ಚಾಂಪಿಯನ್ಸ್ ಟ್ರೋಫಿ: ಕೊರಿಯಾ ಸೋಲಿಸಿ ಅಜೇಯವಾಗಿ ಉಳಿದ ಭಾರತ

ಮಸ್ಕತ್, ಅಕ್ಟೋಬರ್ 25: ಓಮನ್ ನ ಮಸ್ಕತ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತದ ಪುರುಷರ ಹಾಕಿ ತಂಡ ದಕ್ಷಿಣ ಕೊರಿಯಾ ವಿರುದ್ಧ 4-1ರ ಜಯ ಸಾಧಿಸಿದೆ. ಇದರೊಂದಿಗೆ ಭಾರತದ ಹಾಕಿ ತಂಡ ಸೆಮಿ ಫೈನಲ್ ಗೆ ಪ್ರವೇಶಿಸಿದೆ.
ಬುಧವಾರ (ಅಕ್ಟೋಬರ್ 24) ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಭಾರತದ ಡ್ರ್ಯಾಗ್ ಫ್ಲಿಕ್ಕರ್ ಹರ್ಮನ್ ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲ್ ಬಾರಿಸಿ ತಂಡದ ಸುಲಭ ಗೆಲುವಿಗೆ ಕಾರಣರಾದರು. ಈ ಪಂದ್ಯದ ಬಳಿಕ ಭಾರತ ಆಡಿದ ಒಟ್ಟು ಐದು ಪಂದ್ಯಗಳಲ್ಲಿ 4 ಗೆಲುವುಗಳೊಂದಿಗೆ 13 ಅಂಕಗಳನ್ನು ಕಲೆ ಹಾಕಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿಸಿದೆ.
ಇದಕ್ಕೂ ಮುನ್ನ ಭಾರತ, ಏಷ್ಯನ್ ಗೇಮ್ಸ್ ರನ್ನರ್ಸ್ ತಂಡ ಮಲೇಷ್ಯಾ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಉಳಿದಂತೆ ಓಮನ್ ತಂಡವನ್ನು 11-0ಯಿಂದ, ಪಾಕಿಸ್ತಾನವನ್ನು 3-1ರಿಂದ, ಏಷ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ವಿರುದ್ಧ 9-0ಯಿಂದ ಪಂದ್ಯವನ್ನು ಗೆದ್ದು ಭಾರತ ತಂಡ ಅಜೇಯವಾಗಿ ಉಳಿದಿದೆ.
Story first published: Thursday, October 25, 2018, 15:20 [IST]
Other articles published on Oct 25, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications