ಹಾಕಿ ಸ್ಟಾರ್ ಈಗ ಉಗ್ರರ ಕೊಂದ ಸೂಪರ್ ಕಾಪ್
ಚಂದೀಗಢ, ಆಗಸ್ಟ್ 03: ಹಾಕಿ ಇಂಡಿಯಾದ ಸ್ಟಾರ್ ಜುಗ್ರಾಜ್ ಸಿಂಗ್ ಈಗ ಸೂಪರ್ ಕಾಪ್ ಆಗಿ ಪರಿವರ್ತನೆಗೊಂಡಿದ್ದಾರೆ. ಪಂಜಾಬಿನ ಗುರ್ದಾಸ್ಪುರ ಜಿಲೆಯ ದಿನಾನಗರ್ ನಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಲ್ಗೊಂಡು ಜುಗ್ರಾಜ್ ಸದೆಬಡೆದಿದ್ದಾರೆ.
32 ವರ್ಷ ವಯಸ್ಸಿನ ಜುಗ್ ರಾಜ್ ಸಿಂಗ್ ಅವರು ಪಂಜಾಬ್ ಪೊಲೀಸ್ ಪರ ಗುಂಡಿನ ಚಕಮಕಿಯಲ್ಲಿ ಪಾಲ್ಗೊಂಡು ಶಸ್ತ್ರಧಾರಿ ಉಗ್ರರನ್ನು ನೆಲಕ್ಕುರುಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಆಟಗಾರರಾಗಿದ್ದ ಜುಗ್ ರಾಜ್ ಅವರು ಹಾಕಿ ಇಂಡಿಯಾ ಪರ ಪೆನಾಲ್ಟಿ ಕಾರ್ನರ್ ತಜ್ಞ ಎನಿಸಿದ್ದರು. ಈಗ ಪೊಲೀಸ್ ಪಡೆ ಸೇರಿ ಡೆಪ್ಯುಟಿ ಸೂಪರ್ ರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ ಪಿ) ಆಗಿ ಅಮೃತ್ ಸರ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗುರ್ ದಾಸನ್ ಪುರ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ಆರಂಭವಾದಾಗ ಜುಗ್ ರಾಜ್ ಅವರಿಗೂ ಕರೆ ಬಂದಿದೆ. ಇತರೆ ಪೊಲೀಸ್ ಪಡೆ ಜೊತೆ ಬೆಳಗ್ಗೆ ದಿನಾನಗರ್ ತಲುಪಿ 8.15ಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ. ನಂತರ ಉಗ್ರರನ್ನು ಸದೆಬಡೆದ ಖುಷಿಯಲ್ಲಿ ಪಂಜಾಬ್ ಪೊಲೀಸ್ ಸಂಭ್ರಮಾಚರಣೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.
ಮಾಜಿ ಹಾಕಿ ಆಟಗಾರ ಜುಗ್ರಾಜ್ ಅವರು 12 ವರ್ಷಗಳ ಹಿಂದೆ ಜಲಂಧರ್ ನಲ್ಲಿ ಕಾರು ಅಪಘಾತದಲ್ಲಿ ಬಚಾವ್ ಆಗಿದ್ದರು. ನಂತರ ಹಾಕಿ ಬಿಟ್ಟು ಪೊಲೀಸ್ ಪಡೆ ಸೇರಿದ ಜುಗ್ ರಾಜ್ ಅವರು 10 ಗಂಟೆಗೂ ಅಧಿಕ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಪಾಲ್ಗೊಂಡ ಸಂತಸವನ್ನು ಹಂಚಿಕೊಂಡಿದ್ದಾರೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications