ಏಷ್ಯನ್ ಗೇಮ್ಸ್ 2023: ಬಾಂಗ್ಲಾದೇಶವನ್ನು 12-0 ಅಂತರದಿಂದ ಮಣಿಸಿದ ಭಾರತ; ಸೆಮಿಫೈನಲ್‌ಗೆ ಲಗ್ಗೆ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡದ ಅಬ್ಬರದ ಪ್ರದರ್ಶನ ಮುಂದುವರಿದಿದೆ. ಇಂದು ಪೂಲ್ ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಿದ ಭಾರತ ಬರೊಬ್ಬರಿ 12-0 ಅಂತರದಿಂದ ಗೆದ್ದು ಬೀಗಿದೆ. ಈ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಜೊತೆಗೆ ಮತ್ತೊಂದು ಚಿನ್ನದ ಪದಕದ ಮೇಲೆ ಚಿತ್ತ ನೆಟ್ಟಿರುವುದು ಸ್ಪಷ್ಟವಾಗಿದೆ.
ಸಂಪೂರ್ಣವಾಗಿ ಏಕಮುಖವಾಗಿ ಸಾಗಿದ ಈ ಪಂದ್ಯದಲ್ಲಿ ಭಾರತದ ಪರವಾಗಿ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮನ್‌ದೀಪ್ ಸಿಂಗ್ ಹ್ಯಾಟ್ರಿಕ್ ಗೋಲು ಸಿಡಿಸಿದ್ದಾರೆ. ಈ ಮೂಲಕ ಬಾಂಗ್ಲಾದೇಶ ತಂಡಕ್ಕೆ ಯಾವ ಸಣ್ಣ ಅವಕಾಶವೂ ದೊರೆಯದಂತಾಗಿದ್ದು ಭರ್ಜರಿಯಾಗಿ ಪಂದ್ಯವನ್ನು ಗೆದ್ದುಕೊಂಡಿದೆ.

ಇನ್ನು ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಎದುರಾಲೀಗ್ಳ ವಿರುದ್ಧ ಸತತವಾಗಿ ಗೋಲುಗಳ ಸುರಿಮಳೆಯನ್ನೇ ಸುರಿಸುತ್ತಾ ಸಾಗಿದೆ. ಇದಕ್ಕೂ ಹಿಂದಿನ ,ಮುಖಾಮುಖಿಯಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಭಾರತ 10-2 ಅಂತರದಿಂದ ಗೆಲುವು ಸಾಧಿಸಿತ್ತು. ಅದಕ್ಕೂ ಮುನ್ನ ಉಜ್ಬೇಕಿಸ್ತಾನ್ (16-0), ಸಿಂಗಾಪುರ (16-1) ಮತ್ತು ಜಪಾನ್ (4-2) ವಿರುದ್ಧವೂ ಭಾರೀ ಅಂತರದಿಂದ ಗೆಲುವು ಸಾಧಿಸಿ ಅದ್ಭುತ ಆತ್ಮವಿಶ್ವಾಸವನ್ನು ಗಳಿಸಿಕೊಂಡಿದೆ.
ಮೊದಲ ಕ್ವಾರ್ಟರ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಎರಡು ನಿಮಿಷಗಳಲ್ಲಿ ಎರಡು ಗೋಲು ಗಳಿಸುವುದರೊಂದಿಗೆ ಭಾರತ ಆರಂಭಿಕ ಮುನ್ನಡೆ ಸಾಧಿಸಿತು. ಮಂದೀಪ್ ಸಿಂಗ್ ಕೂಡ ಸ್ಕೋರ್‌ಲೈನ್‌ಗೆ ಕೊಡುಗೆ ನೀಡಿದರು. ಇದು ಭಾರತಕ್ಕೆ 3-0 ಮುನ್ನಡೆಯುಂಟು ಮಾಡಿತು. ಮಾಡಿತು. ಮೊದಲ ಕ್ವಾರ್ಟರ್ ಅಂತ್ಯದ ವೇಳೆಗೆ ಭಾರತ 3-0 ಮುನ್ನಡೆ ಸಾಧಿಸಿತ್ತು.
ಇನ್ನು ಎರಡನೇ ಕ್ವಾರ್ಟರ್ ಆರಂಭವಾಗುತ್ತಿದ್ದಂತೆ ಭಾರತ ಆಕ್ರಮಣಕಾರಿ ಆಟ ಮುಂದುವರಿಸಿತು. ಲಲಿತ್ ಕುಮಾರ್ ಉಪಾಧ್ಯಾಯ ಅವರು ಚೆಂಡನ್ನು ಗುರಿ ಮುಟ್ಟಿಸಿ ಸ್ಕೋರನ್ನು 4-0 ಗೆ ಕೊಂಡೊಯ್ದರು. ನಂತರ ಮಂದೀಪ್ ಸಿಂಗ್ ಪಂದ್ಯದ ತಮ್ಮ ಎರಡನೇ ಗೋಲು ಗಳಿಸಿ ಭಾರತದ ಮುನ್ನಡೆಯನ್ನು 5-0ಗೆ ವಿಸ್ತರಿಸಿದರು. ಅಮಿತ್ ರೋಹಿದಾಸ್ ಮತ್ತೊಂದು ಗೋಲು ಸೇರಿಸಿದರು, ಭಾರತವು 6-0 ಮುನ್ನಡೆಯೊಂದಿಗೆ ಮೊದಲಾರ್ಧವನ್ನು ಕೊನೆಗೊಳಿಸಿತು.
ಇನ್ನು ಮೂರನೇ ಕ್ವಾರ್ಟರ್‌ನಲ್ಲಿಯೂ ಭಾರತದ ಪ್ರಾಬಲ್ಯವನ್ನು ಕಾಯ್ದುಕೊಂಡಿತು. ಹರ್ಮನ್‌ಪ್ರೀತ್ ಸಿಂಗ್ ಪಂದ್ಯದ ತನ್ನ ಮೂರನೇ ಗೋಲು ಗಳಿಸಿ ಸ್ಕೋರ್ ಅನ್ನು 7-0ಗೆ ಕೊಂಡೊಯ್ದರು. ನಂತರ ಅಭಿಷೇಕ್ ಅದ್ಭುತ ಗೋಲು ಗಳಿಸಿ ಮೂರನೇ ಕ್ವಾರ್ಟರ್‌ನ ಅಂತ್ಯಕ್ಕೆ ಭಾರತದ ಮುನ್ನಡೆಯನ್ನು 8-0ಗೆ ಏರಿಸಿದರು.
ಇನ್ನು ನಾಲ್ಕನೇ ಮತ್ತು ಅಂತಿಮ ಕ್ವಾರ್ಟರ್‌ನಲ್ಲಿಯೂ ಭಾರತದ ಆಕ್ರಮಣಕಾರಿ ಆಟದ ವೇಗ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಮಂದೀಪ್ ಸಿಂಗ್ ಪಂದ್ಯದ ತನ್ನ ಮೂರನೇ ಗೋಲು ಗಳಿಸಿ, ಸ್ಕೋರ್ ಅನ್ನು 9-0ಗೆ ಕೊಂಡೊಯ್ದರು. ನೀಲಕಂಠ ಶರ್ಮಾ ಅವರ ಮತ್ತೊಂದು ಗೋಲಿನೊಂದಿಗೆ ಭಾರತ ಎರಡಂಕಿ ತಲುಪಿ 10-0 ಮುನ್ನಡೆ ಸಾಧಿಸಿತು. ಸುಮಿತ್ ಮತ್ತು ಅಭಿಷೇಕ್ ತಲಾ ಒಂದು ಗೋಲು ಸೇರಿಸುವ ಮೂಲಕ ಅಂತಿಮ ಸ್ಕೋರ್ ಅನ್ನು ಭಾರತದ ಪರವಾಗಿ 12-0 ಗೆ ಏರಿಸಿದರು. ಈ ಮೂಲಕ ಭಾರತ ಹಾಲಿ ತಂಡದ ಅಬ್ಬರದಾಟ ಮುಂದುವರಿಸಿದ್ದು ಸೆಮಿಫೈನಲ್‌ನಲ್ಲಿ ಸ್ಥಾನವನ್ನು ಖಚಿತೊಡಿಸಿಕೊಂಡಿದೆ.
ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅಮೋಘ ಪ್ರದರ್ಶನ ನೀಡುತ್ತಿದ್ದು ಐತಿಹಾಸಿಕ ಸಾಧನೆಯತ್ತ ಹೆಜ್ಜೆಯಿಡುತ್ತಿದ್ದಾರೆ. ಈಗಾಗಲೇ 56 ಪದಕಗಳನ್ನು ಭಾರತ ತನ್ನ ಕೊರಳಿಗೇರಿಸಿಕೊಂಡಿದ್ದು 100ಕ್ಕೂ ಅಧಿಕ ಪದಕಗಳನ್ನು ಗೆಲ್ಲಿವ ಕನಸು ನನಸಾಗೊಸುವತ್ತ ಹೆಜ್ಜೆಯಿರಿಸಿದೆ. ಕಳೆದ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 75 ಪದಕಗಳನ್ನು ಗೆದ್ದಿರುವುದು ಈವರೆಗಿನ ಭಾರತದ ಅತ್ಯುತ್ತಮ ಪದಕ ಬೇಟೆ ಎನಿಸಿಕೊಂಡಿತ್ತು. ಹೀಗಾಗಿ ಈ ಬಾರಿ 100ಕ್ಕೂ ಅಧಿಕ ಪದಕ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದಿದೆ. ಟೂರ್ನಿಯಲ್ಲಿ ಇನ್ನೂ 6 ದಿನಗಳು ಬಾಕಿಯಿರುವ ಕಾರಣ ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯುವುದು ನಿಚ್ಚಳ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications