2026ರ ಫಿಫಾ (FIFA) ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ರಿಯೊ ಡಿ ಜನೈರೊದ ಮರಕಾನಾ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಗಲಾಟೆ ವಿಚಾರವಾಗಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ತುಂಬಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಮತ್ತು ಬ್ರೆಜಿಲ್ ಭದ್ರತಾ ಸಿಬ್ಬಂದಿಗಳು ಪ್ರವಾಸಿ ತಂಡದ ಅಭಿಮಾನಿಗಳನ್ನು ನಡೆಸಿಕೊಂಡಿರುವುದನ್ನು ಖಂಡಿಸಿದ್ದಾರೆ.
ಬುಧವಾರ ರಿಯೊ ಡಿ ಜನೈರೊದ ಐಕಾನಿಕ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಬ್ರೆಜಿಲ್ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಪ್ರೇಕ್ಷಕರ ಹಿಂಸಾಚಾರ ಭುಗಿಲೆದ್ದ ನಂತರ, ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ಅಭಿಮಾನಿಗಳ ಬೆಂಬಲಕ್ಕೆ ನಿಂತಿದ್ದಾರೆ.

ಉಭಯ ತಂಡಗಳ ರಾಷ್ಟ್ರಗೀತೆಯ ಸಮಯದಲ್ಲಿ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿ ಹೊಡೆದಾಡಿಕೊಂಡಿದ್ದಕ್ಕೆ ಪ್ರತಿಕ್ರಿಯೆಯಾಗಿ, ಬ್ರೆಜಿಲ್ ಪೊಲೀಸರು ಅರ್ಜೆಂಟೀನಾದ ಅಭಿಮಾನಿಗಳ ವಿರುದ್ಧ ಆರೋಪ ಮಾಡಿದರು ಮತ್ತು ಲಾಠಿ ಚಾರ್ಜ್ ಕೂಡ ಮಾಡಿದರು. ಪ್ರೇಕ್ಷಕರ ಗಲಾಟೆಯ ನಡುವೆ ರಕ್ತಸಿಕ್ತ ಅಭಿಮಾನಿಯನ್ನು ಮೈದಾನದಿಂದ ಹೊರಗೆ ಹಾಕಲಾಯಿತು.
ಸ್ಟ್ಯಾಂಡ್‌ಗಳಿಂದ ಆಸನಗಳನ್ನು ಕಿತ್ತು ಬ್ರೆಜಿಲ್ ಪೊಲೀಸ್ ಅಧಿಕಾರಿಗಳ ಮೇಲೆ ಎಸೆಯಲಾಗಿದೆ. ಇದೇ ವೇಳೆ ಕೆಲವು ಅಭಿಮಾನಿಗಳು ಸುರಕ್ಷತೆಗಾಗಿ ಮೈದಾನದ ಕಡೆ ಓಡಿದ್ದಾರೆ ಮತ್ತು ಗಲಾಟೆಯಿಂದಾಗಿ ಎಂಟು ಜನರನ್ನು ಬಂಧಿಸಿರುವುದಾಗಿ ರಿಯೊ ಪೊಲೀಸರು ತಿಳಿಸಿದ್ದಾರೆ.

ಉಭಯ ತಂಡಗಳ ಅಭಿಮಾನಿಗಳ ಹೊಡೆದಾಟವನ್ನು ವಿಭಾಗವನ್ನು ತಡೆಯಲು ಬ್ರೆಜಿಲ್ ಪೊಲೀಸರು ಆಕ್ರಮಣಕಾರಿಯಾಗಿ ಪ್ರಯತ್ನಿಸಿದಾಗ, ಸ್ವತಃ ಅರ್ಜೆಂಟೀನಾ ಆಟಗಾರರು ದಿಗ್ಭ್ರಮೆಗೊಂಡರು.
ಭದ್ರತಾ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತರುತ್ತಿದ್ದಂತೆಯೇ ಲಿಯೋನೆಲ್ ಮೆಸ್ಸಿ ಮತ್ತು ಸಹ ಆಟಗಾರರು ಆಟವನ್ನು ತೊರೆದು ಡ್ರೆಸ್ಸಿಂಗ್ ರೂಮ್‌ಗೆ ಮರಳಿದರು.
27 ನಿಮಿಷಗಳ ವಿಳಂಬದ ನಂತರ, ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವು ಆತಿಥೇಯ ಬ್ರೆಜಿಲ್ ತಂಡವನ್ನು 1-0 ಗೋಲುಗಳಿಂದ ಸೋಲಿಸುವುದರೊಂದಿಗೆ ಪಂದ್ಯವು ಮುಕ್ತಾಯವಾಯಿತು. ಸದ್ಯ ನಡೆಯುತ್ತಿರುವ ವಿಶ್ವಕಪ್ ಅರ್ಹತಾ ಅಭಿಯಾನದಲ್ಲಿ ಬ್ರೆಜಿಲ್ ಸತತ 3ನೇ ಸೋಲನ್ನು ಅನುಭವಿಸಿತು.
ಬಹು ನಿರೀಕ್ಷಿತ ಪಂದ್ಯಕ್ಕೂ ಮುನ್ನ ಪ್ರೇಕ್ಷಕರ ಗಲಾಟೆಯು ಉತ್ತುಂಗಕ್ಕೇರಿದಾಗ ಲಿಯೋನೆಲ್ ಮೆಸ್ಸಿ ಬ್ರೆಜಿಲ್ ಆಟಗಾರ ರೋಡ್ರಿಗೋ ಗೋಸ್ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದರು.
ಬ್ರೆಜಿಲ್ ವಿರುದ್ಧ ಅದ್ಭುತ ಗೆಲುವಿನ ನಂತರ ಲಿಯೋನೆಲ್ ಮೆಸ್ಸಿ ಹಾಗೂ ಸಹ ಆಟಗಾರರು ಪ್ರೇಕ್ಷಕರ ಗಲಾಟೆ ನಡೆದ ಸ್ಟ್ಯಾಂಡ್‌ನತ್ತ ಧಾವಿಸಿ, ಅರ್ಜೆಂಟೀನಾ ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು.
ಅರ್ಜೆಂಟೀನಾ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದಗಳನ್ನು ಸಲ್ಲಿಸುವ ಮೂಲಕ, ಬದ್ಧ ಎದುರಾಳಿ ನೆಲದಲ್ಲಿ ಸಂಭ್ರಮಾಚರಣೆ ಮತ್ತು ವಿಜಯದ ಚಪ್ಪಾಳೆ ಸುಮಾರು 10 ನಿಮಿಷಗಳ ಕಾಲ ನಡೆಯಿತು.
"ಮರಾಕಾನಾ ಸ್ಟೇಡಿಯಂನಲ್ಲಿ ದೊಡ್ಡ ಗೆಲುವು ಬಂದಿದೆ. ಬ್ರೆಜಿಲ್ ಮತ್ತೊಮ್ಮೆ ಅರ್ಜೆಂಟೀನಿಯನ್ನರ ದಮನದಿಂದ ಗುರುತಿಸಲ್ಪಡುತ್ತದೆ. ಇದು ಹುಚ್ಚುತನ ಎಂದು ಸಹಿಸಲು ಸಾಧ್ಯವಿಲ್ಲ ಮತ್ತು ಇದು ಇಲ್ಲಿಗೆ ಕೊನೆಗೊಳ್ಳಬೇಕು," ಎಂದು ಲಿಯೋನೆಲ್ ಮೆಸ್ಸಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅಭಿಮಾನಿಗಳು ಮೊದಲು, ಪಂದ್ಯ ದ್ವಿತೀಯ ಎಂದ ಮೆಸ್ಸಿ
ಪ್ರೇಕ್ಷಕರ ಗಲಾಟೆಯ ಸಮಯದಲ್ಲಿ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ಆಟಗಾರರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು ಪ್ರಶ್ನಿಸಿದಾಗ, ಅರ್ಜೆಂಟೀನಾ ತಂಡವು ತಮ್ಮ ಅಭಿಮಾನಿಗಳ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ ಮತ್ತು ಪಂದ್ಯ ದ್ವಿತೀಯವಾಗಿರುತ್ತದೆ ಎಂದು ಲಿಯೋನೆಲ್ ಮೆಸ್ಸಿ ಹೇಳಿದರು.
ಅಂತಿಮವಾಗಿ ಅರ್ಜೆಂಟೀನಾ ತಂಡ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿತು ಮತ್ತು 1-0 ಗೆಲುವನ್ನು ಪಡೆದುಕೊಂಡಿತು. ಬ್ರೆಜಿಲ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಬ್ರೆಜಿಲ್‌ಗೆ ಮೊದಲ ಸೋಲನ್ನು ನೀಡಿತು.
ನಿಕೋಲಸ್ ಒಟಮೆಂಡಿ ಸ್ಪರ್ಧೆಯ ಏಕೈಕ ಗೋಲು ಗಳಿಸಿದ ಕಾರಣ, ಅರ್ಜೆಂಟೀನಾ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು.
"ಸತ್ಯವೆಂದರೆ ಈ ತಂಡ ಮತ್ತೊಮ್ಮೆ ಐತಿಹಾಸಿಕ ವಿಷಯಗಳನ್ನು ಸಾಧಿಸುವುದನ್ನು ಮುಂದುವರೆಸಿದೆ. ನಿಸ್ಸಂಶಯವಾಗಿ, ಆರಂಭದಲ್ಲಿ ಗಲಾಟೆ ಕೆಟ್ಟದಾಗಿತ್ತು. ಪೊಲೀಸರು ಜನರನ್ನು ಹೇಗೆ ಹೊಡೆಯುತ್ತಿದ್ದಾರೆಂದು ನಾವು ನೋಡಿದೆವು," ಎಂದು ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ತಿಳಿಸಿದರು.
"ನಾವು ನಮ್ಮ ಕುಟುಂಬ, ಅಲ್ಲಿರುವ ನಮ್ಮ ಅಭಿಮಾನಿಗಳ ಬಗ್ಗೆ ಯೋಚಿಸಿದೆವು. ಏನಾಗುತ್ತಿದೆ ಎಂದು ತಿಳಿಯಲಿಲ್ಲ ಮತ್ತು ನಾವು ಪಂದ್ಯವನ್ನು ಆಡುವುದಕ್ಕಿಂತ, ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ," ಎಂದರು.
"ಆ ಸಮಯದಲ್ಲಿ ಪಂದ್ಯವು ಗೌಣವಾಗಿತ್ತು. ಅದರ ನಂತರ ಈ ಆಟವನ್ನು ಯಾವ ರೀತಿ ಗೆಲ್ಲಬೇಕು ಎಂದು ನಮ್ಮ ತಂಡ ತೋರಿಸಿಕೊಟ್ಟಿತು ಎಂದು ನಾನು ಭಾವಿಸುತ್ತೇನೆ," ಎಂದು ಮೆಸ್ಸಿ ಹೇಳಿದರು.
"ತಮ್ಮ ಫುಟ್ಬಾಲ್ ಇತಿಹಾಸದುದ್ದಕ್ಕೂ ಅವರ ಅಂಗಳದಲ್ಲಿ ಬ್ರೆಜಿಲ್ ತಂಡವನ್ನು ಸೋಲಿಸಲು ಸಾಧ್ಯವಾಗಿರುವುದು ತುಂಬಾ ಸಂತೋಷವಾಗಿದೆ," ಎಂದು ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಪ್ರತಿಕ್ರಿಯಿಸಿದರು.