For Quick Alerts
ALLOW NOTIFICATIONS  
For Daily Alerts

ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಡಿಸೆಂಬರ್‌ಗೆ ಮುಂದೂಡಿಕೆ

Hockey: Mens Asian Champions Trophy postponed to December

ನವದೆಹಲಿ: ಪುರುಷರ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಮುಂದೂಡಲ್ಪಟ್ಟಿದೆ. ಬಾಂಗ್ಲಾದೇಶದ ಧಾಕಾದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಈ ಟೂರ್ನಿ ನಡೆಯಬೇಕಿತ್ತು. ಆದರೆ ಅಕ್ಟೋಬರ್‌ಗೆ ಬದಲಾಗಿ ಡಿಸೆಂಬರ್‌ನಲ್ಲಿ ಟೂರ್ನಿ ನಡೆಯಲಿದೆ. ಬಾಂಗ್ಲಾದೇಶ ಹಾಕಿ ಫೆಡರೇಶನ್ (ಬಿಎಚ್‌ಎಫ್‌) ಶುಕ್ರವಾರ (ಸೆಪ್ಟೆಂಬರ್‌ 17) ಈ ಸಂಗತಿ ತಿಳಿಸಿದೆ (ಸಾಂದರ್ಭಿಕ ಚಿತ್ರ).

"ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಡಿಸೆಂಬರ್‌ ತಿಂಗಳಲ್ಲಿ ನಡೆಯಲಿದೆ. ಡಿಸೆಂಬರ್ 12ರಿಂದ ಟೂರ್ನಿ ಆರಂಭಗೊಳ್ಳಲಿದೆ," ಎಂದು ಬಾಂಗ್ಲಾದೇಶ ಹಾಕಿ ಫೆಡರೇಶನ್ ಟೈಮ್ಸ್ ಆಫ್‌ ಇಂಡಿಯಾಗೆ ತಿಳಿಸಿದೆ. ಆರಂಭದಲ್ಲಿ ಈ ಟೂರ್ನಿ ಅಕ್ಟೋಬರ್‌ 1-9ರ ವರೆಗೆ ನಡೆಸಲು ವೇಳಾಪಟ್ಟಿ ಸಿದ್ಧಗೊಂಡಿತ್ತು.

ಕೋವಿಡ್-19 ಪಿಡುಗಿನ ಭೀತಿ, ಪ್ರಯಾಣ ನಿರ್ಬಂಧ, ಕ್ವಾರಂಟೈನ್ ಸೌಲಭ್ಯಗಳು ಇತ್ಯಾದಿ ಅನೇಕ ವಿಚಾರಗಳಿಗಾಗಿ ಉದ್ದೇಶಿತ ಹಾಕಿ ಟೂರ್ನಿ ಮುಂದೂಡಲ್ಪಟ್ಟಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಟೈಮ್ಸ್ ಆಫ್ ಇಂಡಿಯಾ ಎಷ್ಯನ್ ಹಾಕಿ ಫೆಡರೇಶನ್ ಸಿಇಒ ತಯ್ಯಬ್ ಇಕ್ರಮ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಈ ಬೆಳವಣಿಗೆಯ ಪ್ರಕಾರ ಮಹಿಳಾ ವಿಭಾಗದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಕೂಡ ಮುಂದೂಡಲ್ಪಡುವ ನಿರೀಕ್ಷೆಯಿದೆ. ಆದರೆ ಈ ಹಂತದಲ್ಲಿ ಮಹಿಳಾ ಟೂರ್ನಿ ಅಧಿಕೃತವಾಗಿ ಮುಂಡೂಡಲ್ಪಟ್ಟಿಲ್ಲ. ಮಹಿಳಾ ಟೂರ್ನಿ ಅಕ್ಟೋಬರ್‌ 24ರಿಂದ 31ರ ವರೆಗೆ ದಕ್ಷಿಣ ಕೊರಿಯಾದ ಡೋಂಗ್ಹೇಯಲ್ಲಿ ನಡೆಯುವುದರಲ್ಲಿದೆ.

Story first published: Friday, September 17, 2021, 15:49 [IST]
Other articles published on Sep 17, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+