BFC Reach ISL Final: ಕೊನೆಯ ಕ್ಷಣದಲ್ಲಿ ಸುನಿಲ್ ಛೆಟ್ರಿ ಮ್ಯಾಜಿಕ್: ಬಿಎಫ್‌ಸಿ ಫೈನಲ್‌ಗೆ
ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ಅಮೋಘ ಪ್ರದರ್ಶನ ನೀಡಿದೆ. ಪಂದ್ಯದ ಹೆಚ್ಚುವರಿ ಸಮಯದಲ್ಲಿ ಸುನಿಲ್ ಛೆಟ್ರಿ ನೀಡಿದ ಮಿಂಚಿನ ಪ್ರದರ್ಶನದ ಫಲವಾಗಿ ಬೆಂಗಳೂರು ತಂಡ, ಎರಡನೇ ಸೆಮಿಫೈನಲ್‌ನಲ್ಲಿ ಒಂದು ಗೋಲು ದಾಖಲಿಸಲು ಸಾಧ್ಯವಾಯಿತು. ಎರಡನೇ ಪಂದ್ಯದಲ್ಲಿ ಬೆಂಗಳೂರು 1-2 ಗೋಲುಗಳಿಂದ ಸೋಲು ಕಂಡ್ರೂ ಫೈನಲ್‌ಗೆ ಎಂಟ್ರಿ ನೀಡಿದೆ.
ಬೆಂಗಳೂರು ಫುಟ್ಬಾಲ್ ಕ್ಲಬ್ ಕೊನೆಯ ಕ್ಷಣದಲ್ಲಿ ಅಮೋಘ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದಿತು. ಗೋವಾ ಹಾಗೂ ಬೆಂಗಳೂರು ತಂಡಗಳು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದವು. ಆದರೆ ಈ ಅವಧಿಯಲ್ಲಿ ಗೋಲು ದಾಖಲಾಗಲೇ ಇಲ್ಲ. ಪಂದ್ಯ ರೋಚಕತೆ ಹೆಚ್ಚಿಸಿತು. ಎರಡನೇ ಅವಧಿಯ ಆರಂಭದಲ್ಲೇ ಬೋರ್ಜಾ ಹೆರೆರಾ (49ನೇ ನಿಮಿಷ), ಅರ್ಮಾಂಡೋ ಸಡಿಕು (88ನೇ ನಿಮಿಷ) ಬಾರಿಸಿದ ಗೋಲುಗಳ ಸಹಾಯದಿಂದ ಮುನ್ನಡೆ ಸಾಧಿಸಿತ್ತು. ಆದರೆ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಸುನಿಲ್ ಛೆಟ್ರಿ (90+2ನೇ ನಿಮಿಷ) ಅಮೋಘ ಗೋಲು ಬಾರಿಸಿ ಅಬ್ಬರಿಸಿದರು.

ಪಂದ್ಯ ಸೋತರೂ ಬೆಂಗಳೂರು ಫೈನಲ್‌ಗೆ ಹೇಗೆ?
ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ ತನ್ನ ತವರಿನಲ್ಲಿ ನಡೆದ ಪಂದ್ಯದಲ್ಲಿ ಗೋವಾ ವಿರುದ್ಧ 2-0 ಗೋಲುಗಳ ಜಯ ದಾಖಲಿಸಿತ್ತು. ಇನ್ನು ಭಾನುವಾರದ ಪಂದ್ಯದಲ್ಲಿ ಗೋವಾ 3-0 ಗೋಲು ಬಾರಿಸಿದರೆ ಫೈನಲ್‌ಗೆ ಪ್ರವೇಶ ಖಚಿತವಾಗಿತ್ತು. ಆದ್ರೆ ಗೋವಾ 2 ಗೋಲು ಬಾರಿಸಿತು. ಬೆಂಗಳೂರು 1 ಗೋಲು ಸಿಡಿಸಿತು. ಕಳೆದ ಪಂದ್ಯದಲ್ಲಿ ದಾಖಲಿಸಿದ ಗೋಲು ಹಾಗೂ ಭಾನುವಾರ ದಾಖಲಾದ ಗೋಲುಗಳನ್ನು ಕುಡಿಸಿದಾಗ ಬೆಂಗಳೂರು 3-2ರಿಂದ ಮುನ್ನಡೆ ಸಾಧಿಸಿ, ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ.
ಕೊನೆಯ ಕ್ಷಣದಲ್ಲಿ ಆಗಿದ್ದು ಏನು?
ಪಂದ್ಯದ ಕೊನೆಯಲ್ಲಿ ಬೆಂಗಳೂರು ಚೆಂಡನ್ನು ಪಡೆದು ಗೋಲು ಪೆಟ್ಟಿಗೆಯ ಹತ್ತಿರ ಸಾಗಿತು. ಈ ವೇಳೆ ಗೋವಾ ತಂಡದ ರಕ್ಷಣಾ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಆದರೆ ಈ ಅವಧಿಯಲ್ಲಿ ಡೆಜಾನ್ ಡ್ರಾಜಿಕ್ ನೀಡಿದ್ದ ಪಾಸ್‌ನ್ನು ಪಡೆಯುವಲ್ಲಿ ಸಾಹಿಲ್ ತವೋರಾ ತಡ ಮಾಡಿದರು. ಇದೇ ಸಮಯಕ್ಕೆ ಕಾದು ಕುಳಿತಿದ್ದ ನಮ್‌ಗ್ಯಾಲ್ ಭುಟಿಯಾ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಗೋಲು ಪೆಟ್ಟಿಗೆಯ ಹತ್ತಿರ ಚೆಂಡನ್ನು ನೂಕಿದರು. ಅಲ್ಲಿಯೇ ಇದ್ದ ಒಬ್ಬ ಆಟಗಾರನನ್ನು ವಂಚಿಸಿದ ಚೆಂಡು ಮುಂದೆ ಸಾಗಿತು. ಆದರೆ ಇನ್ನೊಂದು ತುದಿಯಲ್ಲಿ ನಿಂತಿದ್ದ ಸುನಿಲ್ ಛೆಟ್ರಿ ಚಮತ್ಕಾರ ಮಾಡಿದರು. ಗೋಲಿಗೆ ತಲೆಯಿಂದ ಮುಟ್ಟಿ ಗೋಲು ಪೆಟ್ಟಿಗೆ ಸೇರಿಸಿದ್ರು. ಪರಿಣಾಮ ಬೆಂಗಳೂರು ಐಎಸ್‌ಎಲ್ ಫೈನಲ್‌ಗೆ ಎಂಟ್ರಿ ನೀಡಲು ಸಹಾಯಕವಾಯಿತು.

ಇಂದು ಮೋಹನ್ ಬಗಾನ್ vs ಜೆಮ್ಶೆಡ್‌ಪುರ ಎಫ್‌ಸಿ
ಸೋಮವಾರ ಜೆಮ್ಶೆಡ್‌ಪುರ ಎಫ್‌ಸಿ ಹಾಗೂ ಮೋಹನ್ ಬಗಾನ್ ತಂಡಗಳ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಜೆಮ್ಶೆಡ್‌ಪುರ ಎಫ್‌ಸಿ 2-1ರಿಂದ ಮೋಹನ್ ಬಗಾನ್ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲುವುದೋ ಆ ತಂಡದ ವಿರುದ್ಧ ಬೆಂಗಳೂರು ಐಎಸ್‌ಎಲ್ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications