Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಜಪಾನ್ ವಿರುದ್ಧ 5-0 ಅಂತರದ ಗೆಲುವು: ಫೈನಲ್‌ಗೆ ಪ್ರವೇಶಿದ ಭಾರತ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಭಾರತ ಅಮೋಘ ಗೆಲುವು ಸಾಧಿಸಿದೆ. ಜಪಾನ್ ವಿರುದ್ಧ ನಡೆದ ಸೆಮಿಫೈನಲ್ ಸೆಣೆಸಾಟದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಸಂಪೂರ್ಣ ಮೇಲುಗೈ ಸಾಧಿಸಿ ಏಕಪಕ್ಷೀಯ ಪ್ರದರ್ಶನ ನೀಡಿ ಗೆಲುವು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಜಪಾನ್ ತಂಡ ಭಾರತಕ್ಕೆ ಯಾವ ಹಂತದಲ್ಲಿಯೂ ಪ್ರತಿರೋಧವೊಡ್ಡಲು ವಿಫಲವಾಯಿತು. ಹೀಗಾಗಿ ಭಾರತ ತಂಡ ಅಮೋಘ 5-0 ಅಂತರದಿಂದ ಗೆಲುವು ಸಾಧಿಸಿದೆ.

ಈ ಪಂದ್ಯದಲ್ಲಿ ಮೊದಲ ಕ್ವಾರ್ಟರ್‌ನಲ್ಲಿ ಭಾರತದ ವಿರುದ್ಧ ಜಪಾನ್ ತೀವ್ರ ಪೈಪೊಟಿಯ ಪ್ರದರ್ಶನ ನೀಡಿತು. ಭಾರತಕ್ಕೆ ಗೋಲು ಗಳಿಸುವ ಅವಕಾಶವಿದ್ದರೂ ಅದನ್ನು ತಡೆಯುವಲ್ಲಿ ಜಪಾನ್ ಯಶಸ್ವಿಯಾದ ಕಾರಣ ಮೊದಲ ಕ್ವಾರ್ಟರ್ ಯಾವುದೇ ಗೋಲಿಲ್ಲದೆ ಅಂತ್ಯವಾಗಿತ್ತು. ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಮೊದಲ ಗೋಲು ಸಿಡಿಸುವ ಮೂಲಕ ಶುಭಾರಂಭ ಮಾಡಿತು. ಆಕಾಶ್‌ದೀಪ್ ಭಾರತಕ್ಕೆ ಮೊದಲಕ ಮುನ್ನಡೆಯನ್ನು ನೀಡಿದರು.

Asian Champions Trophy: India into final after win against Japan by 5-0 in Semi finals

ಅದಾದ ಬಳಿಕ ಭಾರತ ಮತ್ತೊಂದು ಗೋಲು ಸಿಡುಸುವಲ್ಲಿ ಯಶಸ್ವಿಯಾಯಿತು. 23ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಭಾರತಕ್ಕೆ ಎರಡನೇ ಗೋಲು ಸಿಡಿಸಿದರು. 29ನೇ ನಿಮಿಷದಲ್ಲಿ ಭಾರತದ ಪರ ಮೂರನೇ ಗೋಲು ದಾಖಲಾಯಿತು. ಈ ಬಾರಿ ಮಂದೀಪ್ ಸಿಂಗ್ ಭಾರತಕ್ಕೆ ಮೇಲುಗೈ ಒದಗಿಸಿದರು. ಈ ಮೂಲಕ ಎರಡನೇ ಕ್ವಾರ್ಟರ್‌ನ ಅಂತ್ಯಕ್ಕೆ 3-0 ಅಂತರದಿಂದ ಸ್ಪಷ್ಟ ಮುನ್ನಡೆ ಸಾಧಿಸಿತು.

ಇನ್ನು ಮೂರನೇ ಕ್ವಾರ್ಡರ್‌ನಲ್ಲಿಯೂ ಭಾರತದ ಆಕ್ರಮಣಕಾರಿ ಆಟ ಮುಂದುವರಿದಿತ್ತು. ಸುಮಿತ್ ಭಾರತದ ಪರವಾಗಿ ನಾಲ್ಕನೇ ಗೋಲು ಬಾರಿಸಿದರು. ಮೂರನೇ ಕ್ವಾರ್ಟರ್‌ನ ಅಂತ್ಯದಲ್ಲಿ ಭಾರತ 4-0 ಅಂತರದಿಂದ ಮುನ್ನಡೆ ಸಾಧಿಸಿತ್ತು. ಇನ್ನು ಕೊನೆಯ ಕ್ವಾರ್ಟರ್‌ನಲ್ಲಿಯೂ ಭಾರತ ಒಂದು ಗೋಲು ಬಾರಿಸುವಲ್ಲಿ ಯಶಸ್ವಿಯಾಗುವ ಮೂಲಕ ಗೋಲಿನ ಸಂಖ್ಯೆಯನ್ನು 5-0ಗೆ ಏರಿಸಿದೆ. ಕಾರ್ತಿ ಸೆಲ್ವಂ ಕೊನೆಯ ಗೋಲು ಸಿಡಿಸಿದರು. ಈ ಮೂಲಕ ಭಾರತ ಈ ಪಂದ್ಯವನ್ನು 5-0 ಅಂತರದ ಅಮೋಘ ಗೆಲುವಿನಿಂದಿಗೆ ಮುಕ್ತಾಯಗೊಳಿಸಿದೆ.

ಈ ಗೆಲುವಿನೊಂದಿಗೆ ಭಾರತ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023ರ ಆವೃತ್ತಿಯ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಫೈನಲ್‌ನಲ್ಲಿ ಮಲೇಶಿಯಾ ತಂಡವನ್ನು ಎದುರಿಸಲಿದ್ದು ಚಾಂಪಿಯನ್ ಪಟ್ಟದ ಮೇಲೆ ಭಾರತ ಚಿತ್ತ ನೆಟ್ಟಿದೆ.

ಭಾರತ ಆರಂಭಿಕ XI: ಪಿಆರ್ ಶ್ರೀಜೇಶ್, ವರುಣ್ ಕುಮಾರ್, ಜರ್ಮನ್‌ಪ್ರೀತ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಮನ್‌ದೀಪ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್, ಗುರ್ಜಂತ್ ಸಿಂಗ್.

ಜಪಾನ್ ಆರಂಭಿಕ XI: ತಕಾಶಿ ಯೋಶಿಕಾವಾ, ಶೋಟಾ ಯಮಡಾ, ಸೆರೆನ್ ತನಕಾ, ಕೆಂಟಾರೊ ಫುಕುಡಾ, ತೈಕಿ ತಕಡೆ, ಟಕುಮಾ ನಿವಾ, ಮನಬು ಯಮಾಶಿತಾ, ಕೆನ್ ನಾಗಯೋಶಿ, ಗೆಂಕಿ ಮಿತಾನಿ, ಮಸಾಕಿ ಒಹಾಶಿ, ಕೊಸಿ ಕವಾಬೆ

Story first published: Friday, August 11, 2023, 22:38 [IST]
Other articles published on Aug 11, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+