For Quick Alerts
ALLOW NOTIFICATIONS  
For Daily Alerts

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಕೊರಿಯಾ ವಿರುದ್ಧ 3-2 ಅಂತರದ ಗೆಲುವು ಸಾಧಿಸಿ ಭಾರತ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಕ್ರೀಡಾಕೂಟದಲ್ಲಿ ಭಾರತ ಹಾಗೂ ದಕ್ಷಿಣ ಕೊರಿಯಾ ತಂಡಗಳು ರೋಚಕ ಕಾದಾಟ ನಡೆಸಿದೆ. ಈ ಪೈಪೋಟಿಯ ಪಂದ್ಯದಲ್ಲಿ ಅಂತಿಮವಾಗಿ ಭಾರತ 3-2 ಅಂತರದ ರೋಚಕ ಜಯ ಸಾಧಿಸಿದ್ದು ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಈ ಮೂಲಕ ಪಾಕಿಸ್ತಾನದ ವಿರುದ್ಧದ ಮತ್ತೊಂದು ಪೈಪೋಟಿಯ ಪಂದ್ಯಕ್ಕೆ ಭಾರತ ತಂಡ ಸಂಪೂರ್ಣವಾಗಿ ಸಿದ್ಧವಾಗಿದೆ.

ಜಪಾನ್ ವಿರುದ್ಧದ ಪಂದ್ಯದಲ್ಲಿ 1-1 ಅಂತರದಿಂದ ನೀರಸ ಡ್ರಾ ಸಾಧಿಸಿದ ಬಳಿಕ ಭಾರತ ಮಲೇಷ್ಯಾ ವಿರುದ್ಧ 5-0 ಅಂತರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸದಿಂದಲೇ ಈ ಪಂದ್ಯದಲ್ಲಿ ಕಣಕ್ಕಿಳಿದಿತ್ತು. ಸಾಕಷ್ಟು ಪೈಪೋಟಿ ಎದುರಾಯಿತಾದರೂ ಕೊರಿಯಾ ತಂಡವನ್ನು ರೋಚಕವಾಗಿ ಮಣಿಸುವಲ್ಲಿ ಭಾರತ ಯಶಸ್ವಿಯಾಗಿದೆ.

Asian Champions Trophy 2023: India Clinches Thrilling 3-2 Victory Against Korea, Regains Top Spot

ಈ ಪಂದ್ಯದಲ್ಲಿ ಭಾರತ ತಂಡ 6ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸುವ ಮೂಲಕ ಪೈಪೋಟಿಗೆ ಚಾಲನೆ ನೀಡಿತು. ನೀಲಕಂಠ ಶರ್ಮಾ ಮೊದಲ ಗೋಲು ಬಾರಿಸಿ ಆರಂಭಿಕ ಮುನ್ನಡೆ ನೀಡಿದರು. ಆದರೆ ಕೊರಿಯಾ 12ನೇ ನಿಮಿಷದಲ್ಲಿ ಸುಂಗ್‌ಹ್ಯುನ್ ಕಿಮ್ ಮೂಲಕ ಸಮಬಲಗೊಳಿಸುವ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿತು. ಹೀಗಾಗಿ ಮೊದಲ ಕ್ವಾರ್ಟರ್ 1-1 ಸಮಬಲದಲ್ಲಿ ಅಂತ್ಯವಾಯಿತು. ಆದರೆ ಭಾರತ ತಂಡವು 23ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಅವರ ಗೋಲಿನಿಂದ ಮತ್ತೊಮ್ಮೆ ಮುನ್ನಡೆ ಸಾಧಿಸಿತು.

ಇನ್ನು ದ್ವಿತೀಯಾರ್ಧದಲ್ಲಿ ಮಂದೀಪ್ ಸಿಂಗ್ 33ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ ಭಾರತದ ಮುನ್ನಡೆಯನ್ನು 3-1ಕ್ಕೆ ಹೆಚ್ಚಿಸಿದರು. ಅದಾದ ಬಳಿಕ ಭಾರತ ಪೆನಾಲ್ಟಿ ಸ್ಟ್ರೋಕ್‌ ಗಳಿಸಿದಾಗ ಕೊರಿಯಾ ತಮಡದಿಂದ ಪಂದ್ಯವನ್ನು ದೂರಮಾಡುವ ಅವಕಾಶ ಗಳಿಸಿತ್ತು. ಆದರೆ ಭಾರತ ಪ್ರಯತ್ನವನ್ನು ಕೊರಿಯಾದ ಗೋಲ್‌ಕೀಪರ್ ವಿಫಲಗೊಳಿಸಿದರು.

ಇತ್ತ ಕೊರಿಯಾ ಕೂಡ ಒಂದೆರಡು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆಯಿತಾದರೂ ಗುರಿ ತಲುಪಿಸುವಲ್ಲಿ ವಿಫಲವಾದರು. ಆದರೆ 58ನೇ ನಿಮಿಷದಲ್ಲಿ ಜಿಹುನ್ ಯಾಂಗ್ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ 3-2ಕ್ಕೆ ಗೋಲಿನ ಅಂತರವನ್ನು ಕುಗ್ಗಿಸಿಕೊಂಡಿತು ಕೊರಿಯಾ. ನಂತರ ಭಾರತ ಕೊರಿಯಾಗೆ ಯಾವುದೇ ಅವಕಾಶ ನೀಡದ ಕಾರಣ ಪಂದ್ಯವನ್ನು ವಶಕ್ಕೆ ಪಡೆಯಿತು. ಈ ಗೆಲುವಿನ ಮೂಲಕ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದ ಮೊದಲು ಎರಡೂ ತಂಡಗಳು ಅಜೇಯವಾಗಿ ಉಳಿದುಕೊಂಡಿದ್ದವು. ಇದೀಗ ಕೊರಿಯಾ ಮೊದಲ ಸೋಲು ಕಂಡಂತಾಗಿದೆ.

Story first published: Monday, August 7, 2023, 23:29 [IST]
Other articles published on Aug 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+