Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympic 2025: ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡಕ್ಕೆ ಮೊದಲ ಸೋಲು

ಆಗಸ್ಟ್‌ 1 ಗುರುವಾರ, ಪ್ಯಾರಿಸ್‌ ಒಲಿಂಪಿಕ್ಸ್‌ 2024ರಲ್ಲಿ ಭಾರತದ ಪುರುಷರ ಹಾಕಿ ತಂಡ ಮೊದಲ ಸೋಲು ಕಂಡಿದೆ. ಇಂದು ನಡೆದ ನಡೆದ ಪೂಲ್-ಬಿ ಗುಂಪು ಹಂತದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಿಂದ ಭಾರತ ಸೋತಿದೆ.

2020ರ ಟೋಕಿಯೊ ಕಂಚಿನ ಪದಕ ವಿಜೇತ ಭಾರತ ಹಾಕಿ ತಂಡವು ಪ್ಯಾರಿಸ್‌ನಲ್ಲಿ ತನ್ನ ಕೊನೆಯ 3 ಪಂದ್ಯಗಳಲ್ಲಿ 2 ಅನ್ನು ಗೆದ್ದಿದೆ. ಮೊದಲು ಹರ್ಮನ್ ಪ್ರೀತ್ ಸಿಂಗ್ ನೇತೃತ್ವದ ತಂಡವು ನ್ಯೂಜಿಲೆಂಡ್ ಅನ್ನು 3-2 ರಿಂದ ಸೋಲಿಸಿತು.

First defeat for Indian hockey team in Paris Olympics 2024

ಇದಾದ ಬಳಿಕ ಐರ್ಲೆಂಡ್ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿದರೆ, ಅರ್ಜೆಂಟೀನಾ ಎದುರು 1-1 ಗೋಲುಗಳಿಂದ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿತ್ತು.

ಬೆಲ್ಜಿಯಂ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ಮೊದಲಾರ್ಧದಲ್ಲಿ 1-0 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು. ಸ್ಟಾರ್ ಫಾರ್ವರ್ಡ್ ಆಟಗಾರ ಅಭಿಷೇಕ್ 18ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

ಆದರೆ, ಭಾರತ ತನ್ನ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಮೂರನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂನ ಥಿಬ್ಯೂ ಸ್ಟಾಕ್‌ಬ್ರೋಕ್ಸ್ (33 ನಿಮಿಷ) ಮತ್ತು ಜಾನ್-ಜಾನ್ ಡೊಹ್ಮೆನ್ (44 ನಿಮಿಷ) ಎರಡು ಗೋಲು ಗಳಿಸಿದರು. ಪರಿಣಾಮ ಬೆಲ್ಜಿಯಂ ತಂಡವು 2-1 ಗೋಲುಗಳಿಂದ ಭಾರತ ಮೇಲೆ ಪ್ರಾಬಲ್ಯ ಸಾಧಿಸಿತು.

ಇದಾದ ಬಳಿಕ ಭಾರತ ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಬೆಲ್ಜಿಯಂ ಎದುರು ಭಾರತ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

ಈ ಗೆಲುವಿನೊಂದಿಗೆ ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತನ್ನ ಗೆಲುವಿನ ಓಟವನ್ನು ಪ್ಯಾರಿಸ್‌ನಲ್ಲಿ ಮುಂದುವರಿಸಿದೆ. ಈ ಗೆಲುವು ದಾಖಲಿಸುವ ಮುನ್ನ ಐರ್ಲೆಂಡ್ ಅನ್ನು 2-0 ಗೋಲುಗಳಿಂದ ಬೆಲ್ಜಿಯಂ ಸೋಲಿಸಿತ್ತು.

ನಂತರ ನ್ಯೂಜಿಲೆಂಡ್ ವಿರುದ್ಧ 2-1 ಗೆಲುವು ದಾಖಲಿಸಿದರೆ, 2020ರ ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾ ತಂಡದ ವಿರುದ್ಧ 6-2 ಗೋಲುಗಳ ಭಾರಿ ಅಂತರದಿಂದ ಗೆಲುವಿನ ಸಂಭ್ರಮಾಚರಣೆ ಮಾಡಿತ್ತು.

ಮತ್ತೊಂದೆಡೆ ಬೆಲ್ಜಿಯಂ ವಿರುದ್ಧ ಸೋಲು ಕಂಡ ಭಾರತವು ಕ್ವಾರ್ಟರ್ ಫೈನಲ್‌ಗೆ ತಲುಪಿದೆ. ಆದರೆ ಬಿ ಗುಂಪಿನಲ್ಲಿ ಭಾರತವು ಅಗ್ರ-4 ರಲ್ಲಿ ಉಳಿಯುವುದು ಖಚಿತವಾಗಿದೆ. ಭಾರತ ತಂಡದ ಹೊರತಾಗಿ, ಬೆಲ್ಜಿಯಂ ಕೂಡ ಪುರುಷರ ಹಾಕಿ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

Story first published: Thursday, August 1, 2024, 16:21 [IST]
Other articles published on Aug 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+