For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಟ್ನೆಸ್ ಚಾಲೆಂಜ್ ತೆಗೆದುಕೊಳ್ಳಿ, ಮ್ಯಾಂಚೆಸ್ಟರ್ ಸಿಟಿಗೆ ಟಿಕೆಟ್ ಗಳಿಸಿ

Tecno Online Vitural Fitness challenge Race to Manchester City

ಗ್ಲೋಬಲ್ ಪ್ರೀಮಿಯರ್ ಮೊಬೈಲ್ ಬ್ರಾಂಡ್ ಆಗಿರುವ ಟೆಕ್ನೋ, ತಮ್ಮ ಪಾಲುದಾರರಾದ ಇಪಿಎಲ್ ಮತ್ತು ಎಫ್ ಎ ಕಪ್ ಚಾಂಪಿಯನ್ಸ್, ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ, ಕ್ರೀಡಾ ಅಭಿಮಾನಿಗಳಿಗೆ ಮತ್ತು ಫಿಟ್ನೆಸ್ ಉತ್ಸಾಹಿಗಳಿಗೆ ಮ್ಯಾಂಚೆಸ್ಟರ್ ಸಿಟಿಯಲ್ಲಿ ನಡೆಯಲಿರುವ 'ಟೆಕ್ನೋ ರೇಸ್ ಟು ಮ್ಯಾಂಚೆಸ್ಟರ್ ಸಿಟಿ' ಯಲ್ಲಿ ಭಾಗವಹಿಸಲು ನೋಂದಣಿಗಳನ್ನು ಪ್ರಕಟಿಸಿವೆ. ಅಭಿಮಾನಿಗಳಿಗೆ ಪ್ರಿಯವಾದ ಈ ವಿಶಿಷ್ಟ ವೇದಿಕೆಯ ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯ ಲಾಭಗಳನ್ನು ಪಡೆದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ, ಹಾಗೂ ಸ್ಟೆಫಾಥ್ಲಾನ್ ನಿಂದ ಸ್ಫೂರ್ತಿ ಪಡೆದಿದೆ.

'ಟೆಕ್ನೋ ರೇಸ್ ಟು ಮ್ಯಾಂಚೆಸ್ಟರ್ ಸಿಟಿ'´ನಲ್ಲಿ ಎಲ್ಲರೂ ಪಾಲ್ಗೊಳ್ಳಬಹುದಾಗಿದ್ದು ಉಚಿತ, 60 ದಿನಗಳ ಫಿಟ್ನೆಸ್ ಸವಾಲನ್ನು ಅದು ಒಳಗೊಂಡಿದೆ. ಅದು ದೈಹಿಕವಾಗಿ ಕ್ರಿಯಾಶೀಲವಾಗಿರುವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲೆಂದು ದಿನಕ್ಕೆ ಕನಿಷ್ಠ 10,000 ಹೆಜ್ಜೆಗಳನ್ನು ಹಾಕಿ ನಡೆಯುವ ಅಭ್ಯಾಸವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತದೆ. ರೇಸ್ ಗೆ ನೋಂದಣಿಯು ಆರಂಭವಾಗಿದ್ದು, ಜುಲೈ 8, 2019 ರಂದು ಕೊನೆಗೊಳ್ಳುತ್ತದೆ.

'ಟೆಕ್ನೋ ರೇಸ್ ಟು ಮ್ಯಾಂಚೆಸ್ಟರ್ ಸಿಟಿ' ಜುಲೈ 10, 2019 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 7, 2019 ರಂದು ಕೊನೆಗೊಳ್ಳುತ್ತದೆ. ಆಸಕ್ತರು ಇಬ್ಬರಾಗಿ ತಂಡದಲ್ಲಿ ಪಾಲ್ಗೊಳ್ಳಬಹುದು. ತಮ್ಮ ಆಯ್ಕೆಯ ಸಾಧನವನ್ನು ಬಳಸಿ ಅಥವಾ ಸರಳವಾಗಿ ತಮ್ಮ ಸ್ಮಾರ್ಟ್ಫೋನ್ಗಳನ್ನು ಬಳಸಿಕೊಂಡು, ಮ್ಯಾಂಚೆಸ್ಟರ್ ಸಿಟಿ ಅಪ್ಲಿಕೇಶನ್ ರೇಸ್ ನಲ್ಲಿ ತಂಡಗಳು ನಡೆಯಬಹುದು, ಓಡಬಹುದು ಅಥವಾ ಜಾಗ್ ಮಾಡಬಹುದು ಮತ್ತು ಭಾರತದಾದ್ಯಂತ ಇತರ ತಂಡಗಳೊಂದಿಗೆ ಸ್ಪರ್ಧಿಸಬಹುದು.

'ಟೆಕ್ನೋ ರೇಸ್ ಟು ಮ್ಯಾಂಚೆಸ್ಟರ್ ಸಿಟಿ' ಯಲ್ಲಿ ಪಾಲ್ಗೊಳ್ಳುವವರಿಗೆ ವಿನೋದದೊಂದಿಗೆ ಉತ್ತಮ ಆರೋಗ್ಯವನ್ನು ಉಡುಗೊರೆಯಾಗಿ ನೀಡುವುದು ಖಚಿತವಾಗಿದೆ. ರೇಸ್ ಅವಧಿಯಲ್ಲಿ ವಾರದ ಸವಾಲುಗಳನ್ನು ನಡೆಯಲಿದ್ದು ಈ ಕುರಿತಾದ ನೋಂದಣಿಗಳು ಸಾಮಾಜಿಕ ಮಾಧ್ಯಮ ಚಾನಲ್ ಗಳಲ್ಲಿ@RacetoManCity (ಫೇಸ್ ಬುಕ್+ ಟ್ವಿಟರ್ + ಇನ್ಸ್ಟಾಗ್ರ್ಯಾಮ್)ನಲ್ಲಿ ನಡೆಯಲಿವೆ. ಈ ಮೂಲಕ ಅಭಿಮಾನಿಗಳ ಮತ್ತು ಫಿಟ್ನೆಸ್ ಉತ್ಸಾಹಿಗಳಿಗೆ ಮುಂದಿನ ಹೆಜ್ಜೆ ಇಡಲು ಪ್ರೇರೇಪಣೆ ದೊರೆಯಲಿವೆ. ಪಾಲ್ಗೊಳ್ಳುವವರಿಗೆ ಹಲವು ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಅವಕಾಶವೂ ದೊರೆಯಲಿದೆ.

Story first published: Thursday, June 13, 2019, 18:59 [IST]
Other articles published on Jun 13, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+