Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫುಟ್ಬಾಲ್ ವಾಸ್ತುಶಿಲ್ಪಿ, ಎಎಫ್‌ಸಿ ಮಾಜಿ ಕಾರ್ಯದರ್ಶಿ ವೇಲಪ್ಪನ್ ಇನ್ನಿಲ್ಲ

Veteran football administrator Peter Velappan passes away

ಕೌಲಾಲಂಪುರ್, ಅಕ್ಟೋಬರ್ 20: ಮಲೇಷ್ಯನ್ ಫುಟ್ಬಾಲ್ ಅಸೋಸಿಯೇಷನ್ ನ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದ ಪೀಟರ್ ವೇಲಪ್ಪನ್ ಶನಿವಾರ (ಅಕ್ಟೋಬರ್ 20) ಸಾವನ್ನಪ್ಪಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ವೇಲಪ್ಪನ್ ಅವರಿಗೆ ಏಷ್ಯಾನ್ ಫುಟ್ಬಾಲ್ ನ ವಾಸ್ತುಶಿಲ್ಪಿ ಎಂಬ ಬಿರುದಿತ್ತು.

ಯುನೈಟೆಡ್ ಕಿಂಗ್ಡಮ್ ನ ಬರ್ಮಿಂಗ್ ಹ್ಯಾಮ್ ಯೂನಿವರ್ಸಿಟಿಯ ಲೌಬರೋ ಕಾಲೇಜು ಮತ್ತು ಕೆನಡಾದ ಮೆಕ್ಗಿಲ್ ಯೂನಿವರ್ಸಿಟಿಯಲ್ಲಿ ಓದಿದ್ದ ವೇಲಪ್ಪನ್, 1978ರಿಂದ 2007ರ ವರೆಗೆ ಏಷ್ಯಾನ್ ಫುಟ್ಬಾಲ್ ಕನ್ಫಿಡರೇಶನ್ (ಎಎಫ್‌ಸಿ) ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಏಷ್ಯಾದ್ಯಾಂತ ಫುಟ್ಬಾಲ್ ಜನಪ್ರಿಯಗೊಳ್ಳುವಲ್ಲಿ ವೇಲಪ್ಪನ್ ಪಾತ್ರ ಮಹತ್ವದ್ದಾಗಿತ್ತು.

ಎಎಫ್‌ಸಿ ಮುಖ್ಯ ಕಾರ್ಯದರ್ಶಿ ವಿಂಡ್ಸರ್ ಜಾನ್ ಪ್ರತಿಕ್ರಿಯಿಸಿ, 'ಏಷ್ಯಾನ್ ಫುಟ್ಬಾಲ್ ಬೆಳೆಸುವ ನಿಟ್ಟಿನಲ್ಲಿ ಪೀಟರ್ ಅವರ ದೂರದೃಷ್ಟಿತ್ವ ನಮಗೆಲ್ಲರಿಗೂ ಸ್ಫೂರ್ತಿದಾಯಕವೆನಿಸಲಿದೆ. ಎಎಫ್‌ಸಿ ಮತ್ತು ಫುಟ್ಬಾಲ್ ಅಸೋಸಿಯೇಷನ್ ಆಫ್ ಮಲೇಷ್ಯದ ಜವಾಬ್ದಾರಿ ಹೊತ್ತು ಅವರು ಮಾಡಿರುವ ಸಾಧನೆಗಳು ಎಂದಿಗೂ ಅವಿಸ್ಮರಣೀಯ' ಎಂದಿದ್ದಾರೆ.

Story first published: Saturday, October 20, 2018, 17:32 [IST]
Other articles published on Oct 20, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+