Hockey: ಮಲೇಷ್ಯಾವನ್ನು 3-0ಯಿಂದ ಮಣಿಸಿದ ಭಾರತದ ವನಿತೆಯರು

ಕೌಲಾಲಂಪುರ್, ಏಪ್ರಿಲ್ 4: ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳೆಯರ ಐದು ಪಂದ್ಯಗಳ ಹಾಕಿ ಸರಣಿಯಲ್ಲಿ ಭಾರತದ ಮಹಿಳಾ ತಂಡ ಆತಿಥೇಯ ಮಲೇಷ್ಯಾವನ್ನು 3-0ಯಿಂದ ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡಿದೆ. ಗುರುವಾರ (ಏಪ್ರಿಲ್ 4) ನಡೆದ ಉದ್ಘಾಟನಾ ಪಂದ್ಯದಲ್ಲಿ ಭಾರತ ಶುಭಾರಂಭ ಕಂಡಿತು.
ಪ್ರವಾಸಿ ಭಾರತ ಪರ 17ನೇ ನಿಮಿಷದಲ್ಲಿ ವಂದನಾ ಮೊದಲ ಗೋಲ್ ದಾಖಲಿಸಿ ತಂಡಕ್ಕೆ ಹುಮ್ಮಸ್ಸು ತುಂಬಿದರು. ಅನಂತರ 38ನೇ ನಿಮಿಷದಲ್ಲಿ ಲಾಲ್‌ರೇಮ್ಸಿಯಾಮಿ ದ್ವಿತೀಯ ಗೋಲ್ ಬಾರಿಸಿದರು. ಮತ್ತೆ 60ನೇ ನಿಮಿಷದಲ್ಲಿ ವಂದನಾ 3ನೇ ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.
ಪಂದ್ಯ ಆರಂಭಗೊಂಡ 3ನೇ ನಿಮಿಷದಲ್ಲಿ ಮಲೇಷ್ಯಾಕ್ಕೆ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವ ಅವಕಾಶವಿತ್ತು. ಆದರೆ ಭಾರತದ ಅನುಭವಿ ಆಟಗಾರ್ತಿ ಸವಿತಾ ಅವರು ಮೇಷ್ಯಾದ ಗೋಲ್ ಪ್ರಯತ್ನವನ್ನು ಹಿಮ್ಮೆಟ್ಟಿಸಿದರು. ಇನ್ನುಳಿದ ಪಂದ್ಯಗಳಲ್ಲೂ ಭಾರತ ಪಾರಮ್ಯ ಮೆರೆಯುವ ನಿರೀಕ್ಷೆಯಿದೆ.
Story first published: Thursday, April 4, 2019, 23:58 [IST]
Other articles published on Apr 4, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications