ಬ್ರೆಜಿಲ್‌ನಲ್ಲಿ ಅಗ್ನಿ ಅವಘಡ: 10 ಯುವ ಫುಟ್ಬಾಲ್ ಆಟಗಾರರು ದುರ್ಮರಣ

ರಿಯೋ ಡಿ ಜನೈರೊ, ಫೆಬ್ರವರಿ 9: ಬ್ರೆಜಿಲ್‌ನ ಫುಟ್ಬಾಲ್ ಕ್ಲಬ್‌ನಲ್ಲಿ ಅಗ್ನಿ ಅವಘಡದಿಂದಾಗಿ 10 ಯುವ ಫುಟ್ಬಾಲಿಗರು ಸಾವನ್ನಪ್ಪಿರುವ ಘಟನೆ ನಡೆದಿದೆ. ಶುಕ್ರವಾರ (ಫೆಬ್ರವರಿ 7) ಮುಂಜಾನೆ ಫುಟ್ಬಾಲ್ ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿಯಿಂದಾಗಿ ಕಿರಿಯ ಆಟಗಾರರು ಅಸುನೀಗಿರುವುದಾಗಿ ವರದಿಯಾಗಿದೆ.
ಪಶ್ಚಿಮ ರಿಯೋ ಡಿ ಜನೈರೋದಲ್ಲಿರುವ ಬ್ರೆಜಿಲಿಯನ್ ಫುಟ್ಬಾಲ್ ಕ್ಲಬ್ ಫ್ಲೆಮಿಂಗೋದ ನಿನ್ನೊ ಡಿ ಉರುಬು ತರಬೇತಿ ಕೇಂದ್ರದಲ್ಲಿ ಈ ಅವಘಡ ಸಂಭವಿಸಿದೆ. ತರಬೇತಿ ಕೇಂದ್ರದಲ್ಲಿದ್ದ 14-17ರ ಹರೆಯದ ಫುಟ್ಬಾಲ್ ಆಟಗಾರರು ನಿದ್ದೆಯಲ್ಲಿದ್ದಾಗ ಬೆಂಕಿ ದುರಂತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ದುರಂತದಲ್ಲಿ 10 ಮಂದಿ ಸಾವನ್ನಪ್ಪಿದ್ದರೆ, ಇನ್ನೂ ಮೂರು ಮಂದಿ ಯುವ ಆಟಗಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂವರು 14, 15 ಮತ್ತು 16ರ ಹರೆಯದ ಹುಡುಗರು ಎಂದು ಗುರುತಿಸಲಾಗಿದೆ. ಇವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
Story first published: Saturday, February 9, 2019, 15:38 [IST]
Other articles published on Feb 9, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications