Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ, ಛೆಟ್ರಿಯ ಫಿಟ್ನೆಸ್ ನನ್ನನ್ನು ಸ್ಫೂರ್ತಿಗೊಳಿಸಿತು: ಪ್ರೀತಂ ಕೊಟಾಲ್

Virat Kohli, Sunil Chhetris fitness levels motivated me: Pritam Kotal

ನವದೆಹಲಿ: ಆಧುನಿಕ ಯುಗದ ಕ್ರೀಡಾಪಟುಗಳು ಆರೋಗ್ಯದ ಬಗ್ಗೆ ಬಹಳ ಜಾಗ್ರತೆ ವಹಿಸುತ್ತಾರೆ. ಅವರು ಯಾವತ್ತಿಗೂ ಇನ್ನೊಬ್ಬರಿಂದ ಹೇಳಿಸಿಕೊಳ್ಳಲು ಬಯಸುವುದಿಲ್ಲ, ಅವರು ಇತರರಿಗೆ ಸ್ಫೂರ್ತಿಯಾಗಿರುತ್ತಾರೆ ಎಂದು ಭಾರತೀಯ ಫುಟ್ಬಾಲ್ ತಂಡದ ಡಿಫೆಂಡರ್ ಪ್ರೀತಂ ಕೊಟಾಲ್ ಹೇಳಿದ್ದಾರೆ.

ಫಿಟ್ನೆಸ್ ವಿಚಾರದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಉಲ್ಲೇಖಿಸಿರುವ ಪ್ರೀತಮ್ ಕೊಟಾಲ್, ಫಿಟ್ನೆಸ್-ದೈಹಿಕ ಆರೋಗ್ಯದ ವಿಚಾರದಲ್ಲಿ ಕೊಹ್ಲಿ ಮತ್ತು ಛೆಟ್ರಿ ಇಬ್ಬರೂ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದಿದ್ದಾರೆ.

'ಎಐಎಫ್‌ಎಫ್‌ ಅಕಾಡೆಮಿ ದಿನಗಳಲ್ಲಿ ನಾವು ಒಬ್ಬ ಕ್ರೀಡಾಪಟು ಹೇಗೆ ಆಹಾರ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿದುಕೊಂಡಿದ್ದೇವೆ. ನಾನು ವಿರಾಟ್ ಕೊಹ್ಲಿಯ ಫಿಟ್ನೆಸ್ ವಿಧಾನಗಳು, ಆಹಾರ ಕ್ರಮ, ಅಭ್ಯಾಸ, ವೈಯಕ್ತಿಕ ಟ್ರೇನರ್ ನೀಡಿರುವ ಮಾರ್ಗಸೂಚಿ ಮೀರಿ ಆತ ಹೋಗುವುದಿಲ್ಲ ಎಂದೆಲ್ಲಾ ಓದಿದ್ದೆ,' ಎಂದು ಕೊಟಾಲ್ ತಿಳಿಸಿದ್ದಾರೆ.

'ಸುನಿಲ್ ಭಾಯ್ ಕೂಡ ನಮಗೆ ಆಹಾರ ಕ್ರಮಗಳನ್ನು ಪಾಲಿಸಲು ಯೋಜನೆ ರೂಪಿಸಲು ನೆರವಾಗುತ್ತಾರೆ,' ಎಂದು ಕೊಟಾಲ್ ಹೇಳಿದ್ದಾರೆ.

Story first published: Tuesday, May 25, 2021, 19:19 [IST]
Other articles published on May 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+