Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಖ್ಯಾತ ಫುಟ್‌ಬಾಲ್‌ ವೀಕ್ಷಕ ವಿವರಣೆಕಾರ, ಫುಟ್‌ಬಾಲ್‌ ದನಿ ನೋವಿ ಕಪಾಡಿಯಾ ಇನ್ನಿಲ್ಲ

Voice of football Novy Kapadia passes away due to health complications

ಭಾರತದಲ್ಲಿ ಫುಟ್ಬಾಲ್ ಕ್ರೀಡೆಯ ಬೆಳವಣಿಗೆಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಶ್ರಮವಹಿಸಿದ ಖ್ಯಾತ ಫುಟ್ಬಾಲ್ ಕಾಮೆಂಟೆಟರ್ ಹಾಗೂ ಪತ್ರಕರ್ತರಾಗಿದ್ದ ನೋವಿ ಕಪಾಡಿಯ ಇಂದು ಕೊನೆಯುಸಿರೆಳೆದಿದ್ದಾರೆ. ನೋವಿ ಕಪಾಡಿಯಾ ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿದ್ದರು, ಇದು ಬೆನ್ನುಮೂಳೆ ಮತ್ತು ಮೆದುಳಿನ ನರಗಳು ಏಕ ಸಮಯದಲ್ಲಿ ಕಾರ್ಯವನ್ನು ಕಳೆದುಕೊಳ್ಳುವಂತೆ ಮಾಡುವ ಖಾಯಿಲೆಯಾಗಿತ್ತು. ಹೀಗೆ ಮೋಟಾರ್‌ ನ್ಯೂರನ್ ಖಾಯಿಲೆಯಿಂದ ಬಳಲುತ್ತಿದ್ದ ನೋವಿ ಕಪಾಡಿಯಾ ಮನೆಯಲ್ಲಿಯೇ ಕಳೆದೆರಡು ವರ್ಷಗಳಿಂದ ಚಿಕಿತ್ಸೆಯೊಂದಿಗೆ ಬಂಧಿಯಾಗಿದ್ದರು ಹಾಗೂ ಕಳೆದ ಒಂದು ತಿಂಗಳಿನಿಂದ ಜೀವ ಸಹಾಯಕ ಬಳಸಿ ಬದುಕಿದ್ದರು. ಆದರೆ ಇಂದು ನೋವಿ ಕಪಾಡಿಯಾ ಇಹಲೋಕ ತ್ಯಜಿಸಿದ್ದು ಫುಟ್‌ಬಾಲ್‌ ಪ್ರೇಕ್ಷಕರು ಸಂತಾಪ ಸೂಚಿಸಿದ್ದಾರೆ.

ಇನ್ನು ಕೆಲ ದಿನಗಳ ಹಿಂದೆ ನೋವಿ ಕಪಾಡಿಯಾ ಪಿಂಚಣಿ ಹಣ ಬರದೇ ಇರುವುದರ ಕುರಿತು ಸುದ್ದಿಗೀಡಾಗಿದ್ದರು. ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದರೂ ಪಿಂಚಣಿ ಹಣ ಕೈಸೇರದೇ ನೋವಿ ಕಪಾಡಿಯಾ ಚಿಂತೆಗೀಡಾಗಿದ್ದ ವಿಷಯ ತಿಳಿದ ಕೂಡಲೇ ಕ್ರೀಡಾ ಸಚಿವ ಕಿರಣ್ ರಿಜುಜು ಕ್ರೀಡಾ ಇಲಾಖೆ ಕಡೆಯಿಂದ 4 ಲಕ್ಷ ಬಿಡುಗಡೆ ಮಾಡಿದ್ದರು.

ನೋವಿ ಕಪಾಡಿಯಾ ನಿಧನಕ್ಕೆ ಫುಟ್ ಬಾಲ್ ಪ್ರಿಯರು ಸೇರಿದಂತೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

Story first published: Thursday, November 18, 2021, 21:22 [IST]
Other articles published on Nov 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+