For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಗೆಲುವಿನೊಂದಿಗೆ ರಿಯಲ್ ಮ್ಯಾಡ್ರಿಡ್ ಗೆ ಜಿದಾನೆ ವಿದಾಯ

By Mahesh
Zinedine Zidane quits as Real Madrid coach after leading them to 3 straight Champions League titles

ಮ್ಯಾಡ್ರೀಡ್, ಮೇ 31: ಚಾಂಪಿಯನ್ಸ್ ಲೀಗ್ ನಲ್ಲಿ ರಿಯಲ್ ಮ್ಯಾಡ್ರೀಡ್ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಳಿಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಕೋಚ್ ಕಮ್ ಮ್ಯಾನೇಜರ್ ಜಿನೆದನ್ ಜಿದಾನೆ ಅವರು ಕ್ಲಬ್ಬಿಗೆ ವಿದಾಯ ಹೇಳಿದ್ದಾರೆ.

ಫ್ರಾನ್ಸ್ ದೇಶದ ದಿಗ್ಗಜ ಆಟಗಾರ ಜಿದಾನೆ ಆವರು 1998ರಲ್ಲಿ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಮೇ 31ರಂದು ಮ್ಯಾಡ್ರೀಡ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ರಿಯಲ್ ಮ್ಯಾಡ್ರಿಡ್ ತೊರೆಯಲು ನಿರ್ಧರಿಸಿರುವುದಾಗಿ ಘೋಷಿಸಿದರು.

45 ವರ್ಷ ವಯಸ್ಸಿನ ಜಿದಾನೆ ಅವರು ರಿಯಲ್ ಮ್ಯಾಡ್ರಿಡ್ ಬಿ ತಂಡದ ಕೋಚ್ ಕೂಡಾ ಆಗಿದ್ದು, ಜನವರಿ 2016ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಿದಾನೆ ಅವರ ಅವಧಿಯಲ್ಲಿ ಅಟ್ಲೆಟಿಕೋ ಮ್ಯಾಡ್ರಿಡ್ ವಿರುದ್ಧ ಪೆನಾಲ್ಟಿ ಶೂಟೌಟ್ ಮೂಲಕ ಗೆಲುವು ಸಾಧಿಸಿದ ರಿಯಲ್ ಯುಸಿಎಲ್ ಎತ್ತಿ ಹಿಡಿದಿತ್ತು.

ಲಾ ಲೀಗ ಟೈಟಲ್, ಚಾಂಪಿಯನ್ಸ್ ಲೀಗ್ ಸತತ ಮೂರು ಬಾರಿ ಗೆದ್ದ ಸಾಧನೆಯೊಂದಿಗೆ ಗೆಲುವಿನ ನಗೆ ಬೀರಿ ಜಿದಾನೆ ಗುಡ್ ಬೈ ಹೇಳಿದ್ದಾರೆ.

ರಿಯಲ್ ಮ್ಯಾಡ್ರಿಡ್ ತಂಡದ ಮ್ಯಾನೇಜರ್ ಜಿನೆದಿನ್ ಜಿದಾನೆ ಅವರು ಬಾಬ್ ಪೈಸ್ಲೆ ಹಾಗೂ ಕಾರ್ಲೊ ಅನ್ಸೆಲೊಟ್ಟಿ ನಂತರ ಮೂರು ಯುರೋಪಿಯನ್ ಹಾಗೂ ಚಾಂಪಿಯನ್ಸ್ ಲೀಗ್ ಗೆದ್ದ ಸಾಧನೆ ಮಾಡಿದ್ದಾರೆ. ಆದರೆ, ಸತತ ಚಾಂಪಿಯನ್ಸ್ ಲೀಗ್ ಗೆಲ್ಲಿಸಿಕೊಟ್ಟಿದ್ದು ಜಿದಾನೆಯ ಪ್ರಮುಖ ಸಾಧನೆ.

Story first published: Thursday, May 31, 2018, 18:09 [IST]
Other articles published on May 31, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+