Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಖೇಲ್ ರತ್ನ ಪ್ರಶಸ್ತಿಗೆ ಹಾಕಿ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ನಾಮನಿರ್ದೇಶನ

Hockey India Recommends Rani Rampal For Rajiv Gandhi Khel Ratna Award

ಹಾಕಿ ಇಂಡಿಯಾ ಭಾರತ ಮಹಿಳಾ ಹಾಕಿ ತಂಡದ ನಾಯಕಿಯನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಹಾಕಿ ತಂಡದ ನಾಯಕಿ ರಾಣಿ ರಾಂಪಲ್ ಅವರು ಈ ಪ್ರತಿ‍ಷ್ಟಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ರಾಣಿ ರಾಂಪಲ್ ನಾಯಕತ್ವದಲ್ಲಿನ ಭಾರತ ತಂಡ 2017ರಲ್ಲಿ ಮಹಿಳಾ ಏಷ್ಯಾ ಕಪ್ ಜಯಸಿತ್ತು.

ರಾಣಿ ರಾಂಪಲ್ ನಾಯಕತ್ವದಲ್ಲಿನ ಭಾರತ ತಂಡ 2017ರಲ್ಲಿ ಮಹಿಳಾ ಏಷ್ಯಾ ಕಪ್ ಜಯಸಿತ್ತು. 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದ ರಾಣಿ ರಾಂಪಲ್ ನೇತೃತ್ವದ ತಂಡ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಹಾಯ ಮಾಡುವ ನಿರ್ಣಾಯಕ ಗುರಿಯನ್ನು ಗಳಿಸಿಕೊಂಡಿತ್ತು.

ಈ ಅವಧಿಯಲ್ಲಿ ಭಾರತದ ವನಿತೆಯರ ತಂಡ ತನ್ನ ಅತ್ಯುತ್ತಮ ನಂಬರ್ 9ನೇ ಸ್ಥಾನಕ್ಕೇರಿತ್ತು.ರಾಣಿ ರಾಂಪಲ್ 2016ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 2020ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಸರ್ದಾರ್ ಸಿಂಗ್ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದಿರುವ ಕೊನೆಯ ಹಾಕಿ ಆಟಗಾರ. ಪ್ರತಿಷ್ಠಿತ ಪ್ರಶಸ್ತಿ ಪಡೆಯುವ ಎಲ್ಲಾ ಅರ್ಹತೆಗಳು ರಾಣಿ ರಾಂಪಲ್ ಅವರಿಗೆ ಇದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್ ಮುಸ್ತಕ್ ಅಹ್ಮದ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಇನ್ನು ಮೂವರು ಆಟಗಾರ್ತಿಯರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ವಂದನಾ ಕಟಾರಿಯಾ, ಮೊನಿಕಾ ಮತ್ತು ಹರ್ಮನ್ ಪ್ರೀತ್ ಸಿಂಗ್ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

Story first published: Wednesday, June 3, 2020, 21:25 [IST]
Other articles published on Jun 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+