Venezuela Earthquake: ಮಗಳಿಗಾಗಿ ತಾಯಿ ಪ್ರಾಣತ್ಯಾಗ: ಫುಟ್ ಬಾಲ್ ಆಟಗಾರ ಲೂಕಾಸ್ ಟ್ರೆಜೊ ಕುಟುಂಬದ ಪವಾಡದ ನಿರೀಕ್ಷೆ ದುರಂತದಲ್ಲ
ವೆನೆಜುವೆಲಾದಲ್ಲಿ ಭೂಕಂಪ ಜನರಲ್ಲಿ ಭಯವನ್ನು ಸೃಷ್ಟಿಸಿವೆ. ಈ ದೇಶದಲ್ಲಿ ಸಂಭವಿಸಿದ ಅವಳಿ ಭೂಕಂಪಗಳು ದೇಶದಲ್ಲಿ ವಿನಾಶವನ್ನು ಮಾಡಿವೆ. ಸಾವಿರಾರು ಕಟ್ಟಡಗಳು, ಕನಸಿನ ಮನೆಗಳು ಧರಾಶಾಹಿಯಾಗಿವೆ. ಇತಿಹಾಸದ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ಇದಾಗಿದ್ದು, ಈ ಅನಾಹುತಕ್ಕೆ 900ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಭೂಕಂಪ ಬರೀ ನೋವನ್ನು ತಂದಿಲ್ಲ. ಬದಲಿಗೆ ಸಾಲು ಸಾಲು ಕಷ್ಟಗಳನ್ನು ಸೃಷ್ಟಿಸಿದೆ.
23ನೇ ಆವೃತ್ತಿಯ ಫಿಫಾ ವಿಶ್ವಕಪ್ ಅಮೆರಿಕ, ಕೆನಡಾ, ಮೆಕ್ಸಿಕೊದಲ್ಲಿ ನಡೆಯುತ್ತಿದೆ. ಈ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಅರ್ಜೆಂಟೀನಾ ಲ್ಯೂಕಾಸ್ ಟ್ರೆಜೊ ಅವರ ಕುಟುಂಬವೂ ಸಹ ಈ ಭೂಕಂಪಕ್ಕೆ ಸಿಲುಕಿದೆ. ಸ್ಟಾರ್ ಆಟಗಾರ ಪವಾಡ ನಡೆಯಲಿದೆ ಎಂಬ ಆಸೆಯೊಂದಿಗೆ ಕಳೆದ 72 ಗಂಟೆಗಳನ್ನು ದೂಡಿದ್ದಾರೆ. ಆದರೆ ಲ್ಯೂಕಸ್ ಟ್ರೆಜೋ ಕೇಳಿದ್ದು, ತನ್ನ ಕರ್ಣಗಳು ಕೇಳಲು ಬಯಸದ ಸುದ್ದಿಯನ್ನೇ.

ಲ್ಯೂಕಾಸ್ ಟ್ರೆಜೊ ಅವರ ಈ ಕರುಣಾಜನಕ ಕಥೆ ಜಗತ್ತಿನಾದ್ಯಂತ ಜನರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಲ್ಯೂಕಾಸ್ ಟ್ರೆಜೊ ಯಾನಿನಾ ಮಾರನೆಲ್ಲಾ ಹಾಗೂ ಅವರ ಇಬ್ಬರು ಮಕ್ಕಳಾದ ಆರೋನ್ (5 ವರ್ಷ) ಮತ್ತು ಐನ್ಹೋವಾ (7 ವರ್ಷ) ಅವರ ಮೃತದೇಹಗಳು ಲ್ಯೂಕಾಸ್ ಅವರ ಭರವಸೆಯ ಬೆಳಕಿಗೆ ಪೆಟ್ಟು ನೀಡಿವೆ. ಕೊನೆಯ ಕ್ಷಣದವರೆಗೂ ಭರವಸೆ ಕಳೆದುಕೊಳ್ಳದೆ ತನ್ನ ಕುಟುಂಬಕ್ಕಾಗಿ ಹೋರಾಡಿದ ಒಬ್ಬ ಧೀರ ತಂದೆಯ ಧೈರ್ಯ ಈಗ ವಿಶ್ವದ ಚಿತ್ತವನ್ನು ಕದ್ದಿದೆ.
ಆಗಿದ್ದೇನು?
ಕಳೆದ ಜೂನ್ 24 ರಂದು ವೆನೆಜುವೆಲಾದಲ್ಲಿ ಸರಣಿ ಭೂಕಂಪಗಳು ಸಂಭವಿಸಿದಾಗ ಲ್ಯೂಕಾಸ್ ಟ್ರೆಜೊ ಅವರು ಕೊಪಾ ವೆನೆಜುವೆಲಾ ಪಂದ್ಯವನ್ನಾಡಲು ಕಾರಾಕಾಸ್ ನಗರದಲ್ಲಿದ್ದರು. ಭೂಕಂಪದ ಸುದ್ದಿ ತಿಳಿದ ಬಳಿಕ, ಮನೆಗೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದರು. ಇವರು ರಕ್ಷಣಾ ಸಿಬ್ಬಂದಿ, ಸ್ನೇಹಿತರು ಮತ್ತು ಸ್ವಯಂಸೇವಕರೊಂದಿಗೆ ಸೇರಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಮೂರು ದಿನಗಳ ಊಟ, ನಿದ್ರೆ ಇಲ್ಲದೆ ತನ್ನ ಕುಟುಂಬಕ್ಕಾಗಿ ಹುಡುಕಾಟ ನಡೆಸಿದ್ದರು. ಲ್ಯೂಕಾಸ್ ಅವರೊಂದಿಗೆ ಹುಡುಕಾಟದಲ್ಲಿ ಪಾಲ್ಗೊಂಡಿದ್ದ ವೆನೆಜುವೆಲಾದ ಮತ್ತೊಬ್ಬ ಫುಟ್‌ಬಾಲ್ ಆಟಗಾರ ಎಡ್ಸನ್ ಟೋರ್ಟೊಲೆರೊ ಈ ಹೃದಯ ವಿದ್ರಾವಕ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಮಗಳಿಗೆ ತಾಯಿಯ ರಕ್ಷಾ ಕವಚ
ಇಂತಹದ್ದೇ ಮತ್ತೊಂದು ಕಥೆಗೆ ಮಾರಿಟಿಮೊ ಡಿ ಲಾ ಗ್ವೈರಾ' ಕ್ಲಬ್‌ನ ಫುಟ್‌ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ ಸಾಕ್ಷಿಯಾಗಿದ್ದಾರೆ. ಭೂಕಂಪದ ತೀವ್ರತೆಗೆ ಲಾ ಗ್ವೈರಾದಲ್ಲಿದ್ದ ಹೆಕ್ಟರ್ ಬೆಲ್ಲೊ ಅವರ ಮನೆ ಕುಸಿದು ಬಿದ್ದಿದ್ದು, ಹೆಕ್ಟರ್ ಅವರ ಪತ್ನಿ ಆಂಡ್ರಿಯಾ ಬೆಲ್ಲೊ, ಒಂದು ವರ್ಷದ ಪುಟ್ಟ ಮಗಳು 'ಅಲಾನಾ'ಳನ್ನು ರಕ್ಷಿಸಲು ಆಕೆಗೆ ತನ್ನದೇ ದೇಹವನ್ನು ಕವಚದಂತೆ ಅಡ್ಡಿಗಟ್ಟಿನಿಂತಿದ್ದಾರೆ. ಕಟ್ಟಡದ ಅವಶೇಷಗಳು ತಾಯಿಯ ಮೇಲೆ ಬಿದ್ದ ಪರಿಣಾಮ ಹೆಕ್ಟರ್ ಬೆಲ್ಲೊ ಪತ್ನಿ ಸಾವನ್ನಪ್ಪಿದ್ದಾರೆ. ರಕ್ಷಣಾ ಸಿಬ್ಬಂದಿ ಅವಶೇಷಗಳ ತೆರವು ನಡೆಸುತ್ತಿದ್ದಾಗ ಹೆಕ್ಟರ್ ಬೆಲ್ಲೊ ಪತ್ನಿಯ ಮೃತ ದೇಹ ಪತ್ತೆಯಾಗಿದ್ದು, ಮಗುವಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹೆಕ್ಟರ್ ಬೆಲ್ಲೊ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ವಕ ಪೋಸ್ಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications