Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಯಲ್ ಮ್ಯಾಡ್ರಿಡ್ ಕೋಚ್‌ ಸ್ಥಾನಕ್ಕೆ ಝಿನೆಡಿನ್ ಝಿಡಾನೆ ರಾಜೀನಾಮೆ

Zinedine Zidane resigns as coach of Real Madrid

ಮ್ಯಾಡ್ರಿಡ್: ರಿಯಲ್ ಮ್ಯಾಡ್ರಿಕ್ ಕೋಚ್‌ ಸ್ಥಾನಕ್ಕೆ ಝಿನೆಡಿನ್ ಝಿಡಾನೆ ರಾಜೀನಾಮೆ ನೀಡಿದ್ದಾರೆ. ಝಿಡಾನೆ ತಕ್ಷಣದಿಂದಲೇ ನಾನು ರಾಜೀನಾಮೇ ನೀಡುತ್ತಿರುವುದಾಗಿ ತಿಳಿಸಿರುವುದಾಗಿ ಸ್ಪ್ಯಾನಿಶ್ ಕ್ಲಬ್ ರಿಯಲ್ ಮ್ಯಾಡ್ರಿಡ್ ಮ್ಯಾಡ್ರಿಡ್ ಗುರುವಾರ (ಮೇ 27) ತಿಳಿಸಿದೆ.

ಲಾ ಲಿಗಾದಲ್ಲಿ ಅಟ್ಲೆಟಿಕೋ ಮ್ಯಾಡ್ರಿಡ್ ವಿರುದ್ಧ ರಿಯಲ್ ಮ್ಯಾಡ್ರಿಡ್ ಸೋಲುಭವಿಸಿದ ಬಳಿಕ ಝಿಡಾನೆ ರಾಜೀನಾಮೆ ನೀಡಿರುವುದಾಗಿ ತಿಳಿದು ಬಂದಿದೆ. ಝಿಡಾನೆ ನಿರ್ಧಾರವನ್ನು ನಾವು ಗೌರವಿಸಬೇಕಾಗಿದೆ ಎಂದು ರಿಯಲ್ ಮ್ಯಾಡ್ರಿಡ್ ಹೇಳಿದೆ.

'ಅವರ ನಿರ್ಧಾರವನ್ನು ಗೌರವಿಸುವ ಸಮಯವಿದು ಮತ್ತು ಈ ದಿನಗಳಲ್ಲಿ ವೃತ್ತಿಯ ಬಗ್ಗೆ ಅವರಿಗಿದ್ದ ಬದ್ಧತೆ, ನಿಷ್ಠೆಯನ್ನು ಅಭಿನಂದಿಸಲೂ ಇದು ಸಕಾಲ,' ಎಂದು ರಿಯಲ್ ಮ್ಯಾಡ್ರಿಡ್ ತನ್ನ ಜಾಲತಾಣದಲ್ಲಿ ತಿಳಿಸಿದೆ.

ಚಾಂಪಿಯನ್ಸ್ ಲೀಗ್‌ ಸೆಮಿಫೈನಲ್‌ನಲ್ಲಿ ಚೆಲ್ಸಿಯಾ ವಿರುದ್ಧ ರಿಯಲ್ ಮ್ಯಾಡ್ರಿಡ್ ಸೋತಿತ್ತು. ಹೀಗಾಗಿ 13 ಬಾರಿ ಯುರೋಪಿಯನ್ ಲೀಗ್ ಚಾಂಪಿಯನ್ಸ್ ಎನಿಸಿರುವ ರಿಯಲ್ ಮ್ಯಾಡ್ರಿಡ್‌ಗೆ ನಿರಾಸೆಯಾಗಿತ್ತು. ಯಾಕೆಂದರೆ ಚಾಂಪಿಯನ್ಸ್‌ ಲೀಗ್‌ ಗೆದ್ದಿದ್ದರೆ 11 ವರ್ಷಗಳ ಬಳಿಕ ಮೊದಲ ಬಾರಿಗೆ ಟ್ರೋಫಿ ಗೆದ್ದ ಹಿರಿಮೆಗೆ ರಿಯಲ್ ಮ್ಯಾಡ್ರಿಡ್ ಪಾತ್ರವಾಗುತ್ತಿತ್ತು.

Story first published: Thursday, May 27, 2021, 19:42 [IST]
Other articles published on May 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+