Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಹಾಕಿ: ದ. ಕೊರಿಯಾ ವಿರುದ್ಧ ಭಾರತ ತಂಡಕ್ಕೆ ಸೋಲು

Hockey: Indian eves lose 0-4 to South Korea

ಜಿನ್‌ಚೆಯಾನ್‌ (ಕೊರಿಯಾ), ಮೇ 24: ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲಗೊಂಡ ಭಾರತ ಮಹಿಳಾ ಹಾಕಿ ತಂಡ ಇಲ್ಲಿ ನಡೆದ ಆತಿಥೇಯ ದಕ್ಷಿಣ ಕೊರಿಯಾ ವಿರುದ್ಧದ ಹಾಕಿ ಟೆಸ್ಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 0-4 ಅಂತರದ ಹೀನಾಯ ಸೋಲನುಭವಿಸಿದೆ.

ಸರಣಿಯ ಅಂತಿಮ ಪಂದ್ಯದಲ್ಲಿ ರಾಣಿ ರಾಮ್‌ಪಾಲ್‌ ನೇತೃತ್ವದ ಭಾರತ ತಂಡ ಆಘಾತ ಅನುಭವಿಸಿದರೂ, ಈ ಮೊದಲು ನಡೆದ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿದರ ಫಲವಾಗಿ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ.

ಪಂದ್ಯದಲ್ಲಿ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ದಕ್ಷಿಣ ಕೊರಿಯಾ ತಂಡ ಭಾರತ ತಂಡದ ಡಿಫೆನ್ಸ್‌ ವಿಭಾಗದ ಮೇಲೆ ಸತತವಾಗಿ ಒತ್ತಡ ಹೇರಿತು. ಪರಿಣಾಮ ಪಂದ್ಯದಲ್ಲಿ ಒಟ್ಟಾರೆ 5 ಪೆನಾಲ್ಟಿ ಕಾರ್ನರ್‌ ಅವಕಾಶ ಸೃಷ್ಠಿಸಿ ಒಂದರಲ್ಲಿ ಯಶಸ್ಸು ಕಂಡಿತು. ಪಂದ್ಯದ 29ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಜಾಂಗ್‌ ಹೀಸಾನ್‌ ಆತಿಥೇಯರಿಗೆ ಮೊದಲ ಯಶಸ್ಸು ತಂದುಕೊಟ್ಟರು. ಬಳಿಕ 41ನೇ ನಿಮಿಷದಲ್ಲಿ ಕಿಮ್‌ ಹ್ಯೂನ್ಜಿ ಮತ್ತು ಕಾಂಗ್‌ ಜಿನಾ ಸತತ 2 ಗೋಲ್‌ ಬಾರಿಸಿದರು. ಅಂತಿಮವಾಗಿ 53ನೇ ನಿಮಿಷದಲ್ಲಿ ಲೀ ಯುರಿ ಚೆಂಡನ್ನು ಗೋಲ್‌ ಪೆಟ್ಟಿಗೆ ಸೇರಿಸಿ ತಂಡಕ್ಕೆ 4-0 ಅಂತರದ ಭರ್ಜರಿ ಜಯ ತಂದುಕೊಟ್ಟರು.

"ಕಲಿಕೆಯ ಹಾದಿ ಸದಾ ಏಳು ಬೀಳನ್ನು ಕಾಣುವಂತೆ ಮಾಡುತ್ತದೆ. ಇಂದು ಆರಂಭಿಕ ಆಘಾತವನ್ನು ನಿಭಾಯಿಸುವ ಸವಾಲನ್ನು ಎದುರಿಸಿದೆವು. ಆದರೂ ಆಘಾತದಿಂದ ಚೇತರಿಸಲು ಸಾಧ್ಯವಾಗಲಿಲ್ಲ. ಅಂದಹಾಗೆ ಈ ಸೋಲು ತಂಡಕ್ಕೆ ಸಾಕಷ್ಟು ಪಾಠ ಹೇಳಿಕೊಟ್ಟಿದೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ಭಾರತ ಮಹಿಳಾ ಹಾಕಿ ತಂಡದ ಕೋಚ್‌ ಸೋರ್ಡ್‌ ಮರಿಜಿನ್ ಹೇಳಿದ್ದಾರೆ.

ಇದೇ ವರ್ಷ ಜಪಾನ್‌ನ ಹಿರೋಶಿಮಾದಲ್ಲಿ ನಡೆಯಲಿರುವ ಎಫ್‌ಐಎಚ್‌ ಮಹಿಳಾ ಹಾಕಿ ಫೈನಲ್ಸ್‌ ಟೂರ್ನಿಯ ಪೂರ್ವ ಸಿದ್ಧತೆಗಾಗಿ ಭಾರತ ಮಹಿಳಾ ಹಾಕಿ ತಂಡ ಕೊರಿಯಾ ಪ್ರವಾಸ ಕೈಗೊಂಡಿತ್ತು. ಮೊದಲ ಪಂದ್ಯದಲ್ಲಿ 2-1 ಅಂತರದ ಭರ್ಜರಿ ಜಯ ದಾಖಲಿಸಿದ್ದ ರಾಣಿ ರಾಮ್‌ಪಾಲ್‌ ಪಡೆ, ಎರಡನೇ ಪಂದ್ಯದಲ್ಲೂ ಅದೇ ಫಲಿತಾಂಶವನ್ನು ಮರುಕಳಿಸಿತ್ತು. ಆದರೆ, ಮೂರನೇ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ.

Story first published: Friday, May 24, 2019, 17:30 [IST]
Other articles published on May 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+