
ಗೋವಾ, ಡಿಸೆಂಬರ್,11 : ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಜಯ ಕಾಣಲು ಇನ್ನೂ ಪರದಾಡುತ್ತಿರುವ ಒಡಿಶಾ ಎಫ್ ಸಿ ಶನಿವಾನ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಎಫ್ ಸಿ ಗೋವಾ ವಿರುದ್ಧ ಕಠಿಣ ಸವಾಲನ್ನು ಎದುರಿಸಲಿದೆ.
ನಾಲ್ಕು ಪಂದ್ಯಗಳ ನಂತರವೂ ಜಯ ಗಳಿಸುವಲ್ಲಿ ವಿಫಲವಾಗಿರುವ ಭುವನೇಶ್ವರ ಮೂಲದ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಜಯವೊಂದನ್ನು ದಾಖಲಿಸುವ ಮೂಲಕ ಗೋವಾ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಸ್ಟುವರ್ಟ್ ಬಾಕ್ಸ್ಟರ್ ಪಡೆ ಇದುವರೆಗೂ ಕಠಿಣ ಹಾದಿಯನ್ನು ಸಾಗಿ ಬಂದಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿದೆ. ಅಲ್ಲದೆ ಈ ಋರುವಿನಲ್ಲಿ ಇದುವರೆಗೂ ಒಮ್ಮೆಯೂ ಕ್ಲೀನ್ ಶೀಟ್ ಸಾಧನೆ ಮಾಡಿರಲಿಲ್ಲ. ಪ
ಪ್ರಸಕ್ತ ಐಪಿಎಲ್ ನಲ್ಲಿ ಐಗರ್ ಆಂಗುಲೋ ಅತಿ ಹೆಚ್ಚು ಗೋಲುಗಳಿಸಿದವರ ಪಟ್ಟಿಯಲ್ಲಿ ಸದ್ಯ ಅಗ್ರ ಸ್ಥಾನದಲ್ಲಿದ್ದಾರೆ. ದುರ್ಬಲ ಡಿಫೆನ್ಸ್ ವಿಭಾಗವನ್ನು ಹೊಂದಿರುವ ಒಡಿಶಾ ವಿರುದ್ಧ ತನ್ನ ಗೋಲು ಗಳಿಕೆಯ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯವಿದೆ.
ಇದುವರೆಗೂ ಗೋವಾ ತಂಡ ಎದುರಿಸಿರುವ ಎಲ್ಲ ತಂಡಗಳು ಒಂದಲ್ಲಾ ಒಂದು ರೀತಿಯಲ್ಲಿ ಪ್ರಭುತ್ವ ಸಾಧಿಸಿರುವುದು ಗಮನಾರ್ಹ. ಗೋವಾ ಪಡೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಅಗ್ರ ಸ್ಥಾನದಲ್ಲಿದೆ (58%). ಮತ್ತೊಂದು ಕಠಿಣ ಸವಾಲು ಇದೆ ಎಂಬುದು ಬಾಕ್ಸ್ಟರ್ ಅವರಿಗೆ ಮನವರಿಕೆಯಾಗಿದೆ.
"ಈ ಸ್ಟ್ರೈಕರ್ (ಆಂಗುಲೋ) ಗೋಲು ಗಳಿಸುತ್ತಿದ್ದಾರೆ, ಅದು ನಿಜವಾಗಿಯೂ ಸವಾಲಿನ ಸಂಗತಿ," ಎಂದಿರುವ ಇಂಗ್ಲೆಂಡಿನ ಕೋಚ್, "ತಂಡದ ಉಳಿದ ಆಟಗಾರರು ತಾವೇನು ಮಾಡಬೇಕಾಗಿದೆಯೊ ಅದಕ್ಕೆ ಬದ್ಧರಾಗಿರುತ್ತಾರೆ. ಇದು ಪಂದ್ಯದ ಮೇಲೆ ಪ್ರಭುತ್ವ ಸಾಧಿಸಲು ಅವಕಾಶಕ್ಕೆ ಅಡ್ಡಿ ನೀಡಿದಂತಾಗುತ್ತದೆ. ಇದು ನಮ್ಮ ತಂಡಕ್ಕೆ ನಿಜವಾಗಿಯೂ ಒಂದು ರೀತಿಯಲ್ಲಿ ಅಪಾಯ ಇದ್ದಂತೆ. ಅವರು ಉತ್ತಮ ತಂಡಗಳಲ್ಲಿ ಒಂದು, ಆದ್ದರಿಂದ ನಮ್ಮ ಗೌರವಕ್ಕೆ ಸೂಕ್ತರೆನಿಸಿದ್ದಾರೆ," ಎಂದರು.
ಇನ್ನೊಂದೆಡೆ ಗೋವಾ ತಂಡ ಗೋಲಿನ ಹಬ್ಬ ಮಾಡಲು ಸಜ್ಜಾಗಿದೆ. ಆಂಗೊಲೊ ಹೊರತಾಗಿ ಜಾರ್ಜ್ ಓರ್ಟಿಜ್ ಮೆಂಡೊನ್ಸಾ, ಬ್ರೆಂಡಾನ್ ಫೆರ್ನಾಂಡೀಸ್, ಮತ್ತು ಎಡು ಬೇಡಿಯಾ ಗೋಲು ಗಳಿಸುವ ಸಾಮರ್ಥ್ಯ ಹೊಂದಿರುವ ಆಟಗಾರರು. ಜುವಾನ್ ಫೆರಾಂಡೋ ಪಡೆ ಮೊದಲ ಬಾರಿಗೆ ಕ್ಲಿನ್ ಶೀಟ್ ಸಾಧನೆ ಮಾಡುವ ಗುರಿ ಹೊಂದಿದೆ.
"ನಾವು ತರಬೇತಿಯಲ್ಲಿ ತೊಡಗಿಕೊಡಿರುವಾವ ಕೆಲವೊಂದು ವಿಷಯಗಳ ಬಗ್ಗೆ ಚರ್ಚೆ ಆಗಿದೆ, ಆ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದೇವೆ. ನಾವು ಸುಧಾರಣೆ ಕಾಣಲು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ," ಎಂದು ಫೆರಾಂಡೊ ಹೇಳಿದ್ದಾರೆ. "ಡೆಫೆನ್ಸ್ ವಿಭಾಗದ ಬಗ್ಗೆ ನನಗೆ ಖುಷಿಯಾಗಿದೆ, ಏಕೆಂದರೆ ಈ ವಿಭಾಗದಲ್ಲಿ ತಂಡ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೆಲವೊಮ್ಮೆ ಡಿಫೆನ್ಸ್ ವಿಭಾಗದ ಮೇಲೆ ಹೆಚ್ಚಿನ ಒತ್ತಡವಿರುವುದು ಅನಿವಾರ್ಯವಾಗಿರುತ್ತದೆ. ನಾವು ಇನ್ನೂ ಹೆಚ್ಚಿನ ರೀತಿಯಲ್ಲಿ ಆಕ್ರಮಣಕಾರಿಯಾಗಿ ಆಡಬೇಕಾಗಿದೆ," ಎಂದರು.