ಯೂರೋ 2020: ಸ್ಲೊವೇಕಿಯಾ vs ಸ್ಪೇನ್ ಪಂದ್ಯ, Live ಸ್ಕೋರ್

ಸೆವಿಲ್ಲೆ: ಸ್ಪೇನ್‌ನ ಎಸ್ಟಾಡಿಯೋ ಲಾ ಕಾರ್ಟುಜಾ ಡಿ ಸೆವಿಲ್ಲಾ ಸ್ಟೇಡಿಯಂನಲ್ಲಿ ಇಂದು ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಗ್ರೂಪ್ 'ಇ' ಪಂದ್ಯದಲ್ಲಿ ಸ್ಲೊವೇಕಿಯಾ ಮತ್ತು ಸ್ಪೇನ್ ತಂಡಗಳು ಮುಖಾಮುಖಿಯಾಗಿವೆ.
ಗ್ರೂಪ್ 'ಇ'ಯಲ್ಲಿ ಸ್ಲೊವೇಕಿಯಾ, ಸ್ಪೇನ್, ಸ್ವೀಡನ್, ಪೋಲೆಂಡ್ ತಂಡಗಳಿವೆ. ಇದರಲ್ಲಿ ಪಾಯಿಂಟ್ ಟೇಬಲ್‌ನಲ್ಲಿ ಸ್ವೀಡನ್ ಮೊದಲ ಸ್ಥಾನದಲ್ಲಿದೆ. ಆಡಿರುವ ಎರಡು ಪಂದ್ಯಗಳಲ್ಲಿ ಸ್ವೀಡನ್ 1 ಗೆಲುವು, 1 ಡ್ರಾ ಮಾಡಿಕೊಂಡಿದೆ. ಸ್ಲೊವೇಕಿಯಾ ದ್ವಿತೀಯ ಸ್ಥಾನದಲ್ಲಿದ್ದು, 2ರಲ್ಲಿ 1 ಪಂದ್ಯ ಗೆದ್ದಿದೆ. ಇನ್ನು ಸ್ಪೇನ್, ಪೋಲೆಂಡ್ ಕೆಳ ಸ್ಥಾನಗಳಲ್ಲಿವೆ.
ಸ್ಪೇನ್ ಪ್ಲೇಯಿಂಗ್ XI: ಉನೈ ಸೈಮನ್; ಸೀಸರ್ ಅಜ್ಪಿಲಿಕುಟಾ, ಎರಿಕ್ ಗಾರ್ಸಿಯಾ, ಐಮೆರಿಕ್ ಲ್ಯಾಪೋರ್ಟೆ, ಜೋರ್ಡಿ ಆಲ್ಬಾ; ಸೆರ್ಗಿಯೋ ಬುಸ್ಕೆಟ್ಸ್ (ನಾಯಕ), ಪೆಡ್ರಿ, ಕೋಕ್; ಗೆರಾರ್ಡ್ ಮೊರೆನೊ, ಪ್ಯಾಬ್ಲೊ ಸರಬಿಯಾ, ಅಲ್ವಾರೊ ಮೊರಾಟಾ.
ಸ್ಲೊವೇಕಿಯಾ ಪ್ಲೇಯಿಂಗ್ XI: ಮಾರ್ಟಿನ್ ಡುಬ್ರವ್ಕಾ; ಪೀಟರ್ ಪೆಕಾರಿಕ್, ಲುಬೊಮಿರ್ ಸಟ್ಕಾ, ಮಿಲನ್ ಸ್ಕ್ರಿನಾರ್, ತೋಮಸ್ ಹುಬೊಕಾನ್; ಜುರಾಜ್ ಕುಕ್ಕಾ, ಲುಕಾಸ್ ಹರಸ್ಲಿನ್, ಮಾರೆಕ್ ಹಮ್ಸಿಕ್ (ನಾಯಕ), ಜಕುಬ್ ಹ್ರೋಮಡಾ, ರಾಬರ್ಟ್ ಮ್ಯಾಕ್, ಒಂಡ್ರೆಜ್ ದುಡಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications