ಭಾರತ vs ಮಲೇಷ್ಯಾ ಕುತೂಹಲಕಾರಿ ಹಾಕಿ ಪಂದ್ಯದ ಸಮಯ, ಪ್ರಸಾರ ಮಾಹಿತಿ

ಮಸ್ಕತ್, ಅಕ್ಟೋಬರ್ 23: ಓಮನ್ ನ ಮಸ್ಕತ್ ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಿಯಲ್ಲಿ ಇಂದು (ಅಕ್ಟೋಬರ್ 23) ಕುತೂಹಲಕಾರಿ ಪಂದ್ಯದಲ್ಲಿ ಬಲಿಷ್ಟ ಭಾರತ ಮತ್ತು ಮಲೇಷ್ಯಾ ತಂಡಗಳು ಮುಖಾಮುಖಿಯಾಗಿವೆ.
ಟೂರ್ನಿಯಲ್ಲಿ ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಎರಡೂ ತಂಡಗಳು ಗೆದ್ದು ಅಂಕಪಟ್ಟಿಯಲ್ಲಿ ಸಮಾನ ಅಂಕ ಹಂಚಿಕೊಂಡಿವೆ. ಒಂದೂ ಸೋಲು ಕಂಡಿರದ ಎರಡೂ ತಂಡಗಳಿಗೆ ತಲಾ 9 ಅಂಕಗಳು ಲಭಿಸಿವೆ. ಗೋಲ್ ಅಂಕಗಳನ್ನು ಗಮನಿಸಿದರೆ ಭಾರತ 22 ಗೋಲ್ ಡಿಫರೆನ್ಸ್ ಅಂಕಗಳನ್ನು ಹೊಂದಿದ್ದರೆ, ಮಲೇಷ್ಯಾ 7 ಅಂಕಗಳನ್ನು ಪಡೆದಿದೆ.
ಇನ್ನೂ ಕುತೂಹಲಕಾರಿ ಅಂಶವೆಂದರೆ ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಬಂಗಾರ ಗೆದ್ದಿದ್ದ ಜಪಾನ್ ವಿರುದ್ಧ ಭಾರತ ಭಾನುವಾರ (ಅಕ್ಟೋಬರ್ 21) ಭರ್ಜರಿ 9-0 ಅಂತರದಿಂದ ಗೆದ್ದಿತ್ತು. ಏಷ್ಯಾನ್ ಗೇಮ್ಸ್ ನ ಸೆಮಿಫೈನಲ್ಸ್ ನಲ್ಲಿ ಭಾರತವನ್ನು ಹೊರಗಟ್ಟಿದ್ದ ಮಲೇಷ್ಯಾ ವಿರುದ್ಧ ಇಂದು ಭಾರತ ಮುಯ್ಯಿ ತೀರಿಸಿಕೊಳ್ಳುವುದರಲ್ಲಿದೆ.
ಜಪಾನ್ ಸೋಲಿಸುವುದಕ್ಕೂ ಮುನ್ನ ಭಾರತದ ಹಾಕಿ ಪುರುಷರು ಆತಿಥೇಯ ಓಮನ್ ವಿರುದ್ಧ 11-0, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1ರ ಗೆಲುವು ದಾಖಲಿಸಿದ್ದರು. ಮಲೇಷ್ಯಾ ವಿರುದ್ಧದ ಕುತೂಹಲಕಾರಿ ಪಂದ್ಯ ಇಂದು ರಾತ್ರಿ 10.40 pmಗೆ ಪ್ರಾರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ 2 ಅಥವಾ ಸ್ಟಾರ್ ಸ್ಪೋರ್ಟ್ಸ್ ಎಚ್‌ಡಿ2 ಚಾನೆಲ್ ಗಳು ನೇರ ಪ್ರಸಾರ ಮಾಡಲಿವೆ. ಜಾಲತಾಣಿಗರಿಗಾಗಿ ಹಾಟ್‌ಸ್ಟಾರ್ ಪಂದ್ಯವನ್ನು ನೇರಪ್ರಸಾರಗೊಳಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications