Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೊನಾಲ್ಡೋ ನೆಚ್ಚಿನ ಫುಟ್ಬಾಲ್ ಆಟಗಾರ: ಫಿಫಾ ವಿಶ್ವಕಪ್‌ನಲ್ಲಿ ಇದುವೇ ನನ್ನ ಫೇವರೀಟ್ ತಂಡ ಎಂದ ಯುವರಾಜ್ ಸಿಂಗ್

Yuvraj Singh said Cristiano Ronaldo is all time favourite player and Portugal is his favourite team at qatar World Cup

ಫಿಫಾ ವಿಶ್ವಕಪ್‌ನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಗೆ ಕತಾರ್ ಸರ್ವ ರೀತಿಯಲ್ಲಿಯೂ ಸಿದ್ಧವಾಗಿದ್ದು ಇಡೀ ವಿಶ್ವದ ಫುಟ್ಬಾಲ್ ಪ್ರೇಮಿಗಳು ಈ ಪಂದ್ಯಗಳ ವೀಕ್ಷಣೆಗೆ ಕಾತರವಾಗಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್ ತಂಡದಲ್ಲಿಯೂ ಸಾಕಷ್ಟು ಆಟಗಾರರು ಫುಟ್ಬಾಲ್ ಪ್ರೇಮಿಗಳು ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಫಿಫಾ ವಿಶ್ವಕಪ್‌ನ ಆರಂಭದ ಹಿನ್ನೆಲೆಯಲ್ಲಿ ತಮ್ಮ ಉತ್ಸುಕತೆಯನ್ನು ಹಂಚಿಕೊಂಡಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಪೋರ್ಚುಗಲ್ ನನ್ನ ನೆಚ್ಚಿನ ಫುಟ್ಬಾಲ್ ತಂಡ ಎಂದು ಯುವರಾಜ್ ಸಿಂಗ್ ಬಹಿರಂಗಪಡಿಸಿದ್ದಾರೆ. ಜೊತೆಗೆ ಕ್ರಿಶ್ಚಿಯಾನೋ ರೊನಾಲ್ಡೋ ತನ್ನ ನೆಚ್ಚಿನ ಫುಟ್ಬಾಲ್ ಆಟಗಾರ ಎಂದು ಹೇಳಿಕೊಂಡಿದ್ದಾರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್.

ಫಿಫಾ ವಿಶ್ವಕಪ್‌ನ ಆರಂಭದ ಹಿನ್ನೆಲೆಯಲ್ಲಿ ಭಾರತದಲ್ಲಿ ಈ ವಿಶ್ವಕಪ್‌ನ ಪ್ರಸಾರಕರಾದ ವಯಕಾಮ್ 18 ಸ್ಪೋರ್ಟ್ಸ್ ಜೊತೆಗೆ ಯುವರಾಜ್ ಸಿಂಗ್ ಮಾತನಾಡಿದ್ದಾರೆ. ಭಾರತದಲ್ಲಿ ವಿಶ್ವಕಪ್ ಟೂರ್ನಿಯ ಪಂದ್ಯಗಳು ಸ್ಪೋರ್ಟ್ಸ್ 18-1 ಹಾಗೂ ಜಿಯೋ ಟಿವಿಯಲ್ಲಿ ಪ್ರಸಾರವಾಗಲಿದೆ.

"ಈ ವರ್ಷದ ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್ ತನ್ನ ನೆಚ್ಚಿನ ತಂಡವಾಗಿದ್ದು ರೊನಾಲ್ಡೊ ತನ್ನ ಸಾರ್ವಕಾಲಿಕ ನೆಚ್ಚಿನ ಫುಟ್ಬಾಲ್ ಆಟಗಾರ" ಎಂದು ಯುವರಾಜ್ ಹೇಳಿದ್ದಾರೆ. ಇನ್ನು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವಿ ತಾವು ನೋಡಿದ ಮೊದಲ ವಿಶ್ವಕಪ್ ಬಗ್ಗೆ ಮಾತನಾಡಿದರು. 2002ರಲ್ಲಿ ನಡೆದ ಫಿಫಾ ವಿಶ್ವಕಪ್‌ಅನ್ನು ನಾನು ಮೊದಲ ಬಾರಿಗೆ ವೀಕ್ಷಿಸಿದ್ದೆ. ಆಗ ಬ್ರೆಜಿಲ್ ಜರ್ಮನಿಯನ್ನು ಸೋಲಿಸಿ ಚಾಂಪಿಯನ್ ಎನಿಸಿಕೊಂಡಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿ ಕ್ರಿಶ್ಚಿಯಾನೋ ರೊನಾಲ್ಡೊಗೆ ಈ ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿ ಹಿಡಿಯಲು ಅಂತಿಮ ಅವಕಾಶವಾಗಿದೆ ಎಂಬುದು ಹೆಚ್ಚಿನ ಫುಟ್ಬಾಲ್ ಪ್ರೇಮಿಗಳ ಅಭಿಪ್ರಾಯ. ಈ ಟೂರ್ನಿಗೆ ಪೋರ್ಚುಗಲ್ ಬಲಿಷ್ಠ ತಂಡವನ್ನು ಘೋಷಿಸಿದ್ದು ಈಗಾಗಲೇ ಕತಾರ್‌ಗೆ ತೆರಳಿದೆ.

ಪೋರ್ಚುಗಲ್ ಸಂಪೂರ್ಣ ಸ್ಕ್ವಾಡ್ ಹೀಗಿದೆ
ಗೋಲ್‌ಕೀಪರ್‌ಗಳು: ಡಿಯೊಗೊ ಕೋಸ್ಟಾ, ಜೋಸ್ ಎಸ್‌ಎ, ರುಯಿ ಪ್ಯಾಟ್ರಿಸಿಯೊ
ಡಿಫೆಂಡರ್ಸ್: ಜೋವೊ ಕ್ಯಾನ್ಸೆಲೊ, ಡಿಯೊಗೊ ದಲೋಟ್, ಪೆಪೆ, ರೂಬೆನ್ ಡಯಾಸ್, ಡ್ಯಾನಿಲೊ ಪೆರೇರಾ, ಆಂಟೋನಿಯೊ ಸಿಲ್ವಾ, ನುನೊ ಮೆಂಡೆಸ್, ಆರ್. ಗೆರೆರಿಯೊ
ಮಿಡ್‌ಫೀಲ್ಡರ್ಸ್: ಬ್ರೂನೋ ಫೆರ್ನಾಂಡಿಸ್, ಬರ್ನಾರ್ಡೊ ಸಿಲ್ವಾ, ರುಬೆನ್ ನೆವೆಸ್, ವಿಲಿಯಂ, ಪಾಲ್ಹಿನ್ಹಾ, ವಿಟಿನ್ಹಾ, ಒಟಾವಿಯೊ, ಮ್ಯಾಥ್ಯೂಸ್ ನ್ಯೂನ್ಸ್, ಜೋವೊ ಮಾರಿಯೋ
ಫಾರ್ವರ್ಡ್‌ ಆಟಗಾರರು: ಕ್ರಿಸ್ಟಿಯಾನೊ ರೊನಾಲ್ಡೊ, ಜೋವೊ ಫೆಲಿಕ್ಸ್, ರಾಫೆಲ್ ಲಿಯೊ, ರಿಕಾರ್ಡೊ ಹೊರ್ಟಾ, ಆಂಡ್ರೆ ಸಿಲ್ವಾ, ಗೊನ್ಕಾಲೊ ರಾಮೋಸ್

Story first published: Thursday, November 17, 2022, 13:39 [IST]
Other articles published on Nov 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+