Sunil Chhetri: ರೊನಾಲ್ಡೋ, ಮೆಸ್ಸಿ ಹಾದಿಯಲ್ಲಿ ಸುನಿಲ್ ಛೆಟ್ರಿ: ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಮಹತ್ವದ ಮೈಲಿಗಲ್ಲು
SAFF ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 4-0 ಅಂತರದಿಂದ ಅಮೋಘ ಗೆಲುವು ಸಾಧಿಸಿದೆ. ಭಾರತದ ನಾಯಕ ಸುನಿಲ್ ಛೆಟ್ರಿ ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದಾಗಿ ಎದುರಾಳಿ ಪಾಕಿಸ್ತಾನ ತಂಡಕ್ಕೆ ಯಾವುದೇ ಅವಕಾಶವೇ ದೊರೆಯಲಿಲ್ಲ. ಈ ಮೂಲಕ ಈ ಪಂದ್ಯದಲ್ಲಿ ಭಾರತ ತಂಡ ಭಾರೀ ಅಂತರದಿಂದ ಗೆಲುವು ಸಾಧಿಸಿದೆ. ಈ ಪಂದ್ಯದ ಮೂಲಕ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಶ್ರೇಷ್ಠ ಸಾಧನೆಯೊಂದನ್ನು ಮಾಡಿದ್ದಾರೆ.
ಪಾಕಿಸ್ತಾನದ ವಿರುದ್ಧ ಬಾರಿಸಿದ ಈ ಹ್ಯಾಟ್ರಿಕ್ ಗೋಲಿನೊಂದಿಗೆ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಈವರೆಗೆ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಛೆಟ್ರಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಅಂದರೆ ಅಂತಾರಾಷ್ಟ್ರೀಯ ಗೋಲುಗಳಿಸಿದ ಆಟಗಾರರ ಪೈಕಿ ಈಗ ಪೋರ್ಚುಗಲ್‌ನ ದಿಗ್ಗಜ ಕ್ರಿಶ್ಚಿಯಾನೋ ರೊನಾಲ್ಡೋ, ಇರಾನ್‌ನ ಮಾಜಿ ಸ್ಟ್ರೈಕರ್ ಅಲಿ ಡೈ ಮತ್ತು ಅರ್ಜೆಂಟಿನಾದ ಲಿಯೋನೆಲ್ ಮೆಸ್ಸಿ ಮಾತ್ರವೇ ಮುಂದಿದ್ದಾರೆ.

ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ಛೆಟ್ರಿ ಭಾರತದ ಪರವಾಗಿ 90 ಗೋಲುಗಳನ್ನು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬಾರಿಸಿದಂತಾಗಿದೆ. ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗೋಲುಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಕ್ರಿಶ್ಚಿಯಾನೋ ರೊನಾಲ್ಡೋ 123 ಗೋಲು ಗಳಿಸಿದ್ದರೆ ಅಲಿ ಡೈ 109 ಗೋಲು ಬಾರಿಸಿದ್ದಾರೆ. ಇನ್ನು ಅರ್ಜೆಂಟಿನಾದ ಲಿಯೋನೆಲ್ ಮೆಸ್ಸಿ 103 ಗೋಲುಗಳನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ.
ಇನ್ನು ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಮೇಲುಗೈ ಸಾಧಿಸುತ್ತಾ ಪಾಕ್ ತಂಡದ ಮೇಲೆ ಒತ್ತಡವನ್ನು ಹೇರುವಲ್ಲಿ ಯಶಸ್ವಿಯಾಗಿತ್ತು. ಪಂದ್ಯ ಆರಂಭವಾದ 10ನೇ ನಿಮಿಷದಲ್ಲಿ ಗೋಲ್‌ಕೀಪರ್‌ನ ತಪ್ಪಿನಿಂದಾಗಿ ಭಾರತ ಮೊದಲ ಯಶಸ್ಸು ಸಾಧಿಸಿತು. ಪಾಕ್ ಗೋಲ್ ಕೀಪರ್ ಸಾಕಿಬ್ ಹನೀಫ್ ಮಾಡಿದ ಎಡವಟ್ಟನ್ನು ಸಮಯಪ್ರಜ್ಞೆಯಿಂದ ಗೋಲಾಗಿ ಪರಿವರ್ತಿಸಿದ್ದರು ನಾಯಕ ಸುನಿಲ್ ಛೆಟ್ರಿ.
ಇನ್ನು 15ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಅವಕಾಶ ದೊರೆಯಿತು. ಅನಿರುದ್ಧ್ ಥಾಪಾ ಅವರ ಹೊಡೆತವನ್ನು ಪಾಕಿಸ್ತಾನದ ಡಿಫೆಂಡರ್ ಬಾಕ್ಸ್‌ನೊಳಗೆ ತಡೆದರು ಈ ಸಂದರ್ಭವದಲ್ಲಿ ಚೆಂಡು ಅವರ ಕೈಗೆ ತಗುಲಿ ಭಾರತ ಪೆನಾಲ್ಟಿ ಅವಕಾಶ ಪಡೆದುಕೊಂಡಿತು. ಈ ಅವಕಾಶವನ್ನು ನಾಯಕ ಛೆಟ್ರಿ ಗೋಲಾಗಿ ಪರಿವರ್ತಿಸಿದ ಕಾರಣ ಮೊದಲಾರ್ಧವನ್ನು ಭಾರತ 2-0ಯ ಮುನ್ನಡೆಯೊಂದಿಗೆ ಅಂತ್ಯಗೊಳಿಸಿತು.
ಇನ್ನು ಪಂದ್ಯದ 73ನೇ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಪೆನಾಲ್ಟಿ-ಕಿಕ್ದೊರೆಯಿತು. ಇದನ್ನು ಕೂಡ ನಾಯಕ ಸುನಿಲ್ ಛೆಟ್ರಿ ಗೋಲಾಗಿ ಪರಿವರ್ತಿಸುವ ಮೂಲಕ ಹ್ಯಾಟ್ರಿಕ್ ಗೋಲು ಪೂರ್ಣಗೊಳಿಸಿದರು. ನಂತರ ಕೇವಲ ಎಂಟು ನಿಮಿಷಗಳ ಅಂತರದಲ್ಲಿ ಉದಾಂತ ಭಾರತದ ಪರವಾಗಿ ಮತ್ತೊಂದು ಗೋಲು ಸಿಡಿಸಿದ ಕಾರಣ 4-0 ಅಂತರದಿಂದ ಭಾರತ ಗೆಲುವು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications