For Quick Alerts
ALLOW NOTIFICATIONS  
For Daily Alerts

ಭಾರತೀಯ ಹಾಕಿ ಆಟಗಾರರಿಗೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗರಿ

FIH Hockey Stars Awards 2020-21: List Of Indian Players won the prestigious awards

ನವದೆಹಲಿ: ಅಕ್ಟೋಬರ್ 6ರ ಬುಧವಾರ ಭಾರತೀಯ ಹಾಕಿ ಆಟಗಾರರು, ಆಟಗಾರ್ತಿಯರು ಹೊಸ ದಾಖಲೆ ನಿರ್ಮಿಸಿದ್ದಾರೆ. ಇಂಟರ್ ನ್ಯಾಷನಲ್‌ನ ಹಾಕಿ ಫೆಡರೇಶನ್‌ (ಎಫ್‌ಐಎಚ್‌)ನ ಹಲವಾರು ಪ್ರಶಸ್ತಿಗಳನ್ನು ಭಾರತದ ಹಾಕಿ ಬಾಚಿಕೊಂಡಿದೆ. ಎಫ್‌ಐಎಚ್ ವರ್ಷದ ಆಟಗಾರ, ಗೋಲ್ ಕೀಪರ್ ಆಫ್‌ ದ ಇಯರ್ ಮತ್ತು ಎಫ್‌ಐಎಚ್ ಕೋಚ್ ಆಫ್‌ ದ ಇಯರ್ ಪ್ರಶಸ್ತಿಗಳು ಭಾರತದ ಪಾಲಾಗಿವೆ.

ಪ್ರಮುಖ ಡ್ರ್ಯಾಗ್‌ಫ್ಲಿಕ್ಕರ್ ಆಟಗಾರ ಹರ್ಮನ್‌ಪ್ರೀತ್‌ ಸಿಂಗ್ ಅವರಿಗೆ ಎಫ್‌ಐಎಚ್ ಪ್ಲೇಯರ್ ಆಫ್‌ ದ ಇಯರ್ ಪ್ರಶಸ್ತಿ ಲಭಿಸಿದೆ. ಪುರುಷರ ವಿಭಾಗದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ಗೆ ಈ ಪ್ರಶಸ್ತಿ ಸಿಕ್ಕಿದೆ. ಭಾರತದ ಶ್ರೀಜೇಶ್‌ಗೆ ಗೋಲ್‌ ಕೀಪರ್ ಆಫ್‌ ದ ಇಯರ್ ಪ್ರಶಸ್ತಿ ದೊರೆತಿದೆ. ಶ್ರೀಜೇಶ್ ಈ ಬಾರಿ ನಡೆದಿದ್ದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತೀಯ ಹಾಕಿ ಪುರುಷರ ತಂಡದಲ್ಲಿದ್ದರು.

ಭಾರತದ ಪುರುಷರ ಹಾಕಿಯ ಮುಖ್ಯ ಕೋಚ್ ಗ್ರಹಾಂ ರೀಡ್‌ಗೆ ಎಫ್‌ಐಎಚ್‌ ಕೋಚ್ ಆಫ್‌ ದ ಇಯರ್ ಪ್ರಶಸ್ತಿ ದೊರೆತಿದೆ. ಭಾರತದ ಮಹಿಳಾ ಹಾಕಿಯ ಮಾಜಿ ಮುಖ್ಯ ಕೋಚ್ ಸ್ಜೋರ್ಡ್ ಮರಿಜ್ನೆಗೆ ಮಹಿಳಾ ವಿಭಾಗದ ಎಫ್‌ಐಎಚ್ ಕೋಚ್ ಆಫ್‌ ದ ಇಯರ್ ಪ್ರಶಸ್ತಿ ಲಭಿಸಿದೆ.

ಮಹಿಳಾ ವಿಭಾಗದಲ್ಲಿ ಡ್ರ್ಯಾಗ್‌ ಫ್ಲಿಕ್ಕರ್ ಗುರ್‌ಜಿತ್ ಕೌರ್ ಎಫ್‌ಐಎಚ್ ಪ್ಲೇಯರ್ ಆಫ್‌ ದ ಇಯರ್ ಪ್ರಶಸ್ತಿ ಲಭಿಸಿದೆ. ಓಟಿಂಗ್ ಆಧಾರದಲ್ಲಿ ಈ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಇದರಲ್ಲಿ ಆರು ಭಾರತೀಯ ಆಟಗಾರರು ಮತ್ತು ಮಹಿಳಾ ಮತ್ತು ಪುರುಷರ ವಿಭಾಗದ ಎರಡು ಪ್ರಶಸ್ತಿಗಳು ಭಾರತಕ್ಕೆ ಬಂದಿವೆ.

Story first published: Wednesday, October 6, 2021, 20:55 [IST]
Other articles published on Oct 6, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+