Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

India vs Maldives: ಭಾರತ-ಮಾಲ್ಡೀವ್ಸ್ ನಡುವಿನ ಪಂದ್ಯದಲ್ಲಿ ಸುನಿಲ್ ಛೆಟ್ರಿ ಕಣಕ್ಕೆ; ಯಾವಾಗ; ಎಲ್ಲಿ?

ಭಾರತದ ಫುಟ್‌ಬಾಲ್ ದಿಗ್ಗಜ ಸುನಿಲ್ ಛೆಟ್ರಿ ತಮ್ಮ ನಿವೃತ್ತಿಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಈಗ ಮಾಲ್ಡೀವ್ಸ್ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಸುನಿಲ್ ಛೆಟ್ರಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಉಭಯ ತಂಡಗಳು ಮಾರ್ಚ್ 19, ಬುಧವಾರ ಮುಖಾಮುಖಿಯಾಗಲಿವೆ. ಮಾರ್ಚ್ 25 ರಂದು ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿರುವ ಭಾರತ ತಂಡಕ್ಕೆ ಇದು ಒಂದು ರೀತಿಯ ಅಭ್ಯಾಸ ಪಂದ್ಯವಾಗಲಿದೆ.

ಸುನಿಲ್ ಛೆಟ್ರಿ ಉತ್ತಮ ಫಾರ್ಮ್‌ನೊಂದಿಗೆ ಸ್ಪರ್ಧೆಗೆ ಇಳಿಯಲಿದ್ದು, ಬೆಂಗಳೂರು ಎಫ್‌ಸಿ ಪರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ನಲ್ಲಿ 24 ಪಂದ್ಯಗಳಿಂದ 12 ಗೋಲುಗಳನ್ನು ಗಳಿಸಿದ್ದಾರೆ. ಹೀಗಾಗಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಪಂದ್ಯದಲ್ಲಿ ಸುನಿಲ್ ಛೆಟ್ರಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Sunil Chhetri to play in India-Maldives football match

ಸುನಿಲ್ ಛೆಟ್ರಿ ಟೀಮ್ ಇಂಡಿಯಾ ಪರ ಆಡುವಾಗ 2024 ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದರು. ಅವರು 151 ಪಂದ್ಯಗಳಿಂದ 94 ಗೋಲುಗಳನ್ನು ಗಳಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದರಯ. ಈಗ ಅವರಿಗೆ ತನ್ನ ಖಾತೆಗೆ ಇನ್ನೂ ಕೆಲವು ಗೋಲುಗಳನ್ನು ಸೇರಿಸಲು ಅವಕಾಶ ಸಿಕ್ಕಿದೆ. ಮಾಲ್ಡೀವ್ಸ್ ವಿರುದ್ಧದ 21 ಪಂದ್ಯಗಳಲ್ಲಿ 15ರಲ್ಲಿ ಗೆದ್ದಿರುವ ಭಾರತ ಮೇಲುಗೈ ಸಾಧಿಸಿದೆ.

ಶಿಲ್ಲಾಂಗ್‌ನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಪಂದ್ಯ ಮಾರ್ಚ್ 19 ಬುಧವಾರ ನಡೆಯಲಿದ್ದು, ಭಾರತೀಯ ಕಾಲಮಾನ ಪ್ರಕಾರ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ. ಇದಲ್ಲದೆ, ಅಭಿಮಾನಿಗಳಿಗೆ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ.

ಭಾರತ ತಂಡ: ಅಮರಿಂದರ್ ಸಿಂಗ್, ಗುರ್ಮೀತ್ ಸಿಂಗ್, ವಿಶಾಲ್ ಕೈತ್, ಆಶಿಶ್ ರೈ, ಬೋರಿಸ್ ಸಿಂಗ್ ತಂಗ್ಜಾಮ್, ಚಿಂಗ್ಲೆನ್ಸನಾ ಸಿಂಗ್ ಕೊನ್ಶಮ್, ಹ್ಮಿಂಗ್ಥನ್ಮಾವಿಯಾ, ಮೆಹ್ತಾಬ್ ಸಿಂಗ್, ರಾಹುಲ್ ಭೇಕೆ, ರೋಷನ್ ಸಿಂಗ್ ನೌರೆಮ್, ಸಂದೇಶ್ ಜಿಂಗನ್, ಸುಭಾಷಿಶ್ ಬೋಸ್, ಆಶಿಕ್ ಕುರುನಿಯನ್, ಆಯುಷ್ ದೇವ್ ಛೆಟ್ರಿ, ಬ್ರಾಂಡನ್ ಫೆರ್ನಾಂಡಿಸ್, ಬ್ರಿಸನ್ ಫೆರ್ನಾಂಡಿಸ್, ಜೀಕ್ಸನ್ ಸಿಂಗ್ ತೌನೌಜಮ್, ಲಾಲೆಂಗ್ಮಾವಿಯಾ, ಲಿಸ್ಟನ್ ಕೊಲಾಕೊ, ಮಹೇಶ್ ಸಿಂಗ್ ನೌರೆಮ್, ಸುರೇಶ್ ಸಿಂಗ್ ವಾಂಗ್ಜಾಮ್, ಸುನಿಲ್ ಛೆಟ್ರಿ, ಫಾರುಖ್ ಚೌಧರಿ, ಇರ್ಫಾನ್ ಯಾದ್ವಾಡ್, ಮನ್ವೀರ್ ಸಿಂಗ್.

Story first published: Wednesday, March 19, 2025, 13:06 [IST]
Other articles published on Mar 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+