷನ್ (ಎಎಫ್ಸಿ) ಇನ್ನಷ್ಟು ಸ್ಮರಣೀಯವಾಗಿಸಿದೆ. ಭಾರತ ಮತ್ತು ತನ್ನ ಕ್ಲಬ್ ಪ್ರತಿನಿಧಿಸುತ್ತ ಛೆಟ್ರಿ 2005ರಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಮೊದಲ ಪಂದ್ಯದಿಂದ ಹಿಡಿದು ಈವರೆಗಿನ ಅವರ ಬದುಕಿನ ಚಿತ್ರಣಗಳನ್ನು ತನ್ನ ಅಧಿಕೃತ ವೆಬ್ ಸೈಟ್ ಪುಟದಲ್ಲಿ ಹಾಕಿಕೊಂಡಿದೆ.

Story first published: Friday, August 3, 2018, 21:38 [IST]
Other articles published on Aug 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+