ಏಷ್ಯನ್ ಗೇಮ್ಸ್: ಥಾಯ್ಲೆಂಡ್ ಸೋಲಿಸಿ ಮಹಿಳಾ ಹಾಕಿ ತಂಡ ಸೆಮಿಫೈನಲ್ ಗೆ

ಜಕಾರ್ತಾ, ಆಗಸ್ಟ್ 27: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡ ಮುನ್ನಡೆ ಸಾಧಿಸಿದೆ. ಸೋಮವಾರ ನಡೆದ ಪೂಲ್ ಬಿ ಅಂತಿಮ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಸೋಲಿಸಿ ಭಾರತ ಸೆಮಿಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಬಿ ಪೂಲ್ ಪಂದ್ಯದಲ್ಲಿ ಭಾರತದ ಮಹಿಳೆಯರು ಆರಂಭದಿಂದಲೂ ಪಾರಮ್ಯ ಮೆರೆದುರು. ಥಾಯ್ಲೆಂಡ್ ಆಟಗಾರ್ತಿಯರಿಗೆ ಒಂದು ಗೋಲ್ ಬಾರಿಸಲೂ ಅವಕಾಶ ಕೊಡದೆ 5-0 ಅಂತರದಿಂದ ಹಿಮ್ಮೆಟ್ಟಿಸಿದರು. ನಾಯಕಿ ರಾಣಿ ರಾಂಪಾಲ್ ಈ ವೇಳೆ ಹ್ಯಾಟ್ರಿಕ್ ಗೋಲ್ ಮೂಲಕ ಗಮನ ಸೆಳೆದರು. ಸೆಮಿಫೈನಲ್ ನಲ್ಲೂ ಭಾರತ ಉತ್ತಮ ಆಟ ಪ್ರದರ್ಶಿಸುವ ನಿರೀಕ್ಷೆಯಿದೆ.
ಸೋಮವಾರ 9ನೇ ದಿನದಾರಂಭಕ್ಕೆ ಮಹಿಳಾ ಬ್ಯಾಡ್ಮಿಂಟನ್ ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆಲ್ಲುವ ಮೂಲಕ ಹೊಸ ಹಿರಿಮೆಯ ಗರಿ ಸೇರಿಸಿದ್ದಾರೆ. ಸೆಮಿಫೈನಲ್ ನಲ್ಲಿ ನಂಬರ್ ಒನ್ ಶ್ರೇಯಾಂಕಿತೆ ತೈವಾನ್‌ನ ತಾಯ್ ತ್ಸು ಯಿಂಗ್ ವಿರುದ್ಧ 21-17, 21-14 ನೇರ ಸೆಟ್‌ಗಳಿಂದ ಸೈನಾ ಪರಾಭವಗೊಂಡರು. ಆದರೆ ಬ್ಯಾಡ್ಮಿಂಟನ್ ನಲ್ಲಿ ಬಹಳ ವರ್ಷಗಳ ಬಳಿಕ ಪದಕ ಗೆದ್ದ ಕೀರ್ತಿ ಸೈನಾ ಪಾಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications