ಅಂತಾರಾಷ್ಟ್ರೀಯ ಹಾಕಿ ಅಂಪಾಯರ್ ಮುಂಡಂಡ ಅನುಪಮ ಕೊರೊನಾ ವೈರಸ್‌ಗೆ ಬಲಿ

ಮಾಜಿ ಅಂತಾರಾಷ್ಟ್ರೀಯ ಹಾಕಿ ಆಟಗಾರ್ತಿ ಹಾಗೂ ಅಂಪಾಯರ್ ಮುಂಡಂಡ ಅನುಪಮಾ ಪುಚ್ಚಿಮಂಡ ಕೊರೊನಾ ವೈರಸ್‌ಗೆ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ವಾರದ ಹಿಂದೆ ಅವರಿಗೆ ಕೊರೊನಾ ಸೋಕು ದೃಢಪಟ್ಟಿದ್ದು ಬೆಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಕೊಡಗಿನ ಏಕೈಕ ಮಹಿಳಾ ಅಂತಾರಾಷ್ಟ್ರೀಯ ಅಂಪಾಯರ್ ಎಂಬ ಹೆಗ್ಗಳಿಕೆಯನ್ನು ಮುಂಡಂಡ ಅನುಪಮಾ ಅವರು ಹೊಂದಿದ್ದರು. ಅನೇಕ ಅಂತಾರಾಷ್ಟ್ರೀಯ ಹಾಕಿ ಟೂರ್ನಿಗಳಲ್ಲಿ ಅನುಪಮಾ ಅವರು ಅಂಪಾಯರ್ ಆಗಿದ್ದು 85ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪಾಯರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
1980ರಲ್ಲಿ ಜನಿಸಿದ ಮುಂಡಂಡ ಅನುಪಮಾ ಪುಚ್ಚಿಮಂಡ ಹಾಕಿಯತ್ತ ಹೆಚ್ಚಿನ ಒಲವನ್ನು ಹೊಂದಿದ್ದರು. ಕೊಡವ ಕುಟುಂಬಗಳ ನಡುವಿನ ಹಾಕಿ ಸಂದರ್ಭದಲ್ಲಿ ಪುರುಷರ ಜೊತೆಗೆ ಆಟವನ್ನೂ ಆಡಿದ್ದರು. ಬಳಿಕ ಕ್ರೀಡಾ ಶಾಲೆಗೆ ಆಯ್ಕೆಯಾದ ಅವರು ಹಾಕಿಯತ್ತ ಮತ್ತಷ್ಟು ಗಮನಹರಿಸಿ ತರಬೇತಿ ಪಡೆದುಕೊಂಡಿದ್ದರು. ನಂತರ ಕರ್ನಾಟಕ ಹಾಗು ಭಾರತ ಮಹಿಳಾ ತಂಡದ ಪರವಾಗಿ ಆಡಿದ್ದರು. ನಂತರ ಮಹಿಳಾ ತೀರ್ಪುಗಾರ್ತಿಯಾಗಿ ಖ್ಯಾತಿ ಪಡೆದರು.
ಮೊದಲಿಗೆ ಭಾರತ ಹಾಕಿ ಸಂಸ್ಥೆಯ ತೀರ್ಪುಗಾರರಾಗಿ ಮಾನ್ಯತೆ ಪಡೆದ ಮುಂಡಂಡ ಅನುಪಮಾ ಪುಚ್ಚಿಮಂಡ ಅವರು ನಂತರ ಅಂತಾರಾಷ್ಟ್ರೀಯ ಅಂಪಾಯರ್ ಆಗಿ ಮಾನ್ಯತೆಯನ್ನು ಪಡೆದುಕೊಂಡರು. 2004ರಲ್ಲಿ ಜಪಾನ್‌ನಲ್ಲಿ ನಡೆದ ಚತುಷ್ಕೋನ ಸರಣಿಯಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಂಪಾಯರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ 35ಕ್ಕೂ ಅಧಿಕ ದೇಶಗಳಲ್ಲಿ 85ಕ್ಕೂ ಅಧಿಕ ಪಂದ್ಯಗಳಲ್ಲಿ ಮುಂಡಂಡ ಅನುಪಮಾ ಪುಚ್ಚಿಮಂಡ ಅಂಪಾಯರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications