Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೀಕ್ಷಕರಿಲ್ಲದ ಮೈದಾನದಲ್ಲಿ ಕ್ರೀಡಾ ಸ್ಪರ್ಧೆ ನಡೆಸಲು ಯುಕೆಯಿಂದ ಅನುಮತಿ

United Kingdom permits sport behind closed doors from June 1

ಲಂಡನ್, ಮೇ 30: ಜೂನ್‌ 1ರಿಂದ ವೀಕ್ಷಕರಿಲ್ಲದ ಮೈದಾನದಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಯುನೈಟೆಡ್ ಕಿಂಗ್ಡಮ್‌ ಸರ್ಕಾರ ಅನುಮತಿ ನೀಡಿದೆ. ಸರ್ಕಾರದ ಈ ನಿರ್ಧಾರವನ್ನು ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಮುಖ್ಯ ನಿರ್ವಹಣಾಧಿಕಾರಿ ರಿಚರ್ಡ್ ಮಾಸ್ಟರ್ಸ್ ಸ್ವಾಗತಿಸಿದ್ದಾರೆ.

'ಪ್ರೀಮಿಯರ್ ಲೀಗ್ ಇಂದು [ಶನಿವಾರ] ಸರ್ಕಾರದ ಪ್ರಕಟಣೆಯನ್ನು ಸ್ವಾಗತಿಸುತ್ತದೆ. ಈ ಹಂತದ ಮೂರು ಪ್ರೋಟೋಕಾಲ್ ತಯಾರಿಸಲು ಪ್ರೀಮಿಯರ್ ಲೀಗ್ ಸೇರಿದಂತೆ ಎಲ್ಲಾ ಪ್ರಮುಖ ಕ್ರೀಡೆಗಳು ಡಿಜಿಟಲ್, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಇಲಾಖೆಯೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ,' ಎಂದು ರಿಚರ್ಡ್ಸ್ ಹೇಳಿದ್ದಾರೆ.

'ಸರ್ಕಾರದ, ಅದರಲ್ಲೂ ವಿಶೇಷವಾಗಿ ಡಿಸಿಎಂಎಸ್, ಇಂಗ್ಲೆಂಡ್‌ನ ಸಾರ್ವಜನಿಕ ಆರೋಗ್ಯ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿಗಳ ತಂಡದ ಸಂಪೂರ್ಣ ಬೆಂಬಲವಿಲ್ಲದೆ ನಾವು ಈ ಹಂತವನ್ನು ತಲುಪಲು ಸಾಧ್ಯವಿಲ್ಲ,' ಎಂದು ರಿಚರ್ಡ್ಸ್ ಬಿಗಿ ಪರಿಸ್ಥಿತಿ ಸುಧಾರಿಸಲು ನೆರವಾದ ಎಲ್ಲರನ್ನು ಸ್ಮರಿಸಿಕೊಂಡಿದ್ದಾರೆ.

ಕೊರೊನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ ಕ್ರೀಡಾಚಟುವಟಿಕೆಗಳು ನಿಲುಗಡೆಯಾಗಿದ್ದವು. ಈಗ ಬಹುತೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಸಡಿಲಗೊಂಡಿದ್ದು, ಕ್ರೀಡಾಚಟುವಟಿಕೆಗಳು ಮೆಲ್ಲಗೆ ಪುನರಾರಂಭಗೊಳ್ಳುತ್ತಿವೆ.

Story first published: Saturday, May 30, 2020, 23:57 [IST]
Other articles published on May 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+