Asian Hockey Champions Trophy 2024: ಭಾರತ ತಂಡಕ್ಕೆ ಹ್ಯಾಟ್ರಿಕ್ ಗೆಲುವು
2024ರ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಅಮೋಘ ಪ್ರದರ್ಶನ ಮುಂದುವರಿದಿದೆ. ಇಂದು ಬುಧವಾರ ನಡೆದ ಗುಂಪು ಪಂದ್ಯದಲ್ಲಿ ಭಾರತ 8-1 ಗೋಲು ಅಂತರದಿಂದ ಮಲೇಷ್ಯಾ ತಂಡವನ್ನು ಮಣಿಸಿದೆ.
ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಈ ಪಂದ್ಯದಲ್ಲಿ ರಾಜ್‌ಕುಮಾರ್ ಪಾಲ್ ಅದ್ಭುತ ಹ್ಯಾಟ್ರಿಕ್ ಗೋಲು ಗಳಿಸಿದರೆ, ಅರಿಜಿತ್ ಸಿಂಗ್ ಹುಂಡಲ್ ಎರಡು ಗೋಲುಗಳನ್ನು ಬಾರಿಸಿ ಮಲೇಷ್ಯಾ ತಂಡವನ್ನು ಭಾರೀ ಅಂತರದಿಂದ ಸೋಲಿಸಲು ನೆರವಾದರು.

ಆರಂಭದಿಂದಲ್ಲೇ ಮಲೇಷ್ಯಾ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಿತು. ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ರಾಜ್‌ಕುಮಾರ್ ತಲಾ ಒಂದು ಗೋಲು ಗಳಿಸಿದರೆ, ಮೊದಲ ಮತ್ತು ಮೂರನೇ ಕ್ವಾರ್ಟರ್‌ನಲ್ಲಿ ಹುಂಡಲ್ ಗೋಲು ಗಳಿಸಿದರು. ಜುಗರಾಜ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್‌ಗಳಿಂದ ಗೋಲು ಹೊಡೆದರು. ಉತ್ತಮ್ ಸಿಂಗ್ ಕ್ವಾರ್ಟರ್ 3 ರಲ್ಲಿ ಭಾರತದ 8ನೇ ಗೋಲು ಗಳಿಸಿದರು. ಇದು ಟೂರ್ನಿಯಲ್ಲಿ ಭಾರತಕ್ಕೆ ಸತತ ಮೂರನೇ ಜಯವಾಗಿದೆ.
ಪಂದ್ಯ ಮೇಲೆ ಹಿಡಿತ
ಭಾರತ ಎದುರು ಮಲೇಷ್ಯಾ ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಅಷ್ಟರ ಮಟ್ಟಿಗೆ ಪಂದ್ಯದ ಮೇಲೆ ಭಾರತ ಹಿಡಿತ ಸಾದಿಸಿತು. ಪರಿಣಾಮ ವಿರಾಮದ ವೇಳೆಗೆ ಭಾರತ ತನ್ನ ಅತ್ಯುತ್ತಮ ಪ್ರದರ್ಶನದಿಂದ 5-0 ಮುನ್ನಡೆ ಕಾಯ್ದುಕೊಂಡಿತು. ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಎರಡು ಗೋಲು ಗಳಿಸಿದರೆ ಎದುರಾಳಿ ಮಲೇಷ್ಯಾ ತಂಡ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.
ಮೂರನೇ ಕ್ವಾರ್ಟರ್‌ನ ಮುಕ್ತಾಯದ ವೇಳೆಗೆ, ಮಲೇಷ್ಯಾ ಕೂಡ ಒಂದು ಗೋಲು ಗಳಿಸಿತು. ಆದರೆ ಈ ಗೋಲು ಮಲೇಷ್ಯಾ ತಂಡವನ್ನು ಪಂದ್ಯಕ್ಕೆ ಮರಳಿ ತರಲು ಸಾಕಾಗಲಿಲ್ಲ. ಏಕೆಂದರೆ ಭಾರತ ಈಗಾಗಲೇ 8 ಅಂಕಗಳ ಮುನ್ನಡೆ ಸಾಧಿಸಿತು.
ನಾಲ್ಕನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ನಡುವೆ ಉತ್ತಮ ಪೈಪೋಟಿ ಏರ್ಪಟ್ಟಿತು. ಆದರೆ ಎರಡು ತಂಡಗಳು ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯ 8-1 ಗೋಲುಗಳಿಂದ ಮುಕ್ತಾಯವಾಯಿತು. ಮುನ್ನ ಭಾರತ ಆತಿಥೇಯ ಚೀನಾ ಮತ್ತು ಜಪಾನ್ ತಂಡವನ್ನು ಭಾರತ ಸೋಲಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications