Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಹಾಕಿ ಸೆಮೀಸ್: ಕ್ವಾರ್ಟರ್ ಫೈನಲ್ ನಲ್ಲಿ ಸೋತ ಭಾರತ

ಲಂಡನ್, ಜೂನ್ 22: ಇಲ್ಲಿ ನಡೆಯುತ್ತಿರುವ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಂಡು ಪೋಡಿಯಂ ಸ್ಥಾನ ಪಡೆಯುವ ಅವಕಾಶದಿಂದ ವಂಚಿತವಾಗಿದೆ.

ಗುರುವಾರ ನಡೆದ ಈ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ, ಮಲೇಷ್ಯಾ ತಂಡದ ವಿರುದ್ಧ 2-3 ಗೋಲುಗಳ ಅಂತರದಲ್ಲಿ ಸೋಲು ಕಂಡಿತು.

ಪಂದ್ಯದ 19ನೇ ನಿಮಿಷದಲ್ಲಿ ಮಲೇಷ್ಯಾ ತಂಡ ತನ್ನ ಮೊದಲ ಗೋಲು ದಾಖಲಿಸಿತು. ಈ ಗೋಲು ದಾಖಲಿಸಿದ್ದು, ರಾಝೀ ರಹೀಂ. ಆನಂತರ, 20ನೇ ನಿಮಿಷದಲ್ಲಿ ಮಲೇಷ್ಯಾ ತಂಡವು ಟೆಂಗ್ಕು ತಜಾವುದ್ದೀನ್ ಅವರ ಸಹಾಯದಿಂದ 2ನೇ ಗೋಲು ದಾಖಲಿಸಿತು.

Hockey World League Semi-final: India lose 2-3 Malaysia

ಆನಂತರ, ಸೆಡ್ಡು ಹೊಡೆದ ಭಾರತ, 24ನೇ ನಿಮಿಷದಲ್ಲಿ ರಮಣದೀಪ್ ಅವರ ವೀರೋಚಿತ ಆಟದಿಂದಾಗಿ ತನ್ನ ಗೋಲಿನ ಖಾತೆ ತೆರೆಯಿತು. ಆನಂತರ, ಇದೇ ರಮಣಸಿಂಗ್ ಅವರು, 26ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದರು.

ಹೀಗೆ, ಪಂದ್ಯದ ಮೊದಲಾರ್ಧದ ಮುಗಿಯುವ ಹೊತ್ತಿಗೆ ಭಾರತವು ತನ್ನ ಚಾಣಾಕ್ಷತನದಿಂದ 2-2ರ ಸಮಬಲ ಸಾಧಿಸಿತು.

ಆದರೆ, ಪಂದ್ಯದ ದ್ವಿತೀಯಾರ್ಧದಲ್ಲಿ ಭಾರತಕ್ಕೆ ಸಡ್ಡು ಹೊಡೆದ ಮಲೇಷ್ಯಾ 48ನೇ ನಿಮಿಷದಲ್ಲಿ ರಾಝೀ ರಹೀಂ ಅವರು ತಮ್ಮ ತಂಡಕ್ಕೆ ಮೂರನೇ ಹಾಗೂ ನಿರ್ಣಾಯಕ ಗೋಲು ತಂದಿತ್ತರು.

ಆನಂತರ ಮುಂದುವರಿದ ಪಂದ್ಯದಲ್ಲಿ ಭಾರತದಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಹಾಗಾಗಿ, ಭಾರತ ತಂಡವು ಈ ಪಂದ್ಯದಲ್ಲಿ 3- 2 ಗೋಲುಗಳ ಅಂತರದಲ್ಲಿ ಸೋಲು ಕಾಣಬೇಕಾಯಿತು.

Story first published: Wednesday, January 3, 2018, 10:15 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+