ಟೋಕಿಯೋ ಒಲಿಂಪಿಕ್ಸ್: ಯುಎಸ್ ಮಹಿಳಾ ಫುಟ್ಬಾಲ್ ತಂಡ ಮಣಿಸಿದ ಸ್ವೀಡನ್

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಭಾಗವಾಗಿ ನಡೆದ ಮಹಿಳಾ ಫುಟ್ಬಾಲ್‌ನ ಆರಂಭಿಕ ಪಂದ್ಯದಲ್ಲಿ ಯುಎಸ್ ಮಹಿಳಾ ತಂಡವನ್ನು ಸ್ವೀಡನ್ ಮಹಿಳಾ ತಂಡ 3-0ಯ ಅಂತರದಿಂದ ಸೋಲಿಸಿದೆ. ಬುಧವಾರ (ಜುಲೈ 21) ನಡೆದ ಆರಂಭಿಕ ಸುತ್ತಿನ ಪಂದ್ಯದಲ್ಲಿ ನಾಲ್ಕು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಯುಎಸ್ ಮಹಿಳಾ ತಂಡಕ್ಕೆ ಸ್ವೀಡನ್ ಮಹಿಳಾ ತಂಡ ಆಘಾತ ನೀಡಿದೆ.
ಪಂದ್ಯದ ಪ್ರಥಮಾರ್ಧದಲ್ಲಿ ಅಂದರೆ 25ನೇ ನಿಮಿಷದಲ್ಲಿ ಸ್ವೀಡನ್‌ನ ಸ್ಟಿನಾ ಬ್ಲಾಕ್‌ಸ್ಟೇನಿಯಸ್ ಮೊದಲ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾಗಿ ದ್ವಿತೀಯಾರ್ಧದಲ್ಲಿ ಅಂದರೆ 54ನೇ ನಿಮಿಷದಲ್ಲಿ ಬ್ಲಾಕ್‌ಸ್ಟೇನಿಯಸ್ ಎರಡನೇ ಗೋಲ್ ಬಾರಿಸಿ ತಂಡಕ್ಕೆ ಇನ್ನಷ್ಟು ಬಲ ತುಂಬಿದರು.
ಯುಎಸ್ ಮಹಿಳಾ ತಂಡ ಗೋಲ್‌ಗಾಗಿ ಸೆಣಸಾಟ ನಡೆಸಿತಾದರೂ ಸ್ವೀಡನ್ ರಕ್ಷಣಾತ್ಮಕ ಆಟದ ಮುಂದೆ ಯುಎಸ್ ಹೋರಾಟ ಫಲ ನೀಡಲಿಲ್ಲ. ಪಂದ್ಯ ಕೊನೇ ಕ್ಷಣದಲ್ಲಿ ಅಂದರೆ 72ನೇ ನಿಮಿಷದಲ್ಲಿ ಸ್ವೀಡನ್‌ನಿಂದ ಲೀನಾ ಹರ್ಟಿಗ್ ತಂಡಕ್ಕೆ ಮೂರನೇ ಗೋಲ್ ಬಾರಿಸಿ ತಂಡದ ಗೆಲುವನ್ನು ಸಾರಿದರು.
ಟೋಕಿಯೋ ಸ್ಟೇಡಿಯಂನಲ್ಲಿ ನಡೆದ ಈ ಫುಟ್ಬಾಲ್ ಪಂದ್ಯದ ವೇಳೆ ಕೋವಿಡ್-19 ಕಾರಣ 48,000 ಕುರ್ಚಿಗಳು ಖಾಲಿಖಾಲಿಯಾಗಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications