Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಓಟ ನಿಲ್ಲಿಸಿದ ಬೋಲ್ಟ್ ರೆಡ್ ಡೆವಿಲ್ಸ್ ತಂಡಕ್ಕೆ ಎಂಟ್ರಿ

ಬೆಂಗಳೂರು, ಆಗಸ್ಟ್ 17: 8 ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಮೈಕಾದ ಓಟದ ರಾಜ ಉಸೇನ್ ಬೋಲ್ಟ್ ಅವರು ಮುಂದೇನು ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬೋಲ್ಟ್ ಅವರು ತಮ್ಮ ನೆಚ್ಚಿನ ಫುಟ್ಬಾಲ್ ತಂಡ ಮ್ಯಾಂಚೆಸ್ಟರ್ ಯುನೈಟೆಡ್ ಸೇರುವುದಾಗಿ ಹೇಳಿಕೊಂಡಿದ್ದಾರೆ.

ಆಟಗಾರರ ಟ್ರಾನ್ಸ್ ಫರ್ ಭರಾಟೆ ಮುಂದುವರೆದಿದ್ದು, ಈ ಸೀಸನ್ ನಲ್ಲೇ ರೆಡ್ ಡೆವಿಲ್ಸ್ ತಂಡ ಸೇರಲು ಬೋಲ್ಟ್ ಉತ್ಸುಕರಾಗಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಜರ್ಸಿಯನ್ನು ಧರಿಸಲಿರುವ ಬೋಲ್ಟ್ ಸೆ.2 ರಂದು ಓಲ್ಡ್ ಟ್ರಾಫೋರ್ಡ್ ನಲ್ಲಿ ನಡೆಯಲಿರುವ ಬಾರ್ಸಿಲೋನ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಫುಟ್ಬಾಲ್ ಗೆ ಪಾದಾರ್ಪಣೆಗೈಯ್ಯಲಿದ್ದಾರೆ.

Usain Bolt to play for Manchester United


ರೆಡ್ ಡೆವಿಲ್ಸ್ ತಂಡದ ದಿಗ್ಗಜರಾದ ರಿಯಾನ್ ಗಿಗ್ಸ್ ಹಾಗೂ ಪಾಲ್ ಸ್ಕೋಲ್ಸ್‌ ರೊಂದಿಗೆ ಬೋಲ್ಟ್ ಆಡಲಿದ್ದಾರೆ. ವಿಶ್ವ ಚಾಂಪಿಯನ್ ಶಿಪ್‌ನಲ್ಲಿ 4 X 100 ಮೀ. ರಿಲೇಯಲ್ಲಿ ಕೊನೆಯ ಬಾರಿ ಭಾಗವಹಿಸಿದ ಬೋಲ್ಟ್ ಗಾಯಗೊಂಡು ಸ್ಪರ್ಧೆಯನ್ನು ಪೂರ್ಣಗೊಳಿಸಲಾಗದೆ ಕಣ್ಣೀರಿಟ್ಟು ವಿದಾಯ ಹೇಳಿದರು.

ಬೋಲ್ಟ್ 100 ಹಾಗೂ 200 ಮೀ. ಓಟದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಬೋಲ್ಟ್ ಜಾಗತಿಕ ಮಟ್ಟದ ಟೂರ್ನಿಯಲ್ಲಿ ಒಟ್ಟು 14 ಪದಕಗಳನ್ನು ಜಯಿಸಿದ್ದು, ಈಗ ತಮ್ಮ ದೀರ್ಘಕಾಲದ ಕನಸು ನನಸು ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅಥ್ಲೆಟಿಕ್ಸ್ ಅಲ್ಲದೆ ಫುಟ್ಬಾಲ್, ಕ್ರಿಕೆಟ್ ಆಡಿದ ಅನುಭವ ಬೋಲ್ಟ್ ಅವರಿಗಿದೆ.

Story first published: Wednesday, January 3, 2018, 10:06 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+