For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಥಾಯ್ ಗುಹೆಯಲ್ಲಿ ಸಿಲುಕಿದ್ದ 12 ಫುಟ್ಬಾಲ್ ಹುಡುಗರ ಸಹಿತ ಕೋಚ್ ರಕ್ಷಣೆ

Thai cave rescue operation ends with all 12 boys safe

ಮಾಯ್ ಸೈ, ಜುಲೈ 10: ಥಾಯ್ಲೆಂಡ್ ನ ಗುಹೆ ವೀಕ್ಷಿಸಲು ತೆರಳಿ ಸುಮಾರು ಎರಡು ವಾರಗಳವರೆಗೆ ಒಳಗೆ ಸಿಕ್ಕಿಬಿದ್ದಿದ್ದ 12 ಮಂದಿ ಕಿರಿಯ ಫುಟ್ಬಾಲ್ ಆಟಗಾರರ ಸಹಿತ ತರಬೇತುದಾರರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಒಳಗೆ ಸಿಲುಕಿದ್ದ ಎಲ್ಲಾ ಹುಡುಗರನ್ನು ಮತ್ತು ಕೋಚನ್ನು ರಕ್ಷಣೆ ಮಾಡಲಾಗಿದೆ ಎಂದು ಥಾಯ್ ನೇವಿ ಸೀಲ್ ಯುನಿಟ್ ಅದರ ಅಧಿಕೃತ ಫೇಸ್ಬುಕ್ ಪೇಜ್ ನಲ್ಲಿ ತಿಳಿಸಿದೆ.

ಜೂನ್ 23ರಂದು ಗುಹೆ ವೀಕ್ಷಿಸಲು ತೆರಳಿದ್ದ ಕಾಣೆಯಾಗಿದ್ದರು. ನಂತರ ಹುಡುಗರ ಸಹಿತ 25ರ ಹರೆಯದ ಕೋಚ್ ಗುಹೆಯ ಒಳಗೆ ಸಿಕ್ಕಿಬಿದ್ದರುವುದ್ನು ಪತ್ತೆಹಚ್ಚಲಾಗಿತ್ತು. ಗುಹೆಯೊಳಗೆ ನೆರೆಯ ನೀರುನುಗ್ಗಿದ್ದರಿಂದ ಥಾಯ್ಲೆಂಡ್ ನ ಸುಮಾರು 12-16ರ ವಯಸ್ಸಿನ ಹುಡುಗರು ಮತ್ತು ಅವರ ತರಬೇತುದಾರರಿಗೆ ಗುಹೆಯಿಂದ ಹೊರಬರಲಾಗಿರಲಿಲ್ಲ.

ನೀರಿನ ಮಟ್ಟ ಅಪಾಯಕಾರಿ ಪ್ರಮಾಣದಲ್ಲಿ ಇರುವುದರಿಂದ ಅವರನ್ನು ಅಲ್ಲಿಂದ ಹೊರಕ್ಕೆ ಕರೆತರಲು ಸಾಕಷ್ಟು ಹರಸಾಹಸಪಡಬೇಕಾಗಿತ್ತು. ಆದರೆ ಬ್ರಿಟಿಷ್ ಡೈವರ್ ಗಳ ಹರಸಾಹಸದ ಫಲವಾಗಿ ಜುಲೈ 9ರ ಸಂಜೆ ವೇಳೆಗೆ ಸುಮಾರು 5 ಬಾಲಕರನ್ನು ರಕ್ಷಿಸಲಾಗಿತ್ತು. ರಾತ್ರಿಯ ವೇಳೆಗೂ ಮುಂದುವರೆದಿದ್ದ ರಕ್ಷಣಾಕಾರ್ಯ ಒಬ್ಬೊಬ್ಬರೇ ಬಾಲಕರಿಗೆ ಜೀವದಾನ ನೀಡುತ್ತಾ ಬಂದಿತ್ತು. ಇವತ್ತಿಗೆ ಗುಹೆಯೊಳಗೆ ಸಿಲುಕಿದ್ದ ಎಲ್ಲಾ 13 ಮಂದಿಯನ್ನು ರಕ್ಷಿಸಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ವಾರದಿಂದಲೂ ಈಜು ಪರಿಣತರು ಗುಹೆಯ ಸಂಕೀರ್ಣ ಭಾಗದೊಳಗೆ ಪ್ರವೇಶಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಅದರಂತೆ ನೌಕಾ ಪಡೆಯ ರಕ್ಷಣಾ ತಂಡವು ನಾಲ್ವರು ಬಾಲಕರನ್ನು ರಕ್ಷಿಸಿದ್ದಾಗಿ ಫೇಸ್‌ಬುಕ್ ಪುಟದಲ್ಲಿ ನಿನ್ನೆ (ಜು. 9ರ ಸೋಮವಾರ) ಮಾಹಿತಿ ನೀಡಿತ್ತು. ಈಗಿನ ಮಾಹಿತಿಯಂತೆ ರಕ್ಷಿಸಲಾದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರೀಕ್ಷೆಗಿಂತಲೂ ಉತ್ತಮ ಕಾರ್ಯಾಚರಣೆ ನಡೆದಿದ್ದಕ್ಕಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದವರ ಬಗ್ಗೆ ಸಂತಸ ವ್ಯಕ್ತವಾಗಿದೆ.

ರಕ್ಷಣಾ ಕಾರ್ಯದ ವೇಳೆ ಹೆಚ್ಚು ಆರೋಗ್ಯವಂತಾಗಿರುವವರನ್ನು ಮೊದಲು ಹೊರಗೆ ಕರೆತರಲಾಗಿತ್ತು. ಒಟ್ಟು ಎಲ್ಲ 13 ಮಂದಿಯ ರಕ್ಷಣೆಗೆ ಇನ್ನೂ ಎರಡರಿಂದ ನಾಲ್ಕು ದಿನಗಳ ಕಾರ್ಯಾಚರಣೆ ನಡೆಸಬೇಕಾಗಬಹುದು ಎಂದು ಜುಲೈ 9ರಂದು ಅಂದಾಜಿಸಲಾಗಿತ್ತು.

ಗುಹೆಯ ಒಳಗೆ ಪ್ರವಾಹದ ನೀರು, ಕಗ್ಗತ್ತಲು, ಆಮ್ಲಜನಕದ ಕೊರತೆ, ಒಳ ಪ್ರವೇಶಿಸಲು ಕಷ್ಟವೆನಿಸುವ ಕಿರಿದಾದ ಜಾಗ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಸಾವಿನಂಚಿನಲ್ಲಿದ್ದ 13 ಮಂದಿಯನ್ನು ರಕ್ಷಿಸಿರುವ ಬಗ್ಗೆ ಎಲ್ಲೆಡೆ ಪ್ರಶಂಸೆ ಕೇಳಿಬಂದಿದೆ.

Story first published: Tuesday, July 10, 2018, 19:32 [IST]
Other articles published on Jul 10, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+