Paris Olympics 2024: ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಪತ್ನಿ ಮಿಂಚಲು ರೆಡಿ!
ಜುಲೈ 23 ಮಂಗಳವಾರ, ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೆಲವು ದಿನಗಳ ಮಾತ್ರ ಬಾಕಿ ಉಳಿದಿವೆ. ಜುಲೈ 26ರಿಂದ ಆರಂಭವಾಗಲಿರುವ ಈ ಮೆಗಾ ಕ್ರೀಡಾಕೂಟದಲ್ಲಿ ವಿಶ್ವದ ಎಲ್ಲಾ ಆಥ್ಲೀಟ್ಸ್ ಪದಕ ಗೆಲ್ಲವು ನಿರೀಕ್ಷೆಯಲ್ಲಿದ್ದಾರೆ.
ಆಸ್ಟ್ರೇಲಿಯಾದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳೂ ಕೂಡ ಪದಕ ಗೆಲ್ಲುವ ರೇಸ್‌ನಲ್ಲಿವೆ. ಮಹಿಳಾ ಹಾಕಿ ತಂಡದಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಪತ್ನಿ ಕೂಡ ಇರುವುದು ವಿಶೇಷವಾಗಿದೆ.

ಒಂದೆಡೆ ಪತಿ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೆ, ಇತ್ತ ಕ್ರಿಕೆಟಿಗನ ಪತ್ನಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಆ ಸ್ಟಾರ್ ಆಸೀಸ್ ಕ್ರಿಕೆಟಿಗ ಬೇರೆ ಯಾರು ಅಲ್ಲ, ಆಸ್ಟ್ರೇಲಿಯಾ ತಂಡದಲ್ಲಿ ಫಿನಿಶರ್ ಪಾತ್ರ ನಿರ್ವಹಿಸುತ್ತಿರುವ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್. ಈಗ ಟಿಮ್ ಡೇವಿಡ್ ಅವರ ಪತ್ನಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಿಮ್ ಡೇವಿಡ್ ಅವರ ಪತ್ನಿ ಸ್ಟೆಫನಿ ಕೆರ್ಶಾ ಆಸ್ಟ್ರೇಲಿಯಾದ ಹಾಕಿ ಆಟಗಾರ್ತಿ ಆಗಿದ್ದು, 29 ವರ್ಷದ ಸ್ಟೆಫನಿ ಕೆರ್ಶಾ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಗೇಮ್ ವಿಲೇಜ್ ತಲುಪಿದ್ದಾರೆ. ಆಸ್ಟ್ರೇಲಿಯಾ ಹಾಕಿಯಲ್ಲಿ ಒಲಿಂಪಿಕ್ ಪದಕ ಗೆಲ್ಲುವಲ್ಲಿ ಕೆರ್ಶಾ ಪ್ಯಾರಿಸ್ ಪ್ರದರ್ಶನ ಬಹಳ ಮುಖ್ಯವಾಗಿದೆ.

ಒಲಿಂಪಿಕ್ ಗೇಮ್ಸ್ ವಿಲೇಜ್‌ನಲ್ಲಿ ಸ್ಟೆಫಾನಿ ಕೆರ್ಶಾ ಅವರು ಮೈದಾನದಲ್ಲಿ ಕಾಣಿಸಿಕೊಂಡಿದ್ದು, ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಟೆಫನಿ ಕೆರ್ಶಾ ಒಲಿಂಪಿಕ್ಸ್‌ಗೆ ಹೊರಡುವ ಮೊದಲು ತಂಡದ ಭೋಜನದ ಕೂಟದ ಫೋಟೋವನ್ನು ಸಹಾ ಶೇರ್ ಮಾಡಿದ್ದಾರೆ.
ಸ್ಟೆಫನಿ ಕೆರ್ಶಾ ಎರಡನೇ ಬಾರಿಗೆ ಒಲಿಂಪಿಕ್ಸ್‌ನ ಭಾಗವಾಗಿದ್ದಾರೆ. ಕಳೆದ ಬಾರಿ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ಆದರೆ, ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ವನಿತೆಯರು ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಪದಕದ ರೇಸ್‌ನಿಂದ ಹೊರಹಾಕಿದ್ದರು.
ಆಸ್ಟ್ರೇಲಿಯಾ ಹಾಕಿ ತಂಡ 2000ರ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ಚಿನ್ನದ ಪದಕ ಗೆದ್ದಿತ್ತು. ಅಂದಿನಿಂದ ಮಹಿಳಾ ಕಾಂಗೂರು ಪಡೆ ಹಾಕಿಯಲ್ಲಿ ಪ್ರತಿ ಬಾರಿ ನಿರಾಶೆಗೊಂಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಮೂರು ಬಾರಿಯ ಒಲಿಂಪಿಕ್ ಚಾಂಪಿಯನ್ ಈ ಬಾರಿ ಚಿನ್ನ ಗೆದ್ದು ತವರಿಗೆ ಮರಳಲು ಭರ್ಜರಿ ಸಿದ್ಧತತೆಯೊಂದಿಗೆ ಪ್ಯಾರಿಸ್‌ಗೆ ಬಂದಿದೆ. ಈ ನಡುವೆ ಸ್ಟೆಫನಿ ಕೆರ್ಶಾ ಅವರಿಂದ ತಂಡವು ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ.
ಟಿಮ್ ಡೇವಿಡ್
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಟಿಮ್ ಡೇವಿಡ್ ಆಡುತ್ತಿದ್ದಾರೆ. ಎಂಐ ತಂಡದಲ್ಲಿ ಫಿನಿಶರ್ ಆಗಿರುವ ಟಿಮ್ ಡೇವಿಡ್ ಅವರನ್ನು ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಸೇರಿಸಿಕೊಂಡಿತ್ತು.
ಆ ಬಳಿಕ ಟಿಮ್ ಡೇವಿಡ್ ಅವರನ್ನು ಆರ್‌ಸಿಬಿ ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಈ ವರ್ಷವೂ ಐಪಿಎಲ್ ಮೆಗಾ ಹರಾಜು ನಡೆಯುವುದರಿಂದ ಎಂಐ ಫ್ರಾಂಚೈಸಿ ಯಾವ 4 ಆಟಗಾರರನ್ನು ಉಳಿಸಿಕೊಳ್ಳುತ್ತದೆಯೋ? ಕಾದು ನೋಡಬೇಕಾಗಿದೆ. ಇದರಲ್ಲಿ ಟಿಮ್ ಡೇವಿಡ್ ಕೂಡ ಹೊರಗುಳಿಯುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications