Asian Games: ಮಲೇಶಿಯಾ ವಿರುದ್ಧ 16 ಗೋಲು ಬಾರಿಸಿದ ಭಾರತ ಹಾಕಿ ತಂಡಕ್ಕೆ ಭರ್ಜರಿ ಗೆಲುವು
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡದ ಗೆಲುವಿನ ಓಟ ಮುಂದುವರಿದಿದೆ. ಪೂಲ್ 'ಎ'ಯ ಎರಡನೇ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾರತ ಗೋಲುಗಳ ಸುರಿಮಳೆಗೈದಿದ್ದು ಬರೊಬ್ಬರಿ 16-1 ಗೋಲುಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಏಷ್ಯನ್ ಗೇಮ್ಸ್‌ನ ಕೇವಲ ಎರಡು ಪಂದ್ಯಗಳಲ್ಲಿಯೇ ಭಾರತ ಹಾಕಿ ತಂಡ ಒಟ್ಟು 32 ಗೋಲುಗಳನ್ನು ಗಳಿಸಿದಂತಾಗಿದೆ.
ಮನದೀಪ್ ಸಿಂಗ್ (12', 30', 51'), ಲಲಿತ್ ಉಪಾಧ್ಯಾಯ (16'), ಗುರ್ಜಂತ್ ಸಿಂಗ್ (22'), ವಿವೇಕ್ ಸಾಗರ್ ಪ್ರಸಾದ್ (23'), ಹರ್ಮನ್‌ಪ್ರೀತ್ ಸಿಂಗ್ (24', 39',40', 42') , ಮನ್‌ಪ್ರೀತ್ ಸಿಂಗ್ (37'), ಸಂಶೇರ್ ಸಿಂಗ್ (38'), ಅಭಿಷೇಕ್ (51', 52') ಮತ್ತು ವರುಣ್ ಕುಮಾರ್ (55', 56') ಗೋಲು ಗಳಿಸಿ ಭಾರತದ ಬೃಹತ್ ಗೆಲುವಿಗೆ ಕಾರಣರಾದರು. ಸಿಂಗಾಪುರದ ಪರವಾಗಿ ಮುಹಮ್ಮದ್ ಝಕಿ ಬಿನ್ ಜುಲ್ಕರ್ನೈನ್ (53') ಸಮಾಧಾನಕರ ಗೋಲು ಗಳಿಸಿದರು.

ಏಷ್ಯನ್ ಗೇಮ್ಸ್ ಪುರುಷರ ಹಾಕಿ ಚಾಂಪಿಯನ್‌ಶಿಪ್ ಅನ್ನು ಮೂರು ಬಾರಿ ಗೆದ್ದಿರುವ ಭಾರತ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಭದ್ರವಾಗಿದೆ. ಪ್ರತಿ ಪೂಲ್‌ನ ಅಗ್ರ ಎರಡು ಸ್ಥಾನ ಪಡೆದವರು ಮುಂದಿನ ಹಂತಕ್ಕೆ ಪ್ರವೇಶಿಸಲಿದೆ. ಪ್ರಸ್ತುತ ಎಫ್‌ಐಎಚ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಪುರುಷರ ಹಾಕಿ ತಂಡವು ಉಜ್ಬೇಕಿಸ್ತಾನವನ್ನು 16-0 ಅಂತರದಿಂದ ಸೋಲಿಸಿತು. ಮತ್ತೊಂದೆಡೆ ಸಿಂಗಾಪುರ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 0-11 ಅಂತರದಿಂದ ಸೋಲು ಕಂಡಿತ್ತು.
ಉಜ್ಬೇಕಿಸ್ತಾನ್ ಪಂದ್ಯದಿಮದ ಹೊರಗುಳಿದಿದ್ದ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಈ ಪಂದ್ಯದಲ್ಲಿ ಆಡುವ XI ಪಡೆಗೆ ಮರಳಿದ್ದರು. ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತ ಆಕ್ರಮಣಖಾಇ ಆಟವನ್ನು ಆಡಿದ್ದು ಮೇಲುಗೈ ಸಾಧಿಸಿತು. ವಿಶ್ವದ ನಂ. 49 ತಂಡವಾಗಿರುವ ಸಿಂಗಾಪುರವನ್ನು ಭಾರೀ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications