FIFA World Cup 2026: ವಿಶ್ವದ ಟಾಪ್ 5 ಶ್ರೀಮಂತ ಫುಟ್ಬಾಲ್ ಆಟಗಾರರು
ಇನ್ನೇನು ಕೆಲವೇ ದಿನಗಳಲ್ಲಿ ಫಿಫಾ ವಿಶ್ವಕಪ್ ಆರಂಭವಾಗಲಿದೆ. ವಿಶ್ವದಲ್ಲಿ ಫುಟ್ಬಾಲ್ ಜ್ವರ ಆರಂಭವಾಗಲಿದೆ. ಈ ಬಾರಿಯ ಫಿಫಾ ವಿಶ್ವಕಪ್‌ನ್ನು ಕೆನಡಾ, ಮೆಕ್ಸಿಕೊ, ಅಮೆರಿಕದಲ್ಲಿ ಆತಿಥ್ಯವಹಿಸಲಿದೆ. ಒಟ್ಟು 48 ದೇಶಗಳು ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದು, ತಂಡಗಳನ್ನು 12 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ.
ವಿಶ್ವದ ಗಮನ ಸೆಳೆದ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಅನೇಕ ಸ್ಟಾರ್ ಆಟಗಾರರು ಭಾಗವಹಿಸುತ್ತಿದ್ದಾರೆ. ಮೈದಾನದಲ್ಲಿ ತಮ್ಮ ಕಾಲ್ಚಳಕದ ಮೂಲಕ ಅಬ್ಬರಿಸುವ ಆಟಗಾರರು, ತಮ್ಮ ಅಮೋಘ ಆಟದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೆ ಈ ಆಟಗಾರರು ಹಣ ಗಳಿಕೆಯಲ್ಲೂ ಎಲ್ಲ ಕ್ರೀಡಾಪಟುಗಳಿಗಿಂತ ಮುಂದಿದ್ದಾರೆ. ಈ ವರದಿಯಲ್ಲಿ ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಅತಿ ಶ್ರೀಮಂತ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

ಹ್ಯಾರಿ ಕೇನ್
ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಆಟಗಾರರಲ್ಲಿ ಅತ್ಯಂತ ಶ್ರೀಮಂತ ಆಟಗಾರ. ಈ ಇಂಗ್ಲಿಷ್ ಆಟಗಾರ ಸುಮಾರು 1412 ಕೋಟಿ ರೂ. (US$1.41 ಬಿಲಿಯನ್) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅವರ ಅತ್ಯಧಿಕ ಗಳಿಕೆಯು ಅವರ ಬೇಯರ್ನ್ ಮ್ಯೂನಿಚ್ ಮತ್ತು ಸ್ಕೆಚರ್ಸ್ ಬೂಟ್ ಒಪ್ಪಂದಗಳಿಂದ ಬಂದಿದೆ.
ಕೈಲಿಯನ್ ಎಂಬಪ್ಪೆ
ಫ್ರೆಂಚ್ ಸೂಪರ್‌ಸ್ಟಾರ್ ಕೈಲಿಯನ್ ಎಂಬಪ್ಪೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಫ್ರಾನ್ಸ್ ಕ್ರೀಡಾಪಟು ಎಂಬಪ್ಪೆ ಸುಮಾರು 2388 ಕೋಟಿ ರೂಪಾಯಿ ಹೊಂದಿದ್ದಾರೆ. ಎಂಬಪ್ಪೆ ಅವರ ಬಹುಪಾಲು ಆದಾಯ ರಿಯಲ್ ಮ್ಯಾಡ್ರಿಡ್‌ನಿಂದ ಬಂದಿದೆ.
ನೇಮರ್
ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಬ್ಬ ಆಟಗಾರ ಬ್ರೆಜಿಲಿಯನ್ ವಿಂಗರ್ ನೇಮರ್. ತಮ್ಮ ಅಮೋಘ ಕಾಲ್ಚಳಕದ ಮೂಲಕ ಹೆಸರುವಾಸಿಯಾದ ಆಟಗಾರ. ಇವರ ಪ್ರಸ್ತುತ ನಿವ್ವಳ ಮೌಲ್ಯ 4288 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅವರು ಬಾರ್ಸಿಲೋನಾ, ಪಿಎಸ್‌ಜಿ ಮತ್ತು ಅಲ್ ಹಿಲಾಲ್‌ನಿಂದ ಹೆಚ್ಚು ಆದಾಯವನ್ನು ಗಳಿಸಿದ್ದಾರೆ.
ಲಿಯೋನೆಲ್ ಮೆಸ್ಸಿ
ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ. ಇವರು ಫುಟ್ಬಾಲ್‌ನ ಶ್ರೀಮಂತ ಆಟಗಾರ. ಮೆಸ್ಸಿಯ ನಿವ್ವಳ ಮೌಲ್ಯ 9526 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇವರು ಪ್ರಸ್ತುತ ಇಂಟರ್ ಮಿಯಾಮಿ ಪರ ಆಡುತ್ತಾರೆ. ಮೆಸ್ಸಿ ಪೆಪ್ಸಿ, ಜಿಲೆಟ್ ಮತ್ತು ಟಾಟಾ ಮೋಟಾರ್ಸ್‌ನ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ
ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಸಲ್ಲುತ್ತದೆ. ಅವರು ಸೌದಿ ಅರೇಬಿಯಾದಲ್ಲಿ ಅಲ್-ನಾಸ್ರ್ ಪರ ಆಡುತ್ತಾರೆ. ಅವರ ಪ್ರಸ್ತುತ ನಿವ್ವಳ ಮೌಲ್ಯ ಸುಮಾರು 13000 ಕೋಟಿ (US$1.3 ಬಿಲಿಯನ್) ಎಂದು ಅಂದಾಜಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications