For Quick Alerts
ALLOW NOTIFICATIONS  
For Daily Alerts

Asia Cup Hockey: ಕೊರಿಯಾ ಮಣಿಸಿದ ಭಾರತ ಚಾಂಪಿಯನ್

ಆತಿಥೇಯ ಭಾರತ ತಂಡ ನೀಡಿದ ಅಮೋಘ ಪ್ರದರ್ಶನದ ಬಲದಿಂದ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಭಾನುವಾರ ರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ 4-1 ಗೋಲುಗಳ ಅಂತರದಿಂದ ಕೊರಿಯಾ ತಂಡವನ್ನು ಮಣಿಸಿದೆ. ಈ ಮೂಲಕ ಟೀಮ್ ಇಂಡಿಯಾ ಮುಂದಿನ ವರ್ಷ ನಡೆಯಲಿರುವ ಹಾಕಿ ವಿಶ್ವಕಪ್‌ 2026ಕ್ಕೆ ನೇರವಾಗಿ ಅರ್ಹತೆ ಪಡೆದಿದೆ. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ ಭಾರತ ಅರ್ಹ ಗೆಲುವು ದಾಖಲಿಸಿದೆ. ಈ ಟೂರ್ನಿಯಲ್ಲಿ ಹರ್ಮನ್ ಪ್ರೀತ್ ಪಡೆದ ಒಂದೇ ಒಂದು ಪಂದ್ಯವನ್ನು ಸೋಲದೇ ಅಬ್ಬರಿಸಿದೆ. ಫೈನಲ್‌ ಪಂದ್ಯವಂತೂ ಏಕಪಕ್ಷೀಯವಾಗಿ ಕಂಡು ಬಂದಿತು.

ಆರಂಭದಲ್ಲೇ ಭಾರತದ ಪರ ಸುಖಜೀತ್‌ ಸಿಂಗ್ ಅಮೋಘ ಪ್ರದರ್ಶನ ನೀಡಿದ ಪರಿಣಾಮ ಮೈಲುಗೈ ಸಾಧಿಸಲು ಸಾಧ್ಯವಾಯಿತು. ಪಂದ್ಯ ಆರಂಭವಾದ ಕೆಲವೇ ಸೆಕೆಂಡ್‌ಗಳಲ್ಲಿ ಇವರು ಅಮೋಘ ಗೋಲು ಬಾರಿಸಿ ತಂಡಕ್ಕೆ ಅರ್ಹ ಮುನ್ನಡೆ ತಂದುಕೊಟ್ಟರು. ಇದೇ ಅವಧಿಯಲ್ಲಿ ಭಾರತದ ಆಟಗಾರರು ಅಮೋಘ ಪ್ರದರ್ಶನ ನೀಡಿದರೂ ಸಹ ಯಾವುದೇ ಗೋಲುಗಳನ್ನು ಬಾರಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಭಾರತ ಮೊದಲಾವಧಿಯಲ್ಲಿ 1-0 ಗೋಲುಗಳ ಮುನ್ನಡೆ ದಾಖಲಿಸಿತು. ಮೊದಲಾವಧಿಯಲ್ಲಿ ಜುಗ್‌ರಾಜ್ ಸಿಂಗ್ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ತಪ್ಪಿಸಿಕೊಂಡರು.

Asia Cup Hockey India defeats Korea 4-1 to win the championship and qualify for the World Cup

ಎರಡನೇ ಅವಧಿಯ ಆಟದಲ್ಲಿ ಭಾರತದ ಪರ ದಿಲ್‌ ಪ್ರೀತ್ ಸಿಂಗ್‌ 27ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದು ಭಾರತೀಯ ಕ್ಯಾಂಪ್‌ನಲ್ಲಿ ನವ ಉತ್ಸಾಹ ತುಂಬಿತು. ಇಷ್ಟೇ ಸುಮ್ಮನಾಗದ ಭಾರತೀಯ ಆಟಗಾರರು ಆಕ್ರಮಣಕಾರಿ ಆಟವನ್ನು ಎರಡನೇ ಅವಧಿಯಲ್ಲಿ ಮುಂದುವರೆಸಿದರು. ಇದೇ ಅವಧಿಯಲ್ಲಿ ಭಾರತೀಯ ಆಟಗಾರರು ಗೋಲು ಬಾರಿಸುವ ಅವಕಾಶ ಲಭಿಸಲಿಲ್ಲ. ಅಲ್ಲದೆ ಸಿಕ್ಕ ಅವಕಾಶವನ್ನು ಇವರು ಕೈ ಚೆಲ್ಲಿದರು.

ಅಬ್ಬರಿಸಿದ ಭಾರತ

ಮೂರನೇ ಅವಧಿಯ ಆರಂಭದಲ್ಲಿ ಭಾರತದ ಸಂಜಯ್ ಗ್ರೀನ್‌ ಕಾರ್ಡ್‌ ಪಡೆದರು. ಇದರಿಂದಾಗಿ ಟೀಮ್ ಇಂಡಿಯಾ ಈ ಅವಧಿಯಲ್ಲಿ ಕೇವಲ 10 ಆಟಗಾರರೊಂದಿಗೆ ಆಡಿತು. ಆದರೂ ಧೃತಿ ಗೆಡದ ಭಾರತೀಯ ಆಟಗಾರರು ಕೆಚ್ಚೆದೆಯ ಆಟವನ್ನು ಪ್ರದರ್ಶಿಸಿದರು. ಈ ಅವಧಿಯಲ್ಲಿ ದಿಲ್‌ ಪ್ರೀತ್‌ ಸಿಂಗ್‌ ಮತ್ತೊಂದು ಗೋಲು ಬಾರಿಸಿ ಅಂತರವನ್ನು ವೃದ್ಧಿಸಿದರು. ನಾಲ್ಕನೇ ಅವಧಿಯ ಆರಂಭದಲ್ಲಿ ಅಮಿತ್ ರೋಹಿದಾಸ್‌ 49ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರವನ್ನು ಹೆಚ್ಚಿಸಿದರು. ಕೊರಿಯಾ ಪರ ಸನ್‌ ಡಯಾನ್‌ 50ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಭಾರತ 4-1 ರಿಂದ ಗೆದ್ದು ಬೀಗಿತು.

Asia Cup Hockey India defeats Korea 4-1 to win the championship and qualify for the World Cup

ಭಾರತ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತಲೇ ಇತಿಹಾಸವನ್ನು ನಿರ್ಮಿಸಿತು. ಟೂರ್ನಿಯಲ್ಲಿ ನಾಲ್ಕನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟ ದಾಖಲೆ ನಿರ್ಮಿಸಿತು. ಇದಕ್ಕೂ ಮೊದಲು ಭಾರತ 2017, 2007, 2003ರಲ್ಲಿ ಈ ಟೂರ್ನಿಯ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಪಾಕಿಸ್ತಾನ 1982, 1985, 1989, ಮೂರು ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಭಾರತ ಈಗ ಈ ಸಾಧನೆಯನ್ನು ಮೀರಿ ನಿಂತಿದೆ.

Story first published: Sunday, September 7, 2025, 22:46 [IST]
Other articles published on Sep 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+