Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಗೇಮ್ಸ್ 2023: ಕೊರಿಯಾ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶಿಸಿದ ಭಾರತ ಹಾಕಿ ಪುರುಷರ ತಂಡ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡದ ಅಬ್ಬರ ಮುಂದುವರಿದಿದೆ. ದಕ್ಷಿಣ ಕೊರಿಯಾ ವಿರುದ್ಧದ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡ 5-3 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ.

ಈ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಅದ್ಭುತ ಪ್ರದರ್ಶನ ನೀಡಲು ಆರಂಭಿಸಿತ್ತು. ಹಾರ್ದಿಕ್ ಮೊದಲ ಗೋಲು ಸಿಡಿಸುವ ಮೂಲಕ ಆರಂಭಿಕ ಮುನ್ನಡೆಯನ್ನು ಒದಗಿಸಿದರೆ ನಂತರ ಮಂದೀಪ್ ಸಿಂಗ್ ಎರಡನೇ ಗೋಲು ಸಿಡಿಸಿ ಮೇಲುಗೈ ನೀಡಿದರು. ನಂತರ ಲಲಿತ್ ಉಪದ್ಯಾಯ್ ಮೂರನೇ ಗೋಲು ಸಿಡಿಸುವ ಮೂಲಕ ಮೊದಲ ಕ್ವಾರ್ಟರ್‌ನಲ್ಲಿಯೇ ಭಾರತ ತಂಡದ ಹಿಡಿತ ಸಾಧಿಸಲು ಕಾರಣವಾದರು.

Asian Games 2023: Mens Hockey Team win semi final match against Korea enter Finals

ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಕೊರಿಯಾ ಭಾರತಕ್ಕೆ ಪೈಪೋಟಿ ನೀಡುವ ಪ್ರಯತ್ನ ಮಾಡಿತು. 17ನೇ ನಿಮಿಷದಲ್ಲಿ ಎಂ ಜುಂಗ್ ಗೋಲು ಸಿಡಿಸಿ ಕೊರಿಯಾ ಪರ ಗೋಲಿನ ಖಾತೆ ತೆರೆದರೆ ಅದಾದ ಮೂರನೇ ನಿಮಿಷದ ಅಂತರದಲ್ಲಿ ಕೊರಿಯಾ ಮತ್ತೊಂದು ಗೋಲು ಸಿಡಿಸಿತು. ಜುಂಗ್ ಮತ್ತೊಂದು ಗೋಲು ಸಿಡಿಸಿ ಭಾರತದ ಮೇಲೆ ಒತ್ತಡವನ್ನು ಹೇರಿದರು. ಬಳಿಕ 24ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್ ಭಾರತದ ಪರವಾಗಿ ಗೋಲು ಸಿಡಿಸಿ ಮತ್ತೊಮ್ಮೆ ಭಾರತದ ಮುನ್ನಡೆಯ ಅಂತರವನ್ನು 2ಕ್ಕೆ ಏರಿಸಿದರು.

ಇನ್ನು ಮೂರನೇ ಕ್ವಾರ್ಟರ್ ಭಾರತದ ಪಾಲಿಗೆ ಅಷ್ಟೇನೂ ಉತ್ತಮವಾಗಿರಲಿಲ್ಲ. ಬಹುತೇಕ ರಕ್ಷಣಾತ್ಮಕ ಆಟಕ್ಕೆ ಭಾರತ ಮುಂದಾಯಿತು. ಅಲ್ಲದೆ ಈ ಅವಧಿಯಲ್ಲಿ ಒಂದು ಗೋಲನ್ನು ಕೂಡ ಭಾರತ ಬಿಟ್ಟುಕೊಟ್ಟಿತು. ಮುನ್ನಡೆಯುವ ಪ್ರಯತ್ನದಲ್ಲಿ ವಿಫಲವಾದ ಭಾರತ ಒಂದು ಹಂತದಲ್ಲಿ ಅಂತರವನ್ನು ಸಮಬಲಕ್ಕೆ ತಂದುನಿಲ್ಲಿಸುತ್ತದಾ ಎನ್ನುವ ಆತಂಕಕ್ಕೂ ಕಾರಣವಾಗಿತ್ತು.

ಬಳಿಕ ಎಚ್ಚೆತ್ತುಕೊಂಡ ಭಾರತ ಕೊನೆಯ ಕ್ವಾರ್ಟರ್‌ನಲ್ಲಿ ಕೊರಿಯಾ ವಿರುದ್ಧ ಮತ್ತೆ ತಿರುಗಿಬಿತ್ತು. ಈ ಅವಧಿಯಲ್ಲಿ ಭಾರತ ಒಂದು ಗೋಲು ಸಿಡಿಸುವಲ್ಲಿ ಯಶಸ್ವಿಯಾಗಿದ್ದು ಮೇಲುಗೈ ಸಾಧಿಸಿದೆ. ನಂತರ ಕೊನೆಯ ಹಂತದವರೆಗೂ ಕೊರಿಯಾಗೆ ಒಂದು ಗೋಲು ಸಿಡಿಸಲು ಕೂಡ ಅವಕಾಶವನ್ನೇ ನೀಡಲಿಲ್ಲ.

ಇನ್ನು ಈ ಗೆಲುವಿನೊಂದಿಗೆ ಭಾರತ ಏಷ್ಯನ್ ಗೇಮ್ಸ್‌ನಲ್ಲಿ 8 ವರ್ಷಗಳ ಬಳಿಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಕಳೆದ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

Story first published: Wednesday, October 4, 2023, 17:23 [IST]
Other articles published on Oct 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+