ಏಷ್ಯನ್ ಗೇಮ್ಸ್: ಪಾಕ್ ಎದುರು ಕಂಚು ಗೆದ್ದ ಭಾರತದ ಹಾಕಿ ಪುರುಷರು

ಜಕಾರ್ತಾ, ಸೆಪ್ಟೆಂಬರ್ 1: ಭಾರತದ ಪದಕ ಖಾತೆಗೆ ಮತ್ತೊಂದು ಕಂಚು ಸೇರ್ಪಡೆಯಾಗಿದೆ. ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರಷರ ಹಾಕಿ ಪಂದ್ಯದಲ್ಲಿ ಭಾರತ ಕಂಚಿನ ಪದಕ ತನ್ನದಾಗಿಸಿಕೊಂಡಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಸೆಪ್ಟಂಬರ್ 1ರ ಶನಿವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಭಾರತ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ 2-1 ಗೋಲ್ ಗಳಿಂದ ಭಾರತ ಕಂಚು ತನ್ನದಾಗಿಸಿಕೊಂಡಿತು. ಭಾರತದ ಪರ ಆಕಾಶ್ ದೀಪ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಗೋಲ್ ಸಿಡಿಸಿದ್ದು ಪಾಕಿಸ್ತಾನದ ವಿರುದ್ಧ ಗೆಲುವನ್ನಾಚರಿಸಲು ನೆರವಾಯಿತು.
ಇದರೊಂದಿಗೆ ಭಾರತದ ಪದಕ ಖಾತೆಯಲ್ಲಿ ಒಟ್ಟು 69 ಪದಕಗಳು ಸೇರಿಕೊಂಡಿವೆ. ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇದಕ್ಕೂ ಮೊದಲು ಭಾರತದ ಮಹಿಳಾ ಸ್ಕ್ವ್ಯಾಷ್ ತಂಡಕ್ಕೆ ಬೆಳ್ಳಿ ಪದಕ ಲಭಿಸಿತ್ತು. ಕಳೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಒಟ್ಟು 57 ಪದಕಗಳನ್ನು ಗೆದ್ದಿತ್ತು.
Story first published: Saturday, September 1, 2018, 17:55 [IST]
Other articles published on Sep 1, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications