ಭಾರತದ ಮಹಿಳಾ ಹಾಕಿ ತಂಡದಿಂದ ಐತಿಹಾಸಿಕ ದಾಖಲೆ
ನವದೆಹಲಿ, ಮಾ.16: ಭಾರತೀಯ ಮಹಿಳಾ ಹಾಕಿ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಹಾಕಿ ವಿಶ್ವ ಲೀಗ್(HWL) ಟೂರ್ನಿಯ ಎರಡನೇ ಸುತ್ತಿನಲ್ಲ್ಲಿ ಬಲಿಷ್ಠ ಪೋಲ್ಯಾಂಡ್ ತಂಡವನ್ನು ಬಗ್ಗು ಬಡಿಡು ವಿಜಯೋತ್ಸವ ಆಚರಿಸಿದೆ.
ಮೇಜರ್ ಧ್ಯಾನ್ ಚಂಡ್ ರಾಷ್ಟ್ರೀಯ ಮೈದಾನದಲ್ಲಿ ನಡೆದಿರುವ ಹಾಕಿ ವಿಶ್ವಲೀಗ್ ಪಂದ್ಯಾವಳಿಯಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಭರ್ಜರಿ ಪ್ರದರ್ಶನ ಹೀಗೆ ಮುಂದುವರೆಸಿದರೆ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಹಾಕಿ ವಿಶ್ವ ಲೀಗ್ ಪಂದ್ಯದಲ್ಲಿ ಪೋಲ್ಯಾಂಡ್ ವಿರುದ್ಧ ಭಾರತದ ವನಿತೆಯರು 1-3 ಅಂತರ ಗೆಲುವು ಸಾಧಿಸಿದರು. ಭಾರತದ ಪರ ವಂದನಾ ಕಟರಿಯಾ(15ನೇ ನಿಮಿಷ), ರಾಣಿ ರಾಮ್ ಪಾಲ್ (44ನೇ ನಿಮಿಷ) ಹಾಗೂ ನಾಯಕಿ ರಿತು ರಾಣಿ(59ನೇ ನಿಮಿಷ) ಗೋಲು ದಾಖಲಿಸಿದರೆ, ಪೋಲ್ಯಾಂಡ್ ಪರ ಏಕೈಕ ಗೋಲು ಒರಿಯಾನಾ ವಾಲಾಸೆಕ್(17ನೇ ನಿಮಿಷ) ರಿಂದ ಬಂದಿತು.
ಹಾಕಿ ವಿಶ್ವ ಲೀಗ್ ನ ಮೂರನೇ ಸುತ್ತಿನಲ್ಲಿ ಟಾಪ್ 6 ಸ್ಥಾನದೊಳಗೆ ಕಾಣಿಸಿಕೊಂಡರೆ ಸುಲಭವಾಗಿ ಬ್ರೆಜಿಲ್ಲಿನ ರಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ 2016ರಲ್ಲಿ ಆಡುವ ಅರ್ಹತೆ ಪಡೆದುಕೊಳ್ಳುತ್ತಾರೆ. ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಅವರು ಶುಭ ಹಾರೈಸಿದ್ದಾರೆ.
ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಲೇಷ್ಯಾ ತಂಡ 3-0 ಗೋಲುಗಳಿಂದ ಥಾಯ್ಲೆಂಡ್ ತಂಡವನ್ನು ಮಣಿಸಿತು. ರಷ್ಯಾ ತಂಡ 9-0 ಗೋಲುಗಳಿಂದ ಕಜಕಸ್ತಾನವನ್ನು ಪರಾಭವಗೊಳಿಸಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
(ಐಎಎನ್ ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications