ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡುತ್ತಿದ್ದು ಅಜೇಯ ತಂಡವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಸೆಮಿಫೈನಲ್‌ನಲ್ಲಿ ಭಾರತ ತಂಡಕ್ಕೆ ಜಪಾನ್ ಎದುರಾಳಿಯಾಗಿದ್ದು ಫೈನಲ್‌ಗೇರುವ ಆತ್ಮವಿಶ್ವಾಸದಲ್ಲಿದೆ ಭಾರತ ತಂಡ. ಈ ಮೂಲಕ ಏಷ್ಯನ್ ಗೇಮ್ಸ್ ಟೂರ್ನಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಚಕ ಪ್ರದರ್ಶನ ನೀಡುತ್ತಿರುವ ಭಾರತ ಟೂರ್ನಿಯುದ್ದಕ್ಕೂ ಪ್ರಬಲ ತಂಡವಾಗಿ ಮಿಂಚುತ್ತಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡವು ಟೂರ್ನಿಯಲ್ಲಿ ಎದುರಾಳಿಗಳ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಲೀಗ್ ಹಂತದಲ್ಲಿ ಮೂರು ಭರ್ಜರಿ ಗೆಲುವು ಹಾಗೂ ಒಂದು ಡ್ರಾ ಸಾಧಿಸಿದ್ದ ಭಾರತ ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ ಪೈಪೋಟಿ ನಡೆಸಲು ಸಜ್ಜಾಗಿದೆ.

ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಈ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಚೀನಾದ ವಿರುದ್ಧ 7-2 ಅಂತರದ ಭರ್ಜರಿ ಜಯದೊಂದಿಗೆ ಈ ಟೂರ್ನಿಯಲ್ಲಿ ಅಭುಯಾನ ಆರಂಭಿಸಿದ ಭಾರತ ತಂಡ ಜಪಾನ್ ವಿರುದ್ಧ ಏಕೈಕ ಡ್ರಾ ಹೊರತುಪಡಿಸಿದರೆ ಉಳಿದ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮಲೇಷ್ಯಾ ವಿರುದ್ಧ 5-0 ಗೆಲುವು ಸಾಧಿಸಿದ್ದು ಕೊರಿಯಾ ವಿರುದ್ಧ 3-2 ಅಂತರದಿಂದ ಗೆಲುವು ಕಂಡಿತ್ತು. ನಂತರ ಪಾಕಿಸ್ತಾನ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ 4-0 ಅಂತರದಿಂದ ಭಾರತ ಗೆದ್ದು ಬೀಗಿತ್ತು.
ಆದರೆ ಸೆಮಿಓಐನಲ್ ಪಂದ್ಯ ಭಾರತಕ್ಕೆ ಸವಾಲಿನಿಂದ ಕೂಡಿರುವ ನಿರೀಕ್ಷೆಯಿದೆ. ಲೀಗ್ ಹಂತದಲ್ಲಿ ಭಾರತ ಒಂದು ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಸಿದ್ದು ಅದು ಜಪಾನ್ ವಿರುದ್ಧವೇ ಆಗಿತ್ತು ಎಂಬುದು ವಿಶೇಷ. ಇನ್ನು ಜಪಾನ್ ಲೀಗ್ ಹಂತದಲ್ಲಿ ಆಡಿದ ಐದು ಪಂದ್ಯಗಳ ಪೈಕಿ ಒಂದು ಗೆಲುವು ಸಾಧಿಸಿದ್ದು ಎರಡು ಡ್ರಾ ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಈ ಮೂಲಕ 4ನೇ ತಂಡವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.