ಕಷ್ಟಗಳನ್ನೆಲ್ಲ ಮೆಟ್ಟಿ ನಿಂತ ಸ್ಟೀಫನ್; ದಕ್ಷಿಣ ಆಫ್ರಿಕಾ ವಿರುದ್ಧ ಕೆನಡಾ ಗೆಲುವಿನ ಹೀರೋ
ಫಿಫಾ ವಿಶ್ವಕಪ್ ರೋಚಕತೆ ಹೆಚ್ಚಾಗುತ್ತಿದೆ. ನಾಕೌಟ್ ಹಂತದ ಪಂದ್ಯಗಳು ಆರಂಭವಾಗಿವೆ. ಲಾಸ್ ಏಂಜಲೀಸ್‌ನಲ್ಲಿ ನಡೆದ 23ನೇ ಫಿಫಾ ವಿಶ್ವಕಪ್ ಟೂರ್ನಿಯ 32ನೇ ರೌಂಡ್ ಪಂದ್ಯದಲ್ಲಿ ಕೆನಡಾ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕೆಚ್ಚೆದೆಯ ಹೋರಾಟ ನೀಡಿದ ಕೆನಡಾ 1-0 ಗೋಲುಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ರೌಂಡ್ ಆಫ್ 16ಗೆ ಪ್ರವೇಶ ಪಡೆದಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕೆನಡಾ ತಂಡ ಅಬ್ಬರಿಸಿದೆ. ಆರಂಭದಿಂದಲೂ ಕೆನಡಾ ಆಕ್ರಮಣಕಾರಿ ಆಟವನ್ನು ಆಡಿ ಎಲ್ಲರ ಗಮನ ಸೆಳೆಯಿತು. ದಕ್ಷಿಣ ಆಫ್ರಿಕಾದ ತಂತ್ರಕ್ಕೆ ಪ್ರತಿ ತಂತ್ರವನ್ನು ಹೆಣೆದುಕೊಂಡು ಸಾಗಿದ ಕೆನಡಾ ತಂಡ ಮೊದಲಾವಧಿಯಲ್ಲೂ ಹಲವು ಬಾರಿ ಗೋಲು ಬಾರಿಸಲು ಮುಂದಾಯಿತು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ಗೋಲಿ, ಕೆನಡಾ ಆಸೆಗೆ ಪೆಟ್ಟು ನೀಡಿದರು.

ಎರಡೂ ತಂಡಗಳು 32ನೇ ರೌಂಡ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿದವು. ಗೋಲುಗಳನ್ನು ಸುಲಭವಾಗಿ ಬಿಟ್ಟುಕೊಡಲಿಲ್ಲ. ಪರಿಣಾಮ ಪಂದ್ಯ ರೋಚಕತೆ ಹುಟ್ಟಿಸಿತ್ತು. ಪಂದ್ಯದ ಕೊನೆಯ ಕ್ಷಣದಲ್ಲಿ ಕೆನಡಾ ಪರ ಸ್ಟೀಫನ್ ಯುಸ್ಟಾಕಿಯೋ ಅಮೋಘ ಪ್ರದರ್ಶನ ನೀಡಿ ಗೋಲು ಬಾರಿಸಿದರು. ಈ ಮೂಲಕ ಕೆನಡಾ ರೌಂಡ್ ಆಫ್ 16 ಪ್ರವೇಶಿಸಲು ನೆರವಾದರು.
ಕಣ್ಣೀರ ಕಥೆ
ಸ್ಟೀಫನ್ ಯುಸ್ಟಾಕಿಯೋ ಮೈದಾನದಲ್ಲಿ ಎಷ್ಟು ಬಲಿಷ್ಠವಾಗಿ ಕಾಣುತ್ತಾರೋ, ಅಷ್ಟೇ ನೋವನ್ನು ಕಂಡಿರುವ ಆಟಗಾರ. 2023ರ ಏಪ್ರಿಲ್‌ನಲ್ಲಿ ಪೋರ್ಟೊ ಕ್ಲಬ್ ಪರ ಆಡುತ್ತಿದ್ದಾಗ ಅವರ ತಾಯಿ ಎಸ್ಮೆರಾಲ್ಡಾ ಬ್ರೈನ್ ಕ್ಯಾನ್ಸರ್‌ನಿಂದ ನಿಧನರಾದರು. ಕೇವಲ ಒಂದು ವರ್ಷದ ಅವಧಿಯಲ್ಲಿ, ಅವರ ತಂದೆ ಕೂಡ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ನಿಧನರಾದರು. ಈ ಭೀಕರ ಆಘಾತಗಳ ನಡುವೆಯೂ ಅವರ ಗೆಳತಿ ಕಾನ್‌ಸ್ಟಾಂಟಾ ಮತ್ತು ಹೆಣ್ಣು ಮಗು ಬೆನೆಡಿಟಾ ಅವರ ಬದುಕಿಗೆ ಆಸರೆಯಾದರು. ತಂದೆ ತಾಯಿಯನ್ನು ಕಳೆದುಕೊಂಡ ನೋವು ಸ್ಟೀಫನ್ ಯುಸ್ಟಾಕಿಯೋ ಅವರ ಮುಖದಲ್ಲಿ ಎದ್ದು ಕಾಣುತ್ತದೆ.
ಪೋರ್ಚುಗೀಸ್ ಮೂಲದ ಪೋಷಕರಿಗೆ ಜನಿಸಿದ ಯುಸ್ಟಾಕಿಯೋ ಅವರಿಗೆ ಫುಟ್‌ಬಾಲ್ ಎಂದರೆ ಪ್ರೀತಿ. ಬಾಲ್ಯದಲ್ಲೇ ಫುಟ್ಬಾಲ್ ಕ್ರೀಡೆಯ ಮೇಲೆ ಆಸಕ್ತಿ ಬೆಳೆಸಿಕೊಂಡು, ನಡೆದಾಡಲು ಕಲಿಯುವ ವಯಸ್ಸಿನಲ್ಲೇ ಫುಟ್ಬಾಲ್ ಆಡಲು ಆರಂಭಿಸಿದರು. ಇವರು ತಮ್ಮ ವೃತ್ತಿ ಜೀವನದುದ್ದಕ್ಕೂ ಕೆನಡಾ ಮತ್ತು ಪೋರ್ಚುಗಲ್ ದೇಶಗಳ ನಡುವೆ ತಮ್ಮ ಆಟವಾಡುತ್ತಾ ಬೆಳೆದರು. ಈಗ ಕೆನಡಾ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.
ಪಂದ್ಯ ಮುಗಿದ ಬಳಿಕ ಅತ್ಯಂತ ಭಾವುಕರಾಗಿ ಮಾತನಾಡಿದ ಯುಸ್ಟಾಕಿಯೋ, "ನಾನು ಮಾಡುತ್ತಿರುವ ಪ್ರತಿಯೊಂದು ಕೆಲಸವೂ ನನ್ನ ಕುಟುಂಬಕ್ಕೆ ಸೇರಿದ್ದು. ನನ್ನ ತಂದೆ-ತಾಯಿಗಾಗಿ, ಗೆಳತಿ, ಮಗಳು ಮತ್ತು ನನ್ನ ದೇಶದ ಜನರಿಗಾಗಿ ಎಂದು ಕಣ್ಣೀರು ತುಂಬಿದ ಕಣ್ಣುಗಳಿಂದ ನುಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications