ಫೀಫಾ 2018: ಚಾಂಪಿಯನ್ನರಿಗೆ 'ಶಾಪ', 'ಜರ್ಮನಿ' ಹೊಸ ಸೇರ್ಪಡೆ

ಮಾಸ್ಕೋ, ಜೂನ್ 28 : ಫೀಫಾ ವಿಶ್ವಕಪ್ ಟೂರ್ನಮೆಂಟ್ ಗಳಲ್ಲಿ ಹಾಲಿ ಚಾಂಪಿಯನ್ ತಂಡ ಇಲ್ಲಿ ತನಕ ಉತ್ತಮ ಪ್ರದರ್ಶನ ನೀಡಿದ ಉದಾಹರಣೆಗಳಿಲ್ಲ. ಸತತವಾಗಿ ಕಪ್ ಗೆಲ್ಲುವ ಕನಸು ಹೊತ್ತಿದ್ದ ಜರ್ಮನಿ ತಂಡಕ್ಕೆ ದಕ್ಷಿಣ ಕೊರಿಯಾ ತಂಡ ಆಘಾತ ನೀಡಿತು.
2018ರ ಇಡೀ ಟೂರ್ನಿಯಲ್ಲಿ ಜರ್ಮನಿ ಗೆದ್ದಿದ್ದು ಒಂದು ಪಂದ್ಯ, ಗಳಿಸಿದ್ದು, ಕೇವಲ ಎರಡು ಗೋಲು. ಚಾಂಪಿಯನ್ ತಂಡಗಳು ಈ ರೀತಿ ಮೊದಲ ಲೀಗ್ ಹಂತದಲ್ಲೇ ಮುಗ್ಗರಿಸಿದ್ದು ಇದೇ ಮೊದಲಲ್ಲ. ವಿಶ್ವಕಪ್ ಇತಿಹಾಸದಲ್ಲಿ ಈವರೆಗೂ ಆರು ಬಾರಿ ಮಾತ್ರವೇ ಹಾಲಿ ಚಾಂಪಿಯನ್ ತಂಡ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದೆ.
ಎರಡನೇ ಮಹಾಯುದ್ಧದ ಬಳಿಕ ಜರ್ಮನಿ ತಂಡವು ಇದೇ ಮೊದಲ ಬಾರಿಗೆ ಮೊದಲ ಸುತ್ತಿನಿಂದಲೇ ನಿರ್ಗಮಿಸಿದೆ. ಈ ಶತಮಾನದಲ್ಲಿ 4ನೇ ಬಾರಿ ಈ ರೀತಿ ನಡೆದಿದೆ. 2002ರ ಚಾಂಪಿಯನ್ ಬ್ರೆಜಿಲ್ ಮಾತ್ರ 2006ರ ವಿಶ್ವಕಪ್ನಲ್ಲಿ ಗುಂಪು ಹಂತವನ್ನು ದಾಟಿತ್ತು. ಉಳಿದಂತೆ ಇಟಲಿ(1950), ಬ್ರೆಜಿಲ್(1966), ಫ್ರಾನ್ಸ್(2002), ಇಟಲಿ(2010), ಸ್ಪೇನ್(2014) ಈ ರೀತಿ ಕಳಪೆ ಪ್ರದರ್ಶನ ನೀಡಿವೆ.

1950: ಚಾಂಪಿಯನ್ ಇಟಲಿ
ಬ್ರೆಜಿಲ್ಲಿನಲ್ಲಿ ನಡೆದ 1950ರ ಫೀಫಾ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಇಟಲಿ ತಂಡದ ಕನಸು ಭಗ್ನವಾಯಿತು. ಎರಡನೇ ಮಹಾಯುದ್ಧದ ನಂತರ ನಡೆದ ವಿಶ್ವಕಪ್ ಟೂರ್ನೆಮೆಂಟ್ ಇದಾಗಿತ್ತು. 1949ರ ವಿಮಾನ ಅಪಘಾತದಲ್ಲಿ ಅನೇಕ ಇಟಲಿಯನ್ನರು ಮೃತರಾಗಿದ್ದರು. ಈ ದುಃಖದಲ್ಲೇ ತೆರಳಿದ ಟೊರಿನೊ ತಂಡವು ಸಮುದ್ರದ ಮೂಲಕ ತೆರಳಬೇಕಾಯಿತು. ಎರಡು ಪಂದ್ಯವಾಡಿದ ಇಟಲಿಗೆ ಸ್ವೀಡನ್ 3-2ರ ಸೋಲುಣಿಸಿತು. ಪರುಗ್ವೆ ವಿರುದ್ಧ 2-0 ಫಲಿತಾಂಶ ಬಂದರೆ, ಇಟಲಿ ಟೂರ್ನಮೆಂಟ್ ಯಿಂದ ಹೊರ ನಡೆಯಿತು.

1966ರಲ್ಲಿ ಬ್ರೆಜಿಲ್
ಬ್ಲ್ಯಾಕ್ ಪರ್ಲ್ ಎಂದೆನಿಸಿದ್ದ ಪೀಲೆ ಅವರ ಬ್ರೆಜಿಲ್ ತಂಡ ಸತತ ವಿಶ್ವಕಪ್ ಗೆದ್ದ ಲಯದಲ್ಲಿತ್ತು. ಆದರೆ, 1966ರಲ್ಲಿ ಪೀಲೆ ಹಾಗೂ ಗರಿಂಚ ಗೋಲು ಗಳಿಸಿ ಬಲ್ಗೇರಿಯಾ ವಿರುದ್ಧ 2-0 ಗೆಲುವು ಸಾಧಿಸಿತು. ಆದರೆ, ಬಲ್ಗೇರಿಯಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಪೀಲೆ, ಹಂಗೇರಿ ವಿರುದ್ಧ ಆಡಲಿಲ್ಲ. 3-1ರಲ್ಲಿ ಬ್ರೆಜಿಲ್ ಸೋಲು ಅನುಭವಿಸಿತು. ಪೋರ್ಚುಗಲ್ ವಿರುದ್ಧ ಬ್ರೆಜಿಲ್ 3-1ರಲ್ಲಿ ಸೋಲು ಕಂಡು, ಟೂರ್ನಮೆಂಟ್ ನಿಂದ ಹೊರ ಬಿದ್ದಿತು.

2002ರಲ್ಲಿ ಫ್ರಾನ್ಸ್
1998ರಲ್ಲಿ ತವರು ನೆಲದಲ್ಲಿ ವಿಶ್ವಕಪ್ ಗೆದ್ದಿದ್ದ ಫ್ರಾನ್ಸ್, 2000ರಲ್ಲಿ ಯುರೋಪಿಯನ್ ಚಾಂಪಿಯನ್ ಜಯಿಸಿತ್ತು. 2002ರಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿತ್ತು. ಜಪಾನ್ ಹಾಗೂ ದಕ್ಷಿಣ ಕೊರಿಯಾದಲ್ಲಿ ನಡೆದ ಟೂರ್ನಮೆಂಟ್ ನಲ್ಲಿ ಜಿನೆದಿನ್ ಜಿದಾನೆ ಗಾಯಾಳುವಾಗಿ ಪಂದ್ಯ ಮಿಸ್ ಮಾಡಿಕೊಂಡರು. ಸೆನೆಗಲ್ ವಿರುದ್ಧದ ಮೊದಲ ಪಂದ್ಯದಲ್ಲಿ 1-0 ಅಂತರದಲ್ಲಿ ಫ್ರಾನ್ಸ್ ಸೋಲು ಅನುಭವಿಸಿತು.
ಉರುಗ್ವೆ ವಿರುದ್ಧ ಡ್ರಾ ಸಾಧಿಸಿದ ಪಂದ್ಯದಲ್ಲಿ ಸ್ಟಾರ್ ಆಟಗಾರ ಥಿಯರಿ ಹೆನ್ರಿ ರೆಡ್ ಕಾರ್ಡ್ ಪಡೆದರು. ಕೊನೆ ಪಂದ್ಯಕ್ಕೆ ಜಿದಾನೆ ಲಭ್ಯರಾದರೂ ಡೆನ್ಮಾರ್ಕ್ ವಿರುದ್ಧ 2-0 ಅಂತರದಲ್ಲಿ ಸೋತು ಹೀನಾಯವಾಗಿ ಹೊರ ಬಿದ್ದಿತು.

ಇಟಲಿ 2010
ಜರ್ಮನಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕಪ್ ಎತ್ತಿದ್ದ ಅಜ್ಜುರಿ(ಇಟಲಿ)ಗಳಿಗೆ ಗಿಗಿ ಬುಫನ್, ಫಾಬಿಯೋ ಕ್ಯಾನವಾರೋ ಇದ್ದ ತಂಡ ಗ್ರೂಪ್ ಹಂತ ದಾಟಲಿಲ್ಲ. ಪರುಗ್ವೆ ಹಾಗೂ ನ್ಯೂಜಿಲೆಂಡ್ ವಿರುದ್ಧ ಡ್ರಾ ಸಾಧಿಸಿದ್ದ ಇಟಲಿಯನ್ನು 3-2ರಲ್ಲಿ ಸ್ಲೋವಾಕಿಯಾ ಸೋಲಿಸಿತು.

2014ರಲ್ಲಿ ಸ್ಪೇನ್
ಚಾಂಪಿಯನ್ ತಂಡಕ್ಕೆ ತಗುಲಿದ ಶಾಪ ಮತ್ತೆ ಮುಂದುವರೆಯಿತು. ದಕ್ಷಿಣ ಅಮೆರಿಕಾದ ನೆಲದಲ್ಲಿ ಸ್ಪೇನ್ ಆಟ ನಡೆಯಲಿಲ್ಲ. 2008, 2012ರಲ್ಲಿ ಭರ್ಜರಿ ಲಯದಲ್ಲಿದ್ದ ಸ್ಪೇನ್ ತಂಡವನ್ನು 5-1ರಲ್ಲಿ ನೆದರ್ಲೆಂಡ್ಸ್ ಸೋಲಿಸಿತು. ಇದರ ಬೆನ್ನಲ್ಲೇ ಚಿಲಿ ವಿರುದ್ಧ ಸ್ಪೇನ್ 2-0ರಲ್ಲಿ ಸೋಲು ಕಂಡಿತು. ಐಕರ್ ಕ್ಯಾಸಿಲಸ್, ಕ್ಸಾವಿ ಹೆರ್ನಾಂಡೀಜ್, ಕ್ಸಾವಿ ಅಲಾನ್ಸೋ ಆಟಕ್ಕೆ ಕೊನೆ ಬಂದಿತು. ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 3-0ರಲ್ಲಿ ಗೆದ್ದರೂ ಕಪ್ ಉಳಿಸಿಕೊಳ್ಳಲಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications